Advertisements

ಯುಗಾದಿಯೋ ಶಿವರಾತ್ರಿಯೋ : ಕಲರ್ಸ್ ಕನ್ನಡದಲ್ಲಿ ಅಬ್ಬರಿಸಲಿದೆ ಕೆಜಿಎಫ್

ಹಿಂದೊಂದು ಕಾಲವಿತ್ತು ಚಿತ್ರ ಬಿಡುಗಡೆಯಾಯ್ತು ಅಂದರೆ ಟಿವಿಗಳಲ್ಲಿ ಪ್ರಸಾರ ಭಾಗ್ಯ ಬರಬೇಕಾದರೆ ವರ್ಷಗಳ ಕಾಲ ಕಾಯಬೇಕು.

ಆದರೆ ಈಗ ಕಾಲ ಬದಲಾಗಿದೆ. ಚಿತ್ರ ಸಿಕ್ಕಾಪಟ್ಟೆ ಹಿಟ್ ಆಯ್ತು ಅಂದ್ರೆ ಒಂದೆರೆಡು ತಿಂಗಳು, ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿಲ್ಲ ಅಂದರೆ ವಾರದೊಳಗಡೆ ಚಿತ್ರಗಳು ಟಿವಿಯಲ್ಲಿ ಪ್ರಸಾರವಾಗುತ್ತದೆ.

ಇದೀಗ ಯಶ್ ನಾಯಕತ್ವದ ‘ಕೆಜಿಎಫ್’ ಚಿತ್ರ ಬಿಡುಗಡೆಯಾಗಿ 50 ದಿನಗಳನ್ನು ಪೂರೈಸಿ ಭರ್ಜರಿ ಕಲೆಕ್ಷನ್ ನೊಂದಿಗೆ ಮುಂದುವರಿದಿದೆ.

ಅಮೇಜಾನ್ ಪ್ರೈಂನಲ್ಲೂ ಬಿಡುಗಡೆಯಾಗಿ ಪ್ರೇಕ್ಷಕರು ಕೆಜಿಎಫ್ ಚಿತ್ರವನ್ನು ನೋಡಿದ್ದಾರೆ. ಆದರೂ ಥಿಯೇಟರ್ ಗಳಲ್ಲಿ ಚಿತ್ರದ ಕ್ರೇಜ್ ಕೂಡ ಕಮ್ಮಿಯಾಗಿಲ್ಲ. 

ಇದೀಗ, ಈ ಚಿತ್ರವು ಟಿವಿಯಲ್ಲಿ ಸದ್ಯವೇ ಬರಲಿದೆ. ಕಲರ್ಸ್ ಕನ್ನಡದಲ್ಲಿ ಸದ್ಯದಲ್ಲೇ ‘ಕೆಜಿಎಫ್’ ಚಿತ್ರವು ಮೂಡಿ ಬರಲಿದ್ದು, ಈ ಸಂಬಂಧ ಚಿತ್ರದ ‘ಪ್ರೋಮೊ’ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಶೀಘ್ರದಲ್ಲೇ ಅಂದಿರುವ ವಾಹಿನಿ, ಮಾರ್ಚ್ 4 ರಂದು ‘ಶಿವರಾತ್ರಿ’ ಹಬ್ಬ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ‘ಯುಗಾದಿ’ ಹಬ್ಬದಂದು ಚಿತ್ರ ಪ್ರಸಾರವಾಗುವ ಸಾಧ್ಯತೆಗಳಿದೆ.

ಈಗಾಗಲೇ ವಾಹಿನಿಯ Marketing Team ಚಿತ್ರಕ್ಕಾಗಿ ದೊಡ್ಡ ದೊಡ್ಡ ಜಾಹೀರಾತುದಾರರನ್ನು ಸಂಪರ್ಕಿಸಿದ್ದು, ದೊಡ್ಡ ಮೊತ್ತದ ಬೇಡಿಕೆ ಇಟ್ಟಿದೆ. ಈಗಾಗಲೇ ಚಿತ್ರ ಹಿಟ್ ಆಗಿರೋ ಕಾರಣ, ದೊಡ್ಡ ಕಂಪನಿಗಳು ಚಿತ್ರದ ಮುಖ್ಯ ಪ್ರಾಯೋಜಕರಾಗಲು ಆಸಕ್ತಿ ತೋರಿಸಿದೆ.

Advertisements

Leave a Reply

%d bloggers like this: