Advertisements

ಮೋದಿ ಜೌಟ್ :ರಾಹುಲ್ ಗಾಂಧಿಯೇ ದೇಶದ ಮುಂದಿನ ಪ್ರಧಾನಿ : ಸಿದ್ದರಾಮಯ್ಯ

ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದ್ದಾರೆ. 

ಜಿಲ್ಲೆಯ ಬಾದಾಮಿಯಲ್ಲಿ ಗುರುವಾರ ಗಂಗಾಮತಸ್ಥರ ಜಿಲ್ಲಾ ಮಟ್ಟದ ಸಮಾವೇಶ ದಲ್ಲಿ ಮಾತನಾಡಿದ ಅವರು, ರಾಹುಲ್ ಪ್ರಧಾನಿಯಾಗಲಿದ್ದಾರೆ ಎಂದು ಆತ್ಮವಿಶ್ವಾಸ ದಿಂದ ಹೇಳಿದರು. 

ರಾಹುಲ್ ಗಾಂಧಿ ಪ್ರೈ ಮಿನಿಸ್ಟರ್ ಆಗ್ತಾರೆ. ಆಗ ಗಂಗಾಮತಸ್ಥ ಅಂಬಿಗರ ಸಮಾಜ ಎಸ್ಟಿ ಗೆ ಸೇರಿಸಲು ಪ್ರಯತ್ನಿಸುತ್ತೇನೆ. ನಾನು ಸಿಎಂ ಆದ್ಮೇಲೆ ಅಂಬಿಗರ ಸಮಾಜ ಎಸ್ಟಿ ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದೆ. ಆದರೆ ದುರಾದೃಷ್ಟವಶಾತ್ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಎಸ್ಟಿ ಗೆ ಸೇರಿಸಿಲ್ಲ ಎಂದರು. 

ರಾಜ್ಯ ಸರ್ಕಾರ ಕೇವಲ ಶಿಫಾರಸು ಮಾಡೋ ಅಧಿಕಾರವಿದೆ. ನಾನೇ ಮಾಡೋ ಹಾಗಿದ್ರೆ ಹೊಡೆದು ಬಿಸಾಕಿ ಬಿಡುತ್ತಿದ್ದೆ. ನಾನು ಅನೇಕ ಸಾರಿ ದೆಹಲಿಗೆ ಹೋಗಿದ್ದಾಗ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೆ ಆಗಲಿಲ್ಲ. ಮುಂದೆ ರಾಹುಲ್ ಗಾಂಧಿ ಪ್ರಧಾನಿಮಂತ್ರಿ ಆಗುವ ಸಾಧ್ಯತೆಯಿದೆ. ಆಗ ಸೇರ್ಪಡೆಗೊಳಿಸೋಣ ಎಂದು ಸಿದ್ದರಾಮಯ್ಯ ತಿಳಿಸಿದರು. 

Advertisements

Leave a Reply

%d bloggers like this: