Advertisements

ಕಾಶ್ಮೀರ ಸಂಘರ್ಷಕ್ಕೆ ಮೋದಿಯೇ ಕಾರಣ : ಮಾಜಿ ಪ್ರಧಾನಿ ದೇವೇಗೌಡ

ನಾನು ಪ್ರಧಾನಿಯಾಗಿದ್ದ ವೇಳೆ ಕಾಶ್ಮೀರದಲ್ಲಿ ಒಂದೇ ಒಂದು ದುರ್ಘಟನೆ ನಡೆಯದಂತೆ ಚುನಾವಣೆ ನಡೆಸಿದ್ದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಕಾಶ್ಮೀರದಲ್ಲಿ ಸಂಘರ್ಷ ನಡೆಯಲು ಮೋದಿ ಸರ್ಕಾರವೇ ಕಾರಣ ಎಂದು ಆರೋಪಿಸಿದರು.

ನಾನು ಪ್ರಧಾನಿಯಾಗಿದ್ದ ವೇಳೆ 5 ಬಾರಿ ಕಾಶ್ಮೀರಕ್ಕೆ ಹೋಗಿದ್ದೆ. ಒಂದೇ ಒಂದು ದುರ್ಘಟನೆಯಾಗದಂತೆ ಚುನಾವಣೆಯನ್ನೂ ನಡೆಸಿದ್ದೆ. ಆದರೆ ಮೋದಿ ಪ್ರಧಾನಿಯಾದ ಬಳಿಕ ಸುಮಾರು 3 ವರ್ಷಗಳ ಕಾಲ ಕಾಶ್ಮೀರದಲ್ಲಿ ಕಾಶ್ಮೀರದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ ಕಾರಣದಿಂದ ಅಲ್ಲಿನ ಬೀದಿ ಬೀದಿಗಳಲ್ಲಿ ಸಂಘರ್ಷ ನಡೆಸಲು ಕಾರಣವಾಯ್ತು ಎಂದರು.

ಮೋದಿ ಮಾತು ಪ್ರಾರಂಭಿಸಿದರೆ ಸಾಕು ತಾನು, ತನ್ನ ಸರ್ಕಾರ ಮಾಡಿದ್ದು ಅಂತಾರೆ, ವಾಜಪೇಯಿ ಸರ್ಕಾರ ಇದ್ದಾಗ  ಕಾರ್ಗಿಲ್ ಯುದ್ದ ಗೆಲ್ಲಲಿಲ್ಲವೇ..? ದೇಶ ಪ್ರೇಮ ಕೇವಲ ಬಿಜೆಪಿಯವರಿಗೆ ಮಾತ್ರ ಇರುವುದಲ್ಲ.ಪ್ರತಿಯೊಬ್ಬರಿಗೂ ಇಜೆ. ಅದನ್ನು ಮೋದಿಯಿಂದ ಕಲಿಯಬೇಕಾಗಿಲ್ಲ ಎಂದರು.

Advertisements

One Comment on “ಕಾಶ್ಮೀರ ಸಂಘರ್ಷಕ್ಕೆ ಮೋದಿಯೇ ಕಾರಣ : ಮಾಜಿ ಪ್ರಧಾನಿ ದೇವೇಗೌಡ

  1. Pingback: ಕರ್ನಾಟಕವೇನು…ದೇವೇಗೌಡರ ಅಪ್ಪನ ಮನೆ ಆಸ್ತೀನಾ..?ಪ್ರೀತಂಗೌಡರ ಪ್ರಶ್ನೆ ಉತ್ತರವೆಲ್ಲಿದೆ… – torrentspree

Leave a Reply

%d bloggers like this: