Advertisements

ಕಿಚ್ಚನ ಕಿವಿ ಮಾತು :ನಿಜವಾದ ಅಭಿಮಾನಿಯಾದರೆ ಈ ರೀತಿ ಮಾಡಬೇಡಿ

ಇತ್ತೀಚೆಗೆ ಚಿತ್ರತಾರೆಯಲ್ಲಿ ಹುಚ್ಚು ಅಭಿಮಾನಿಗಳು ಸಿಕ್ಕಾಪಟ್ಟೆ ಮಂದಿ ಹುಟ್ಟಿಕೊಳ್ಳುತ್ತಿದ್ದಾರೆ. ಹಿಂದೊಂದು ಕಾಲವಿತ್ತು ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ನೋಡಿ ಬದಲಾದ ಅನೇಕ ಅಭಿಮಾನಿಗಳಿದ್ದರು. ಮಾತ್ರವಲ್ಲದೆ ಅವರ ಸಮಕಾಲೀನ ನಟರ ನಡೆ ನುಡಿಗಳನ್ನು ನೋಡಿ ಅದೇ ಹಾದಿಯಲ್ಲಿ ನಡೆದವರಿದ್ದರು.

ಆದರೆ ಈಗ ಡಿಜಿಟಲ್ ಜಮಾನ. ಸ್ಟಾರ್ ಗಳೂ ಬದಲಾಗಿದ್ದಾರೆ, ಅಭಿಮಾನಿಗಳು ಬದಲಾಗಿದ್ದಾರೆ.

ಇತ್ತೀಚೆಗೆ ನಟ ಯಶ್‌ ಹುಟ್ಟಹಬ್ಬ ಆಚರಣೆ ಮಾಡಿಕೊಳ್ಳಲಿಲ್ಲ ಎಂಬ ಸಣ್ಣ ವಿಷಯಕ್ಕೇ ಬೇಸತ್ತ ಅಂಧಾಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಸುದೀಪ್ ಮನೆ ಬಾಗಿಲಿಗೆ ಬಂದವನೊಬ್ಬ ಕಣ್ಣೀರು ಹಾಕಿ ಹೋಗಿದ್ದ.

ಇದಕ್ಕೆ ವ್ಯತಿರಿಕ್ತ ಅನ್ನುವಂತೆ ಸುದೀಪ್, ದರ್ಶನ್ ಅವರೆಲ್ಲಾ ನಾವು ಹುಟ್ಟು ಹಬ್ಬ ಆಚರಿಸೋದಿಲ್ಲ, ನೀವು ಆಚರಿಸಬೇಡಿ, ಅದರ ವೆಚ್ಚವನ್ನು ಯಾವುದಾದರೂ ಸಂಸ್ಥೆಗೆ ದಾನ ಮಾಡಿ. ಕೈಲಾಗದವರಿಗೆ ಸಹಾಯ ಮಾಡಿ ಅಂದಾಗ ಸಾಗರೋಪಾದಿಯಲ್ಲಿ ಬಂದ ಅಭಿಮಾನಿಗಳು ಸಹಾಯದ ಅಭಿಯಾನಕ್ಕೆ ಕೈ ಜೋಡಿಸಿದ್ದರು.

ಆದರೂ ಕೆಲವೊಂದು ಅಭಿಮಾನಿಗಳ ಹುಚ್ಚಾಟ ಇನ್ನೂ ನಿಂತಿಲ್ಲ. ಜೀವನ ಸಾಧಿಸುವುದು ಬಹಳಷ್ಟಿದೆ ಅನ್ನುವುದನ್ನು ಮರೆತಿರುವ ಹುಚ್ಚು ಅಭಿಮಾನಿಗಳು ಚಿತ್ರ ವಿಚಿತ್ರವಾಗಿ ಆಡುತ್ತಿದ್ದಾರೆ.

ಇತ್ತೀಚೆಗೆ ಕಿಚ್ಚ ಸುದೀಪ್‌ ಅಭಿಮಾನಿಯೊಬ್ಬರು ರಕ್ತದಲ್ಲಿ ತಮ್ಮ ನೆಚ್ಚಿನ ನಟನಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಕಿಚ್ಚ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ

ಸೌಮ್ಯ ಎಂಬ ಅಭಿಮಾನಿ ರಕ್ತದಲ್ಲಿ ತನ್ನ ನೆಚ್ಚಿನ ನಟನಿಗೆ ಭಾವುಕತೆಯಿಂದ ಬರೆದಿದ್ದ ಪತ್ರವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದನ್ನು ಗಮನಿಸಿದ ಸುದೀಪ್‌ ಬೇಸರ ವ್ಯಕ್ತಪಡಿಸಿರುವುದರ ಜೊತೆಗೆ ಮುಂದೆ ಹೀಗೆ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ. 

‘ನಮಸ್ತೆ ಸುದೀಪಣ್ಣ ನನ್ನ ಹೆಸರು ಸೌಮ್ಯ. ನನಗೆ ತಂದೆ ಇಲ್ಲ, ತೀರಿಕೊಂಡಿದ್ದಾರೆ. ನಿಮ್ಮ ಭೇಟಿಗೆ ತುಂಬಾ ಪ್ರಯತ್ನ ಪಟ್ಟಿದ್ದೀನಿ. ಆದರೆ ಸಾಧ್ಯವಾಗಲಿಲ್ಲ, ನಿರಾಸೆ ನೋವು ಜಾಸ್ತಿಯಾಗಿದೆ. ಅದಕ್ಕಾಗಿಯೇ ರಕ್ತದಲ್ಲಿ ಪತ್ರವನ್ನು ಬರೆದಿದ್ದೇನೆ. ಇದು ನನ್ನ ಕೊನೆಯ ಪ್ರಯತ್ನ. ಎರಡು ದಿನದೊಳಗೆ ಪ್ರತಿಕ್ರಿಯಿಸಿ’ ಎಂದು ಸೌಮ್ಯ ಪತ್ರ ಬರೆದಿದ್ದರು. 

ಅದಕ್ಕೆ ನಟ ಸುದೀಪ್‌ ಪ್ರತಿಕ್ರಿಯಿಸಿದ್ದು. ‘ನನಗೆ ನೀವು ನನ್ನ ಅಭಿಮಾನಿಯಂದು ಖುಷಿಯಾಯಿತು. ಆದರೆ ಅದಕ್ಕಾಗಿ ರಕ್ತದಲ್ಲಿ ಪತ್ರ ಬರೆದಿರುವುದು ನನಗೆ ಬೇಸರ ತಂದಿದೆ. ಈ ಪತ್ರವನ್ನು ಬರೆದಿರುವುದರ ಹಿಂದಿನ ನೋವು ನನಗೆ ಅರ್ಥವಾಗಿದೆ. ಆದಷ್ಟು ಬೇಗ ನಿಮ್ಮನ್ನು ಭೇಟಿ ಮಾಡುತ್ತೇನೆ. ಆದರೆ ಇನ್ನು ಮುಂದೆ ಬೇರೆ ಯಾರು ಈ ರೀತಿಯಾಗಿ ಹುಚ್ಚು ರೀತಿಯಾಗಿ ವರ್ತಿಸಬೇಡಿ. ನಿಜವಾದ ಅಭಿಮಾನಿಯಾದರೆ ಈ ರೀತಿ ಮಾಡಬೇಡಿ’ ಎಂದು ಬುದ್ಧಿಮಾತು ಹೇಳಿದ್ದಾರೆ.

 ನಿಜ ಕೂಡಾ ಹೀಗೆ ಹುಚ್ಚಾಟ ತೋರುವ ಮಂದಿ ನಿಜವಾದ ಅಭಿಮಾನಿಯಾಗಿರಲು ಸಾಧ್ಯವೇ ಇಲ್ಲ.

Advertisements

Leave a Reply

%d bloggers like this: