Advertisements

ಬೆಡ್ ರೂಮ್ ರಹಸ್ಯ :ರಣ್‌ವೀರ್ ಹಾಸಿಗೆ ಏರಲು ತುಂಬಾ ಲೇಟ್ ಮಾಡ್ತಾರೆ : ದೀಪಿಕಾ ಬೇಸರ

ಬಾಲಿವುಡ್ ನ ಕ್ಯೂಟಿ ಜೋಡಿ ಮದುವೆಯ ಬಳಿಕ ಹನಿಮೂನ್ ಮೂಡ್‌ ನಿಂದ ಇನ್ನೂ ಹೊರಬಂದಿಲ್ಲ.

ಈ ನಡುವೆ ಫೆಮಿನಾ ಬ್ಯೂಟಿ ಆವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದ ದೀಪಿಕಾ ಪಡುಕೋಣೆ ಪತಿ ರಣ್ ವೀರ್ ಸಿಂಗ್ ಬಗೆಗಿನ ಅನೇಕ ಕುತೂಹಲಕಾರಿ ಅಂಶಗಳನ್ನು ಹೊರಗೆಡವಿದ್ದಾರೆ.

ರಣ್‌ ವೀರ್ ತುಂಬಾ ಹೊತ್ತು ಟಾಯ್ಲೆಟ್‌ನಲ್ಲಿ ಕಳೆಯುತ್ತಾರೆ. ಸ್ನಾನದ ಮನೆಯಲ್ಲಿ, ಕನ್ನಡಿ ಮುಂದೆ ಕೂಡ ರಣ್‌ ವೀರ್ ತುಂಬಾ ಸಮಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಬಳಿಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ  ಹಾಸಿಗೆಗೆ ಬರಲೂ ಅವರು ತುಂಬಾ ಲೇಟ್ ಮಾಡುತ್ತಾರೆ ಅಂದಿದ್ದಾರೆ.

ಅಷ್ಟು ಹೊತ್ತು ಗಂಭೀರವಾಗಿ ದೀಪಿಕಾ ಮಾತು ಕೇಳುತ್ತಿದ್ದ ಪ್ರೇಕ್ಷಕರು ಮುಸಿ ಮುಸಿ ಎಂದು ನಗಲಾರಂಭಿಸಿದರು.

 ತಕ್ಷಣ ತಮ್ಮ ಮಾತು ಇನ್ನೊಂದು ಅರ್ಥ ಕೊಡುತ್ತದೆ ಎಂಬುದನ್ನರಿತ ದೀಪಿಕಾ, “ಅಂದರೆ, ನಿದ್ರೆ ಮಾಡಲು ಬೆಡ್‌ ಗೆ ಬರಲು ತುಂಬಾ ಸಮಯ ತೆಗೆದುಕೊಳ್ತಾರೆ ಎಂದೆ” ಎಂದು ಕರೆಕ್ಷನ್ ಹಾಕಿದ್ರು.

ರಣ್‌ ವೀರ್ ಅವರ ಡ್ರೆಸ್ ಸೆನ್ಸ್ ಹಾಗೂ ಕಾಸ್ಟ್ಯೂಮ್ಸ್ ಬಗ್ಗೆ ಕೂಡ ದೀಪಿಕಾ “ಯಾವುದೇ ಬಟ್ಟೆ ಖರೀದಿ ಮಾಡುವುದಿರಲಿ ಅಥವಾ ಹಾಕಿಕೊಳ್ಳುವುದಿರಲಿ, ನನ್ನ ಸಲಹೆ ಪಡೆಯದೇ ಅವರು ಏನೂ ಮಾಡುವುದಿಲ್ಲ” ಎಂದಿದ್ದಾರೆ.

ಹೆಡ್ ಲೈನ್ ಓದಿ ದಯವಿಟ್ಟು ನಮಗೆ ಉಗಿಯಬೇಡಿ.

Advertisements

Leave a Reply

%d bloggers like this: