Advertisements

ಮಂಡ್ಯ JDSನಲ್ಲಿ ನನ್ನ ಕಡೆಗಣಿಸಲಾಗುತ್ತಿದೆ : ಸಂಸದ LR ಶಿವರಾಮೇಗೌಡ ಬೇಸರ

ಮಂಡ್ಯ ಜಿಲ್ಲಾ ಜೆಡಿಎಸ್‌ನಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಸಂಸದ ಎಲ್.ಆರ್. ಶಿವರಾಮೇಗೌಡ ಪರೋಕ್ಷವಾಗಿ ಪಕ್ಷದ ಜಿಲ್ಲಾ ಮುಖಂಡರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು ಯಾವುದನ್ನೂ ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ಎಲ್ಲವೂ ಸರಿ ಇಲ್ಲ ಅನ್ನುವುದನ್ನು ವಿವರಿಸಿದರು. 

ಮುಂದಿನ ಲೋಕಸಭಾ ಚುನಾವಣೆಗೆ ನಾನೂ ಸ್ಪರ್ಧಿ. ಆದರೆ ಅಲ್ಲಿ ಇಲ್ಲಿ ಬೇರೇ ಬೇರೆ ಗುಸುಗುಸು ಚರ್ಚೆ  ನಡೆಯುತ್ತಿದೆ. ನನಗೆ ಗೊತ್ತಿಲ್ಲದಂತೆ ನಿಖಿಲ್ ಕುಮಾರಸ್ವಾಮಿಯವರನ್ನು ಜಿಲ್ಲೆಯ ಸಮಾರಂಭಗಳಿಗೆ ಕರೆತರಲಾಗುತ್ತಿದೆ.

ಕೆಲವರು ಸಿಎಂ ಕುಮಾರಸ್ವಾಮಿ ಅವರನ್ನು ಗೌಪ್ಯವಾಗಿ ಭೇಟಿ ಮಾಡಿ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಹೀಗಾಗಿ ನಿನ್ನೆಯ ಸಮಾರಂಭದಲ್ಲೇ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಬಹಿರಂಗವಾಗಿ ವಾಗ್ದಾನ ಮಾಡಿದೆ. 

ದೇವೇಗೌಡರ ಕುಟುಂಬ ನಂಬಿದವರಿಗೆ ಎಂದಿಗೂ ಮೋಸವಾಗಿಲ್ಲ. ನನಗೆ ಪಕ್ಷ ಮತ್ತು ಜನ ಅಧಿಕಾರ ನೀಡಿದ್ದಾರೆ. ಜೆಡಿಎಸ್‌ನಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ನನ್ನ ಆಕ್ಷೇಪಣೆ ಇಲ್ಲ ಎಂದು ಸ್ಪಷ್ಟಪಡಿಸಿದ ಶಿವರಾಮೇಗೌಡ, ದೇವೇಗೌಡರ ಕುಟುಂಬ ಹೊರತು ಪಡಿಸಿದರೆ ಬೇರೆ ಯಾರೂ ಸ್ಪರ್ಧೆಯಲ್ಲಿ ಇಲ್ಲ. ಮಂಡ್ಯಕ್ಕೆ ಬಂದರೆ ನಿಖಿಲ್ ಕುಮಾರಸ್ವಾಮಿ ಅಥವಾ ದೇವೇಗೌಡರು ಬರಬಹುದು. ಒಂದು ವೇಳೆ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಿದರೆ ನನಗೆ ಏನು ಮಾಡುವಿರಿ ಎಂದು ಕೇಳುತ್ತೇನೆ ಎಂದರು. 

ಅಲ್ಲಿಗೆ ಮಂಡ್ಯ ಜೆಡಿಎಸ್ ನಲ್ಲಿ ನಿಧಾನವಾಗಿ ಅಸಮಾಧಾನ ಶುರುವಾಗಿದೆ ಅಂದಾಯ್ತು. ಈಗಾಗಲೇ ಸುಮಲತಾ ಕಣಕ್ಕೆ ಇಳಿಯುವುದು ಸ್ಪಷ್ಟವಾಗಿದೆ. ಅಂಬಿ ಪುತ್ರ ಅಭಿ ಕೂಡಾ ತಾಯಿ ಪರವಾಗಿ ಸಂಘಟನೆ ಪ್ರಾರಂಭಿಸಿದ್ದಾರೆ.

ಒಂದೆಡೆ ಮಂಡ್ಯ ಜೆಡಿಎಸ್ ನಲ್ಲಿ ಗೊಂದಲ, ಮತ್ತೊಂದು ಕಡೆ ಸುಮಲತಾ ಸ್ಪರ್ಧೆ. ಮಂಡ್ಯ ಜನ ಹೇಳಿ ಕೇಳಿ ಅಂಬರೀಶ್ ಅವರನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದವರು. ಹೀಗಾಗಿ ಜೆಡಿಎಸ್ ಪರ ಮತ ಹಾಕುತ್ತಿದ್ದವರು  ಕೂಡಾ ಈ ಬಾರಿ ಸುಮಲತಾ ಅವರನ್ನು ಗೆಲ್ಲಿಸುವುದು ಗ್ಯಾರಂಟಿ. ಅಲ್ಲಿಗೆ ಜೆಡಿಎಸ್ ನಿಂದ ದೇವೇಗೌಡರನ್ನು ಹೊರತು ಪಡಿಸಿ ಮತ್ಯಾರು ನಿಂತರೂ ಕೂಡಾ ಜೆಡಿಎಸ್ ಮಕಾಡೆ ಗ್ಯಾರಂಟಿ.

Advertisements

One Comment on “ಮಂಡ್ಯ JDSನಲ್ಲಿ ನನ್ನ ಕಡೆಗಣಿಸಲಾಗುತ್ತಿದೆ : ಸಂಸದ LR ಶಿವರಾಮೇಗೌಡ ಬೇಸರ

  1. Pingback: ಕಾಶ್ಮೀರ ಸಂಘರ್ಷಕ್ಕೆ ಮೋದಿಯೇ ಕಾರಣ : ಮಾಜಿ ಪ್ರಧಾನಿ ದೇವೇಗೌಡ – torrentspree

Leave a Reply

%d bloggers like this: