Advertisements

ದೇವೇಗೌಡ ಅವರು ಯು ಟರ್ನ್ ರಾಜಕಾರಣಿಗಳಲ್ಲಿ ಮೊದಲಿಗ : ಎ.ಮಂಜು

ದೇವೇಗೌಡ ಅವರು ಯು ಟರ್ನ್ ರಾಜಕಾರಣಿಗಳಲ್ಲಿ ಮೊದಲಿಗರಾಗಿದ್ದು,  ಐದು ಬಾರಿ ಸ್ಪರ್ಧೆ ಮಾಡಲ್ಲ ಎಂದು ಹೇಳಿ ಮತ್ತೆ ಮತ್ತೆ ಮಾಡಿದ್ದಾರೆ. ಆದ್ದರಿಂದ ಈ ಬಾರಿಯೂ ಅವರು ಸ್ಪರ್ಧೆ ಮಾಡುತ್ತಾರೆಯೇ ಎಂದು ಕಾದು ನೋಡಬೇಕು. ದೇವೇಗೌಡರನ್ನು ಬಿಟ್ಟು ಬೇರೆ ಯಾರೇ ಹಾಸನದಲ್ಲಿ ಸ್ಪರ್ಧೆ ಮಾಡಿದರೆ ನಮ್ಮ ವಿರೋಧ ಇರುತ್ತದೆ ಎಂದು ಮಾಜಿ ಸಚಿವ ಎ ಮಂಜು ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು ದೇಶದಲ್ಲಿ ಇಂದಿರಾ ಗಾಂಧಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರನ್ನ ವಿರೋಧ ಮಾಡುತ್ತ ದೇವೇಗೌಡ ರಾಜಕೀಯವಾಗಿ ಬೆಳೆದಿದ್ದಾರೆ. ಆದರೆ ಅವರೇ ಇಂದು ತಮ್ಮ ಕುಟುಂಬದವರಿಗೆ ಟಿಕೆಟ್ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮೈತ್ರಿ ಧರ್ಮ ಪ್ರಕಾರ ಹಾಸನ ಹಾಗೂ ಮಂಡ್ಯ ಎರಡರಲ್ಲಿ ಒಂದು ನಮಗೆ ಕೊಡಬೇಕು. ಆದರೆ ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಆಗದೆ ಸಚಿವ ಸಾರಾ ಮಹೇಶ್ ಮಂಡ್ಯಕ್ಕೆ  ಅಭ್ಯರ್ಥಿ ಘೋಷಿಸಿರುವುದು ತಪ್ಪು.

ಇದೇ ವೇಳೆ ಮಂಡ್ಯ ಕ್ಷೇತ್ರವನ್ನು ಅಂಬರೀಶ್ ಕುಟುಂಬಕ್ಕೆ ಬಿಟ್ಟು ಕೊಡಲು ಒತ್ತಾಯ ಮಾಡುತ್ತೇವೆ. ಸುಮಲತಾ ಅವರೇ ಅಭ್ಯರ್ಥಿ ಮಾಡಬೇಕು ಎಂಬುವುದು ನಮ್ಮ ಒತ್ತಾಯ. ನಾನು ಹಾಸನ ಬಿಟ್ಟು ಎಲ್ಲಿಯೂ ಹೋಗಲ್ಲ. ದೇವೇಗೌಡರ ಸ್ಪರ್ಧೆ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

Advertisements

Leave a Reply

%d bloggers like this: