Advertisements

ತವರಿಗೆ ಮಹಾವೀರ : ಎಂಟೆದೆ ಭಂಟ ವೀರ ಅಭಿನಂದನ್ ಗೆ ಅದ್ದೂರಿ ಸ್ವಾಗತ

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಇಂದು ರಾತ್ರಿ ಸರಿ ಸುಮಾರು 9.20 ಗಂಟೆಗೆ ವಾಘಾ ಗಡಿ ಮೂಲಕ ತಾಯ್ನಾಡಿಗೆ ವಾಪಸ್​ ಕಳುಹಿಸಿದೆ. ಏರ್​​ ವೈಸ್​​ ಮಾರ್ಷಲ್​​ಗಳಾದ ಆರ್​ಜಿಕೆ ಕಪೂರ್​​ ಮತ್ತು ಶ್ರೀಕುಮಾರ್​​ ಪ್ರಭಾಕರನ್​, ಪೈಲಟ್​​ ಅಭಿನಂದನ್ ಅವರನ್ನು ಸ್ವಾಗತಿಸಿದರು.

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಹಿಂದೂಸ್ತಾನಕ್ಕೆ  ವಾಪಸ್​​ ಕಳುಹಿಸುವುದಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ​​ ಸಂಸತ್ತಿನಲ್ಲಿ ನಿನ್ನೆಯೇ ಹೇಳಿದ್ದರು. ಇಂದು ಮಧ್ಯಾಹ್ನದ ವೇಳೆಗೆ ವಾಘಾ ಬಾರ್ಡರ್ ಮೂಲಕ ಅಭಿನಂದನ್ ಬರಬೇಕಾಗಿತ್ತು. ಆದರೆ ಸುಳ್ಳು ರಾಷ್ಟ್ರ ಸಾವಿರ ನೆಪವೊಡ್ಡಿ ಎರಡು ಬಾರಿ ಈ ಸಮಯವನ್ನು ಮುಂದೂಡಿ, ಕೊನೆಗೂ ರಾತ್ರಿ 9ರ ನಂತರ ಬಿಎಸ್ಎಫ್ ಅಧಿಕಾರಿಗಳಿಗೆ ವರ್ಧಮಾನ್ ಅವರನ್ನು ಹಸ್ತಾಂತರ ಮಾಡಿದ್ದಾರೆ.

ಬಳಿಕ ವಾಯುಪಡೆ ಅಧಿಕಾರಿಗಳು ವರ್ಧಮಾನ್ ಅವರನ್ನು ಅಮೃತಸರಕ್ಕೆ ರಸ್ತೆ ಮಾರ್ಗದಲ್ಲಿ ಕರೆದುಕೊಂಡು ಹೋಗಿದ್ದು, ವಾಯುಸೇನೆಯ ನಿಯಮಗಳ ಪ್ರಕಾರ ಎಲ್ಲಾ ಪ್ರಕ್ರಿಯೆ ಮುಗಿಸಿ,ವರ್ಧಮಾನ್ ದೆಹಲಿಗೆ ವಿಮಾನ ಮೂಲಕ ತೆರಳುತ್ತಾರೆ. ಆದರೆ ಅವರು ದೆಹಲಿಗೆ ಯಾವಾಗ ತೆರಳುತ್ತಾರೆ ಅನ್ನುವುದನ್ನು ಊಹಿಸುವುದು ಕಷ್ಟ.ಅದು 24 ಗಂಟೆಯೂ ಆಗಬಹುದು, 36 ಗಂಟೆಯೂ ಕಳೆಯಬಹುದು. ಅಥವಾ ಅದಕ್ಕಿಂತ ಮುಂಚೆಯೂ ತೆರಳಬಹುದು.

Advertisements

Leave a Reply

%d bloggers like this: