Advertisements

ಟ್ವೀಟರ್ ಮತ್ತೆ ಉಗಿಸಿಕೊಂಡ ರಮ್ಯ : ಒರೆಸಿಕೊಂಡು ಮತ್ತೆ ಬರ್ತಾಳೆ ನೋಡ್ತಾ ಇರಿ

ರಮ್ಯ ಅನ್ನುವ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಉಗಿಸಿಕೊಳ್ಳುವುದಂದ್ರೆ ಪಂಚ ಪ್ರಾಣ ಅನ್ನಿಸುತ್ತದೆ. ಜನ ಛೀ..ಥೂ ಸಾಮಾಜಿಕ ಜಾಲತಾಣವೇ ಗಬ್ಬೆದ್ದು ಹೋಗುತ್ತದೆ. ಸೆಗಣಿ ಹಾಕಿ ಗುಡಿಸಿದ್ರೆ ಹೋಗದಷ್ಟು ಗಲೀಜು ಮಾಡಿಕೊಂಡ್ರು, ಈಕೆಗೆ ಅರ್ಥವಾಗುವುದೇ ಇಲ್ಲ.

ರಮ್ಯ ಮಾಡಿದ ಒಂದೇ ಒಂದು ಟ್ವೀಟ್ ಗೆ ಜನ ಬೇಷ್ ಅಂದದ್ದು ಇತಿಹಾಸದಲ್ಲೇ ಇಲ್ಲ. ಅಂತಹ ರಂಪಾಟ ರಾಣಿ ಈಕೆ.

ಪುಲ್ವಾಮ ಉಗ್ರದಾಳಿ, ಸರ್ಜಿಕಲ್ ಸ್ಟ್ರೈಕ್, ಪೈಲಟ್ ಅಭಿನಂದನ್ ಪ್ರಕರಣದಲ್ಲಿ ಟ್ವೀಟ್ ಮಾಡಿ ಜನರಿಂದ ಉಗಿಸಿಕೊಂಡಿದ್ದ ರಮ್ಯಾ ಮತ್ತೆ  ಸುಮ್ಮನೆ ಕುಳಿತಿಲ್ಲ. ಒರೆಸಿಕೊಂಡು ಮತ್ತೆ ಹಾಜರಾಗಿದ್ದಾರೆ. 

ಸೋಮವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕಿ ರಮ್ಯಾ, ನಮ್ಮ ಸೇನೆಯ ಮೇಲೆ ನಮಗೆ ನಂಬಿಕೆಯಿದೆ. ಆದರೆ ನಿಮ್ಮ ಮೇಲೆ ನಂಬಿಕೆ ಇಲ್ಲ. ಸೇನೆ ಯಾವತ್ತೂ ದಾಖಲೆ ಸಹಿತ ಮಾತನಾಡುತ್ತದೆ, ಆದರೆ ನೀವು ಮಾತ್ರ ದಾಖಲೆಯಿಲ್ಲದೆ ಸದಾ ಸುಳ್ಳು ಹೇಳುತ್ತೀರಿ ಎಂದು ರಮ್ಯಾ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ. 

ದುರಂತ ಅಂದ್ರೆ ಮಧ್ಯಾಹ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಾಯುಸೇನಾ ಮುಖ್ಯಸ್ಥರು ನಾವು ದಾಳಿ ಮಾಡಿದ್ದು ನಿಜ, ಗುರಿಯನ್ನು ಮುಗಿಸಿಯೇ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.

ಮಾತ್ರವಲ್ಲದೆ ನಾವು ಕಾಡಿನೊಳಗೆ ಬಾಂಬ್ ಹಾಕಿ ಬಂದಿಲ್ಲ ಅನ್ನುವ ಮೂಲಕ ಪರೋಕ್ಷವಾಗಿ ಸಿಧು ಎಂಬ ಪಾಕ್ ಪ್ರೇಮಿಗೆ ಉತ್ತರವನ್ನೂ ಕೊಟ್ಟಿದ್ದರು. ಆದರೆ ರಮ್ಯ ಮೇಡಂ ಮಾತ್ರ ಹಿರಿಯಕ್ಕ ಚಾಳಿ ಮನೆ ಮಂದಿಗೆಲ್ಲ ಅನ್ನುವಂತೆ ಸಾಕ್ಷಿ ಕೇಳಿದ್ದಾರೆ.

ಉಗ್ರರ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಯನ್ನೇ ಸಂಶಯಿಸುತ್ತೀರಿ, ನಿಮಗೆ ಅವರ ಮೇಲೆ ನಂಬಿಕೆಯಿಲ್ಲವೇ? ನಮ್ಮ ಸೇನೆಯ ಬಗ್ಗೆ ಹೆಮ್ಮೆಯಿಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಈಕೆ ಸಾಕ್ಷಿ ಕೇಳಿದ್ದಾಳೆ.

ಆದರೆ ದೇಶಾಭಿಮಾನಿಗಳು ಸುಮ್ಮನಿರಬೇಕಲ್ಲ.ರಮ್ಯ ಬೆವರಿಳಿಸಿದ್ದಾರೆ. ಆದರೆ ರಮ್ಯ ಎಂಬ ಮಹಾನ್ ನಾಯಕಿಗೆ ಅವೆಲ್ಲಾ ದೇವಾರಣೆಗೂ ಅರ್ಥವಾಗುವುದಿಲ್ಲ.

Advertisements

Leave a Reply

%d bloggers like this: