Advertisements

ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಸಹಾಯಕ್ಕೆ ಕಿಚ್ಚ ಸುದೀಪ್

ಅನಾರೋಗ್ಯದಿಂದ ಬಳಲುತ್ತಿರುವ ‘ನಾಗಮಂಡಲ’ ಖ್ಯಾತಿಯ ವಿಜಯಲಕ್ಷ್ಮಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜನ ನೆನಪಿಟ್ಟುಕೊಳ್ಳುವಂತೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೂ, ಬಡತನ ಅವರನ್ನು ಕಿತ್ತು ತಿನ್ನುತ್ತಿದೆ. ಹೀಗಾಗಿ ಶ್ರೀಮುರಳಿ ನಾಯಕ ನಟನಾಗಿರುವ ಮದಗಜ ಚಿತ್ರತಂಡ ಅವರಿಗೆ ಆರ್ಥಿಕ ಸಹಾಯ ಮಾಡಿದೆ.

ಈ ನಡುವೆ ವಿಜಯಲಕ್ಷ್ಮಿ ಅವರಿಗೆ ಸುದೀಪ್ ಸಹಾಯ ಹಸ್ತ ಚಾಚಿದ್ದು ಒಂದು ಲಕ್ಷ ರೂ. ನೀಡಿ ಸಹಾಯ ಮಾಡಿದ್ದಾರೆ. ಈ ಸಂಗತಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಭಾ.ಮ. ಹರೀಶ್ ಟ್ವೀಟ್ ಮಾಡಿ ತಿಳಿಸಿದ್ದಾರೆ. 

ವಿಜಯಲಕ್ಷ್ಮಿ ಅವರು ಇದ್ದಕ್ಕಿದ್ದಂತೆ ಕೆಲ ದಿನಗಳ ಹಿಂದೆ ಹೈ ಬಿಪಿ ಮತ್ತು ನಿಶ್ಯಕ್ತಿಗೆ ಒಳಗಾಗಿದ್ದಾರೆ. ಈ ವಿಷಯವನ್ನು ಮಾಧ್ಯಮಗಳಿಗೆ ಅವರ ಅಕ್ಕ ಉಷಾದೇವಿ ತಿಳಿಸಿದ್ದರು. ಅಲ್ಲದೆ, ಆರ್ಥಿಕ ಮುಗ್ಗಟ್ಟಿನಿಂದ ಚಿಕಿತ್ಸೆ ಕೊಡಿಸುವುದೂ ಕಷ್ಟವಾಗ್ತಿದೆ ಎಂದು ಅವರು ಹೇಳಿದ್ದರು.

ವಿಜಯಲಕ್ಷ್ಮಿ ಅವರು ತೆಲುಗು, ತಮಿಳು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಒಟ್ಟು 40ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ವಿಜಯಲಕ್ಷ್ಮಿ ಸ್ಯಾಂಡಲ್‌ ವುಡ್‌ನಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 

ತಮಿಳಿನ ನಟರಾದ ವಿಜಯ್, ಸೂರ್ಯ ಜತೆಗೂ ತೆರೆ ಹಂಚಿಕೊಂಡಿದ್ದಾರೆ. ಬಂಗಾರದ ಬೇಟೆ ಗೇಮ್ ಶೋ ಮೂಲಕ ಹಾಗೂ ತಮಿಳಿನ ಧಾರಾವಾಹಿ ಮೂಲಕ ಕಿರುತೆಯಲ್ಲೂ ಮಿಂಚಿದ್ದವರು ವಿಜಯಲಕ್ಷ್ಮಿ. ‘ಫೈಟರ್’. ಕನ್ನಡದಲ್ಲಿ ಕೊನೆಯದಾಗಿ ಅವರು ಅಭಿನಯಿಸಿರುವ ಸಿನಿಮಾ. 

Advertisements

One Comment on “ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಸಹಾಯಕ್ಕೆ ಕಿಚ್ಚ ಸುದೀಪ್

  1. Pingback: ಕಿಚ್ಚನ ಕಿವಿ ಮಾತು :ನಿಜವಾದ ಅಭಿಮಾನಿಯಾದರೆ ಈ ರೀತಿ ಮಾಡಬೇಡಿ – torrentspree

Leave a Reply

%d bloggers like this: