Advertisements

ದೇವೇಗೌಡರಿಗೆ ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರ ಬಗ್ಗೆ ಚಿಂತೆ


ಮಾಜಿ ಪ್ರಧಾನಿ ದೇವೇಗೌಡರು ಮಕ್ಕಳು, ಮೊಮ್ಮಕಳು ಹಾಗೂ ಸೊಸೆಯಂದಿರ ಬಗ್ಗೆ ಮಾತ್ರ ಚಿಂತೆ ಮಾಡುತ್ತಿದ್ದಾರೆ. ಹಾಗಾದರೆ, ಸೆಕೆಂಡ್ ಲೀಡರ್ಸ್ ಕಥೆ ಏನ್ರಿ ಸ್ವಾಮಿ ಎಂದು ಕಾಂಗ್ರೆಸ್ ಮುಖಂಡ ಮಾಜಿ ಎ. ಮಂಜು ಪ್ರಶ್ನಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ದೇವೇಗೌಡ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಸುಮಲತಾ ಅಂಬರೀಶ್ ಪರ ಭರ್ಜರಿ ಬ್ಯಾಟ್ ಬೀಸಿದ ಮಂಜು ಜೆಡಿಎಸ್‌ನವರು ಮಂಡ್ಯ ಕ್ಷೇತ್ರವನ್ನು ಸುಮಲತಾ ಅಂಬರೀಶ್ ಅವರಿಗೆ ಬಿಟ್ಟುಕೊಡಬೇಕು. ಅದರಂತೆ, ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಬೇಕು. ಹಾಸನ ಹಾಗೂ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ಒಳ್ಳೆಯದು. ಇಲ್ಲವಾದರೆ ಕೊನೆಯವರೆಗೂ ಹೋರಾಟ ಮಾಡುತ್ತೇನೆ. ಈಗಲೂ ಮನಸ್ಸು ಬದಲಾವಣೆ ಮಾಡಿದರೆ, ಗೌಡರ ಕುಟುಂಬಕ್ಕೆ ಒಳ್ಳೆಯದು ಎಂದು ಎ.ಮಂಜು ಎಚ್ಚರಿಕೆ ಬೇರೆ ಕೊಟ್ಟಿದ್ದಾರೆ.

Advertisements

One Comment on “ದೇವೇಗೌಡರಿಗೆ ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರ ಬಗ್ಗೆ ಚಿಂತೆ

  1. Pingback: ಕರ್ನಾಟಕವೇನು…ದೇವೇಗೌಡರ ಅಪ್ಪನ ಮನೆ ಆಸ್ತೀನಾ..?ಪ್ರೀತಂಗೌಡರ ಪ್ರಶ್ನೆ ಉತ್ತರವೆಲ್ಲಿದೆ… – torrentspree

Leave a Reply

%d bloggers like this: