Advertisements

ಡ್ರಿಂಕ್ಸ್ ಮಾಡಿ ಕಾರು ಓಡಿಸಿದ್ರಾ ಶಾಸಕ ಸಿಟಿ ರವಿ..?

ಚಿಕ್ಕಮಗಳೂರಿನ ಬಿಜೆಪಿ ಶಾಸಕ ಸಿ.ಟಿ. ರವಿ ಪ್ರಯಾಣಿಸುತ್ತಿದ್ದ ಕಾರು ರಸ್ತೆಬದಿ ನಿಂತಿದ್ದ 2 ಕಾರುಗಳಿಗೆ ಡಿಕ್ಕಿ ಹೊಡೆದು ನಂತರ ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಹರಿದು ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟು ಮೂವರು ಗಾಯಗೊಂಡಿರುವ ಧಾರುಣ ಘಟನೆ ಕುಣಿಗಲ್‌ನ ಊರ್ಕೇನಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಮೃತರನ್ನು ಕನಕಪುರದ ಸೂರೇನಹಳ್ಳಿಯ ವಾಸಿಗಳಾದ ಶಶಿಕುಮಾರ್ (28) ಹಾಗೂ ಸುನೀಲ್‌ಗೌಡ (27) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಮುನಿರಾಜು, ಜಯಚಂದ್ರ, ಪುನೀತ್, ಮಂಜುನಾಥ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ನಡೆದ ರಭಸಕ್ಕೆ ಶಾಸಕ ಸಿ.ಟಿ. ರವಿ ಹಾಗೂ ಅವರ ಕಾರು ಚಾಲಕ ಆಕಾಶ್, ಗನ್ ಮ್ಯಾನ್ ರಾಜು ನಾಯಕ್ ಕೂಡ ಗಾಯಗೊಂಡಿದ್ದಾರೆ. ಶಾಸಕ ರವಿ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರೆ ಚಾಲಕ ಆಕಾಶ್ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರ ಬೆನ್ನಲ್ಲೇ ರವಿ ಕುಡಿದಿದ್ದರು ಅನ್ನುವ ಮಾತು ಕೇಳಿ ಬಂದಿತ್ತು. ಆದರೆ ಇದನ್ನು ಅವರ ಪತ್ನಿ ನಿರಾಕರಿಸಿದ್ದು, ಅವರು ನೀರು ಬಿಟ್ಟರೇ ಬೇರೆ ಏನೂ ಕುಡಿಯುವುದಿಲ್ಲ ಅಂದಿದ್ದಾರೆ.

ಜೊತೆಗೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮತ್ತು ಸಚಿವ ಯುಟಿ ಖಾದರ್ ಕೂಡಾ ರವಿಗೆ ಕುಡಿಯುವ ಅಭ್ಯಾಸ ಇಲ್ಲ ಅಂದಿದ್ದಾರೆ.

ಸ್ವತ ರವಿಯವರೇ ನನಗೆ ಕುಡಿಯುವ ಅಭ್ಯಾಸವಿಲ್ಲ ಅಂದಿದ್ದಾರೆ.

ಆದರೆ ದಿಗ್ವಿಜಯ ಸುದ್ದಿ ವಾಹಿನಿ ರವಿ ಕುಡಿದಿದ್ದರು ಅನ್ನುವಂತ ಸಂಶಯ ಹುಟ್ಟಿಸುವ ಸುದ್ದಿಯೊಂದನ್ನು ಪ್ರಸಾರ ಮಾಡಿದೆ.


ಅವರ ಕಾರಿನಲ್ಲಿ Anti ಆಲ್ಕೋಹಾಲಿಕ್ ಮಾತ್ರೆ ಸಿಕ್ಕಿದೆ ಎಂದು ಬ್ರೇಕಿಂಗ್ ಸುದ್ದಿಯಲ್ಲಿ ಹೇಳಿದೆ.


ಕಾರಿನಲ್ಲಿ ಸಿಕ್ಕ ಮಾತ್ರೆ, Anti ಆಲ್ಕೋಹಾಲಿಕ್ ಮಾತ್ರೆಯೇ ಅನ್ನುವ ಸಂಶಯವಿದೆ. ವಾಹಿನಿ ಮಾತ್ರೆಯ ದೃಶ್ಯಗಳನ್ನು ಸ್ಪಷ್ಟವಾಗಿ ಪ್ರಸಾರ ಮಾಡದಿರುವುದು ಗೊಂದಲಕ್ಕೆ ಕಾರಣವಾಗಿದೆ.

Advertisements

Leave a Reply

%d bloggers like this: