Advertisements

ಭಾರತಕ್ಕೆ ಮರಳಿದ ವೀರ ಪುತ್ರ : ಅಭಿನಂದನ್ ಗೆ ಸ್ವಾಗತ ಕೋರಿದ ರಾಜಕೀಯ ನಾಯಕರು

ಏರ್ ಸರ್ಜಿಕಲ್ ಸ್ಟ್ರೈಕ್ ವೇಳೆ ಪಾಕಿಸ್ತಾನಿ ಸೈನಿಕರರ ವಶದಲ್ಲಿ ಸಿಕ್ಕು ಹಿಂಸೆ ಅನುಭವಿಸಿ ಈಗ ಬಿಡುಗಡೆಯಾಗಿರುವ ಭಾರತದ ವೀರ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ಗೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸಹ ಸ್ವಾಗತ ಕೋರಿದ್ದು, ಅವರ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ಗೆ ಪ್ರಧಾನಿ ಮೋದಿ ಸ್ವಾಗತ ಕೋರಿದ್ದು, ಅವರ ಶೌರ್ಯಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತದೆ ಎಂದು ಟ್ವೀಟ್‌ ಮೂಲಕ ಪ್ರಧಾನಿ ತಿಳಿಸಿದ್ದಾರೆ.

ಸಶಸ್ತ್ರ ಪಡೆಯಲ್ಲಿ ಅವರಿಗೆ ಉತ್ತಮ ಭವಿಷ್ಯವಿರಲಿ ಎಂದು ಟ್ವೀಟ್‌ ಮೂಲಕ ಅಮಿತ್ ಶಾ ಹಾರೈಸಿದ್ದಾರೆ.

ಅಭಿನಂದನ್‌ ಘನತೆ, ಸಮತೋಲನ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದು, ನಮಗೆಲ್ಲಾ ಹೆಮ್ಮೆ ತಂದಿದ್ದಾರೆ ಎಂದು ಟ್ವೀಟ್ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

ಜೈ ಹಿಂದ್ ಎಂದು ಟ್ವೀಟ್‌ ಮಾಡುವ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಭಿನಂದನ್ ಅವರನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ.


ಇನ್ನು ಕೆಲವರ ಟ್ವೀಟ್ ಗಳು ಇಲ್ಲಿವೆ.

ರಾಜ್ಯ ನಾಯಕರು ಕೂಡಾ ಅಭಿನಂದನ್ ಅವರನ್ನು ಅಭಿನಂದಿಸಿದ್ದು, ವೀರ ಯೋಧ ಸಾಹಸವನ್ನು ಕೊಂಡಾಡಿದ್ದಾರೆ.

Advertisements

One Comment on “ಭಾರತಕ್ಕೆ ಮರಳಿದ ವೀರ ಪುತ್ರ : ಅಭಿನಂದನ್ ಗೆ ಸ್ವಾಗತ ಕೋರಿದ ರಾಜಕೀಯ ನಾಯಕರು

  1. Pingback: ಕಾಶ್ಮೀರ ಸಂಘರ್ಷಕ್ಕೆ ಮೋದಿಯೇ ಕಾರಣ : ಮಾಜಿ ಪ್ರಧಾನಿ ದೇವೇಗೌಡ – torrentspree

Leave a Reply

%d bloggers like this: