Advertisements

ಸಜ್ಜು ಜೊತೆ ಕೈ ಜೋಡಿಸಿದ ಚಂದನ್ : ಎಣ್ಣೆ ಸಾಂಗ್ ಪ್ರಿಯರೇ ಶೀಘ್ರದಲ್ಲೇ ಮಹಾಜಾತ್ರೆ

ಮೂರೇ ಮೂರು ಪೆಗ್ ಗೆ ಎಂದು ಎಣ್ಣೆ ಸಾಂಗ್ ಹಾಡಿ ಸಿಕ್ಕಾಪಟ್ಟೆ ಫೇಮಸ್ ಆದವರು ಚಂದನ್ ಶೆಟ್ಟಿ. ಎಣ್ಣೆ ನಮ್ದು.. ಊಟ ನಿಮ್ದು ಎಂದು ಹಾಡಿ ಜನರ ಮನಸ್ಸು ಕದ್ದವರು ನವೀನ್ ಸಜ್ಜು.

ವಿಶೇಷ ಅಂದ್ರೆ ಇಬ್ಬರೂ ಬಿಗ್ ಬಾಸ್ ಮನೆಗೆ ಹೋಗಿ ಬಂದವರು. ಒಬ್ಬರು ವಿನ್ನರ್ ಆದ್ರೆ, ಮತ್ತೊಬ್ಬರು ರನ್ನರ್ ಆಗಿ ಹೊರ ಹೊಮ್ಮಿದ್ದಾರೆ.

ಇದೀಗ ವಿನ್ನರ್ ಮತ್ತು ರನ್ನರ್ ಜೊತೆಯಾಗಿ ಒಂದೊಳ್ಳೆ ‘ಎಣ್ಣೆ ಸಾಂಗ್’ ರೆಡಿ ಮಾಡಲು ಮುಂದಾಗಿದ್ದಾರೆ.

ಈ ಸಂಬಂಧ ಈಗಾಗಲೇ ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು ಭೇಟಿಯಾಗಿದ್ದು ಎಣ್ಣೆ ಸಾಂಗ್ ಕುರಿತು ಚರ್ಚೆ ನಡೆದಿದೆ. ಇಬ್ಬರೂ ಒಪ್ಪಿದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಕೆಲವೇ ದಿನಗಳಲ್ಲಿ ಸಾಹಿತ್ಯ ರಚನೆ, ಸಾಂಗ್ ರೆಕಾರ್ಡಿಂಗ್ ಶುರುವಾಗಲಿದೆಯಂತೆ.

ಇದೊಂದು ಒಳ್ಳೆಯ ಬೆಳವಣಿಗೆ, ಇತ್ತೀಚಿನ ದಿನಗಳಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಅವನು ಬೆಳದರೆ ಕಾಲೆಳೆಯುವುದು ಹೇಗೆ ಎಂದು ಇವನು ಕಾಯುತ್ತಿರುತ್ತಾನೆ, ಕೊನೆಗೆ ಇಬ್ಬರೂ ಬೆಳೆಯುವುದಿಲ್ಲ.

ಆದರೆ ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು ಜೊತೆಯಾಗಿದ್ದಾರೆ ಅಂದ ಮೇಲೆ ಅದ್ಭುತ ಸಾಂಗ್ ಹೊರ ಬರೋದು ಗ್ಯಾರಂಟಿ. ಕೇವಲ ಎಣ್ಣೆ ಸಾಂಗ್ ಮಾತ್ರವಲ್ಲ, ಕನ್ನಡಿಗರು ಮೆಚ್ಚುವ ಅದ್ಭುತ ಸಾಂಗ್ ಗಳು ಬರಲಿ ಅನ್ನುವುದು ನಮ್ಮ ಆಶಯ.

Advertisements

Leave a Reply

%d bloggers like this: