Advertisements

ಗೋವಾದಿಂದ ಎರಡು ಬಾಟ್ಲಿ ಮದ್ಯ ತರೋಕೆ ಆಗೋದಿಲ್ಲ ದೇಶಕ್ಕೆ RDX ಹೇಗೆ ಬಂತು..?

ಪಕ್ಕದ ಗೋವಾದಿಂದ ಎರಡು ಬಾಟ್ಲಿ ಮದ್ಯ ತರೋಕೆ ಆಗೋದಿಲ್ಲ. ಅಷ್ಟೊಂ ಭದ್ರತೆ ಇರುತ್ತದೆ. ಹಾಗಿದ್ದ ಮೇಲೆ ಕಾರಿನಲ್ಲಿ ಆರ್.​ಡಿ.ಎಕ್ಸ್ ಸಾಗಿಸಿದ್ದಾರೆ ಅಂದರೆ ಅರ್ಥವೇನು. ಇದನ್ನು ಜನ ಏನೆಂದು ಅರ್ಥ ಮಾಡಿಕೊಳ್ಳಬೇಕಿದೆ. ದೇಶದ ಪರಿಸ್ಥಿತಿ ಎಲ್ಲಿಗೆ ಬಂತು? ಈಗ ಇಷ್ಟು ಮಾತನಾಡುವ ಸರ್ಕಾರ ಆಗ ಏನು ಮಾಡುತಿತ್ತು? ಬೇರೆ ಯಾರಾದರೂ ಪ್ರಧಾನಿ ಸ್ಥಾನದಲ್ಲಿ ಇದ್ದಿದ್ದರೆ ರಾಜೀನಾಮೆ ಕೊಟ್ಟು ಹೋಗುತ್ತಿದ್ದರು ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು ಪುಲ್ವಾಮ ದಾಳಿ ಬಗ್ಗೆ ಪ್ರತಿಕ್ರಿಯಿಸಿ,ಈ ದೇಶದಲ್ಲಿ ಆಗಿರುವ ಹಲವಾರು ಘಟನೆಗಳನ್ನು ನೋಡಿ ಜನ ಕಾಂಗ್ರೆಸ್ ಪರ ನಿಂತಿದ್ದಾರೆ. ಯಾರು ಚೌಕಿದಾರ ಎಂದು ಹೇಳುತ್ತಿದ್ದರೋ ಆ ಚೌಕಿದಾರನ ಪರಿಸ್ಥಿತಿ ಏನು ಅನ್ನೋದು ಎಲ್ಲರಿಗೂ ಅರ್ಥವಾಗಿದೆ.

ಪುಲ್ವಾಮ ಘಟನೆ ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಇಂತಹ ಘಟನೆ ನಡೆದಿದ್ದರೆ ಬಿಜೆಪಿಯವರು ದೇಶಾಭಿಮಾನ ಬಿಟ್ಟು ಧರಣಿ ಕುಳಿತುಕೊಳ್ಳತಿದ್ದರು. ಇವರೆಲ್ಲ ಬಂಡಲ್ ದೇಶಾಭಿಮಾನಿಗಳು ಎಂದು ಟೀಕಿಸಿದರು.

Advertisements

Leave a Reply

%d bloggers like this: