Advertisements

ರಮ್ಯ ಮೇಡಂ, ಮೋದಿ ನಿದ್ರಿಸುತ್ತಿಲ್ಲ… ಅಭಿನಂದನ್ ನಾಳೆ ಬರ್ತಾರೆ.. ಸುದ್ದಿ ಗೊತ್ತಾಯ್ತ…?

ಫೇಕ್ ಅಕೌಂಟ್ ಗಳನ್ನು ಕ್ರಿಯೇಟ್ ಮಾಡುವುದು ಹೇಗೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿಕೊಡಲು ಹೋಗಿ ಸುದ್ದಿಯಾಗಿದ್ದ ರಮ್ಯ ಮೇಡಂ…ಸ್ವಾರಿ..ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯ ನಿನ್ನೆ ಮತ್ತೆ ಸುದ್ದಿಯಾಗಿದ್ದರು.

ಪುಲ್ವಾಮ ದಾಳಿ, ಏರ್ ಸ್ಟ್ರೈಕ್ ಸಂದರ್ಭದಲ್ಲಿ ಸೈಲೆಂಟ್ ಆಗಿದ್ದ ಮೇಡಂ, ಬುಧವಾರ ಪಾಕ್ ವಿಮಾನವೊಂದನ್ನು ಭಾರತೀಯ ವಾಯು ಪಡೆ ಹೊಡೆದುರಿಳಿಸಿದ ಬೆನ್ನಲ್ಲೇ ಎಚ್ಚರವಾಗಿದ್ದರು.

ನೀವು ನಿದ್ರೆ ಮಾಡ್ತೀರೋ ಇಲ್ವೋ..ಅಭಿನಂದನ್ ಅವರನ್ನು ಕರೆ ತನ್ನಿ ಎಂದು ಪ್ರಧಾನಿ ಮೋದಿ ವಿರುದ್ಧ ಸರಣಿ ಟ್ವೀಟ್ ಮಾಡಿದ್ದರು.

‘ ನೀವು ನಿದ್ರಿಸಿದ್ದೀರೋ ಇಲ್ಲವೋ ಅಥವಾ ಊಟ ಮಾಡಿದ್ದೀರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಬಯಕೆ ನಮಗಿಲ್ಲ. ನೀವು ನಮ್ಮ ವಿಂಗ್ ಕಮಾಂಡರ್ ಅನ್ನು ಸುರಕ್ಷಿತವಾಗಿ ಯಾವಾಗ ಕರೆ ತರುತ್ತೀರಿ ಎಂಬುದನ್ನು ತಿಳಿಯಲು ಇಚ್ಛೀಸುತ್ತೀದ್ದೇವೆ’ ಎಂದು ಒಂದು ಟ್ವೀಟ್ ನಲ್ಲಿ ಹೇಳಿದ ರಮ್ಯ

ಮತ್ತೊಂದು ಟ್ವೀಟ್ ನಲ್ಲಿ ‘ ಪ್ರಧಾನಮಂತ್ರಿಯವರು ತಮ್ಮ ಆಡಳಿತ ಸಮರ್ಥತೆಯ ಬಗ್ಗೆ ವಿಶ್ವದ ಮುಂದೆ ಹೇಳಿಕೊಳ್ಳುತ್ತಾರೆ. ಆದರೆ ನಿನ್ನೆ ನಾಪತ್ತೆಯಾಗಿರುವ ಸೈನಿಕನ ಬಗ್ಗೆ ಒಂದೇ ಒಂದು ಮಾತನ್ನೂ ಹೇಳಿಲ್ಲ. ದಾಳಿಯ ಸಂಪೂರ್ಣ ಶ್ರೇಯವನ್ನೂ ಅವರು ಪಡೆದಿದ್ದಾರೆ. ಆದರೆ ನಮಗಾಗಿ ಪ್ರಾಣ ತೆತ್ತವರಿಗಾಗಿ ಪಶ್ಚತ್ತಾಪವನ್ನು ಅಥಾವ ಸಂವೇದನೆಯನ್ನು ತೋರುವುದಿಲ್ಲ’ ಎಂದು ಆರೋಪಿಸಿದ್ದರು.

ರಮ್ಯ ಅವರು ಟ್ವೀಟ್ ಮಾಡಿದ್ದು ಇಂದು ಮುಂಜಾನೆ, ಸಂಜೆಯಷ್ಟು ಹೊತ್ತಿಗೆ ಪಾಕ್ ಪ್ರಧಾನಿ …( ಅಂದ್ರೆ ರಮ್ಯ ಅವರಿಂದ ಸ್ವರ್ಗ ಎಂದು ಕರೆಯಲ್ಪಟ್ಟ ದೇಶದ ಪ್ರಧಾನಿ ) ಅಭಿನಂದನ್ ಅವರನ್ನು ನಾಳೆಯಷ್ಟು ಹೊತ್ತಿಗೆ ಬಿಡುಗಡೆ ಮಾಡ್ತೀವಿ ಎಂದು ಘೋಷಿಸಿದ್ದಾರೆ.

ರಮ್ಯ ಹೇಳಿದಂತೆ ಪ್ರಧಾನಿ ನರೇಂದ್ರ ಮೋದಿ ನಿದ್ದೆ ಮಾಡ್ತಾ ಇದ್ರೆ ಅಭಿನಂದನ್ ಬಿಡುಗಡೆಯಾಗುತ್ತಿರಲಿಲ್ಲ. ಪಾಕಿಸ್ತಾನದ ಶಾಂತಿ ಪ್ರಸ್ತಾವನ್ನು ಸೈಡಿಗಿಟ್ಟು, ಮೊದಲು ಅಭಿನಂದನ್ ರನ್ನು ನಮಗೆ ಒಪ್ಪಿಸಿ, ಆಮೇಲೆ ಉಳಿದ ಮಾತು ಅಂದ ಕಾರಣಕ್ಕೆ ಪಾಕಿಸ್ತಾನ ಬಾಗಿದೆ.

ಅದರ ಬದಲಾಗಿ ನಿಮ್ಮ ನಾಯಕರಂತೆ ಸೇನೆಯ ಜೊತೆ ರಾಜಕೀಯ ಬೇಡ ಅನ್ನುತ್ತಾ ಕೂತಿದ್ರೆ ಏನಾಗುತ್ತಿತ್ತು ಊಹಿಸಿಕೊಳ್ಳಿ.

ಮತ್ತೊಂದು ಮಾತು ಅಭಿನಂದನ್ ಹಾರಿಸಿಕೊಂಡು ಹೋಗಿದ್ದು ಮಿಗ್ ವಿಮಾನವನ್ನು, ಅದನ್ನು ಏನೆಂದು ಕರೆಯುತ್ತಾರೆ, ಅದು ಯಾರ ಕಾಲದಲ್ಲಿ ಖರೀದಿಯಾಯ್ತು, ಭಾರತದಲ್ಲಿದ್ದ ಅಷ್ಟು ಮಿಗ್ ವಿಮಾನಗಳು ಪತನಗೊಂಡಿದ್ದು ಹೇಗೆ ಅನ್ನುವುದನ್ನು ಅರಿತುಕೊಳ್ಳುವುದು ಬೆಟರ್.

Advertisements

One Comment on “ರಮ್ಯ ಮೇಡಂ, ಮೋದಿ ನಿದ್ರಿಸುತ್ತಿಲ್ಲ… ಅಭಿನಂದನ್ ನಾಳೆ ಬರ್ತಾರೆ.. ಸುದ್ದಿ ಗೊತ್ತಾಯ್ತ…?

  1. Pingback: ಟ್ವೀಟರ್ ಮತ್ತೆ ಉಗಿಸಿಕೊಂಡ ರಮ್ಯ : ಒರೆಸಿಕೊಂಡು ಮತ್ತೆ ಬರ್ತಾಳೆ ನೋಡ್ತಾ ಇರಿ – torrentspree

Leave a Reply

%d bloggers like this: