Advertisements

ಲೋಕಸಭಾ ಚುನಾವಣೆಯಂದ್ರೆ ಗ್ರಾ.ಪಂ ಚುನಾವಣೆಯಲ್ಲ :ಲಕ್ಷ್ಮೀ ಅಶ್ವಿನ್ ಗೌಡರಿಗೆ LRS ಟಾಂಗ್

ಮಂಡ್ಯ ಕಾಂಗ್ರೆಸ್ ನಲ್ಲಿ ಇದೀಗ ಹೈಟೆನ್ಸನ್ ಶುರುವಾಗಿದೆ. ಒಂದೆಡೆ ಸುಮಲತಾ ಸ್ಪರ್ಧೆ, ಮತ್ತೊಂದು ಕಡೆ ನಿಖಿಲ್ ಕುಮಾರ್ ಎಂಟ್ರಿ.

ಸುಮಲತಾ ನಿಂತ್ರೆ ಈ ಬಾರಿ ನಮ್ಮ ಓಟು ಅಕ್ಕನಿಗೆ ಎಂದು . ಜೆಡಿಎಸ್ ಕಾರ್ಯಕರ್ತರು ಹೇಳಿಯಾಗಿದೆ.

ಈ ನಡುವೆ ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ಕಾಲಿಟ್ಟರೆ ಹಾಲಿ ಸಂಸದ ಎಲ್.ಆರ್. ಶಿವರಾಮೇಗೌಡರ ಕಥೆಯೇನು ಅನ್ನುವುದು ಪ್ರಶ್ನೆ.

ಅವರಿಗೆ ನಿಂತುಕೊಳ್ಳಲು ಗಟ್ಟಿಯಾದ ಬೇರೆ ಕ್ಷೇತ್ರಗಳಿಲ್ಲ. ಗಟ್ಟಿಯಾದ ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳಿದ್ದಾರೆ. ಮಂಡ್ಯ ಬಿಟ್ಟು ಬೇರೆ ಕ್ಷೇತ್ರದ ಜನರಿಗೆ ಶಿವರಾಮೇಗೌಡರು ಪರಿಚರಲ್ಲ. ಹೀಗಾಗಿ ಅವರು ಗೆಲ್ಲಬಹುದಾದ ಕ್ಷೇತ್ರಗಳಿಲ್ಲ.

ಈ ನಡುವೆ ಮಂಡ್ಯದಲ್ಲಿ ನಿಖಿಲ್ ನಿಲ್ಲೋದಿಲ್ಲ ಅನ್ನುವುದಾದರೆ ನನಗೆ ಟಿಕೆಟ್ ಎಂದು ಐ.ಆರ್.ಎಸ್ ಸೇವೆಯಿಂದ ಸ್ವಯಂ ನಿವೃತಿ ಪಡೆದು ಬಂದಿರುವ ಲಕ್ಷ್ಮೀ ಅಶ್ವಿನ್ ಗೌಡ ಪಟ್ಟು ಹಿಡಿದು ಕೂತಿದ್ದಾರೆ.

ಲಕ್ಷ್ಮೀ ಅಶ್ವಿನ್ ಗೌಡ ಅವರಿಗೆ ಈಗಾಗಲೇ ಹಲವು ಬಾರಿ ಟಿಕೆಟ್ ತಪ್ಪಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಲಕ್ಷ್ಮೀ ಅಶ್ವಿನ್ ಗೌಡ ಅವರಿಗೆ ಸಾಕಷ್ಟು ಅನ್ಯಾಯವಾಗಿದೆ.

ಆದರೆ ಲಕ್ಷ್ಮೀ ಅಶ್ವಿನ್ ಗೌಡ ಕುರಿತಂತೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿರುವ ಹಾಲಿ ಸಂಸದ ಎಲ್.ಆರ್. ಶಿವರಾಮೇಗೌಡ, ಲಕ್ಷ್ಮೀ ಅಶ್ವಿನ್ ಗೌಡ ಎಲ್ಲಾ ಚಿಂತೆ ಬಿಟ್ಟು ಮನೆಯಲ್ಲಿ ಆರಾಮವಾಗಿ ಇದ್ದಾರೆ. ಸುಖಾಸುಮ್ಮನೆ ಅವರನ್ನು ಎಳೆಯಬೇಡಿ. ಲೋಕಸಭಾ ಚುನಾವಣೆ ಅಂದರೆ ಗ್ರಾಮ ಪಂಚಾಯತ್ ಚುನಾವಣೆ ಅಲ್ಲ ಅಂದಿದ್ದಾರೆ.

ಅಂದರೆ ಲಕ್ಷ್ಮೀ ಅಶ್ವಿನ್ ಗೌಡ ಅವರು ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಲ್ಲಿ ನಂತರ ಲೋಕಸಭೆ ಚಿಂತಿಸಲಿ ಎಂದು ಅರ್ಥವೇ..ಶಿವರಾಮೇಗೌಡರೇ ಹೇಳಬೇಕು.

Advertisements

Leave a Reply

%d bloggers like this: