Advertisements

ಪುಲ್ವಾಮ ದಾಳಿ ಹಿಂದೆ ಮೋದಿ ಕೈವಾಡ : ಜೆಡಿಎಸ್ ಶಾಸಕನ ಹೇಳಿ

ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಸಾಂತ್ವಾ ಹೇಳುವ ಮನಸ್ಸು ಕೆಲ ರಾಜಕಾರಣಿಗಳಿಗೆ ಇಲ್ಲದಂತಾಗಿದೆ. ಸೈನಿಕರು ಇನ್ನಿಲ್ಲದ ಅನ್ನುವ ನೋವಿನ ನಡುವೆ ಹಲವು ಖಾದಿ ಮಂದಿ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ.

ಸಮ್ಮಿಶ್ರ ಸರ್ಕಾರದ ಗೊಂದಲವನ್ನು ಮಾತುಕತೆ ಮೂಲಕ ಪರಿಹರಿಸಲಾಗದ ಕುಮಾರಸ್ವಾಮಿ ಪಾಕಿಸ್ತಾನದೊಂದಿಗೆ ಮಾತುಕತೆ ಮಾಡಿ ಸಮಸ್ಯೆ ಬಗೆ ಹರಿಸಬೇಕು ಅನ್ನುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಿರುವ ಕಾಂಗ್ರೆಸ್ ಪಕ್ಷದ ಬಂಡಾಯ ಶಾಸಕರ ಜೊತೆಗೆ ಮಾತುಕತೆ ನಡೆಸಲಾಗುತ್ತಿಲ್ಲ, ಅಂದ ಮೇಲೆ ಪಾಪಿ ಪಾಕಿಸ್ತಾನದೊಂದಿಗೆ ಮಾತುಕತೆ ಸಾಧ್ಯವೇ. ಮೈಯೆಲ್ಲಾ ವಿಷ ಮೆತ್ತಿಕೊಂಡಿರುವ ಪಾಕಿಸ್ತಾನದೊಂದಿಗೆ ಮಾತುಕತೆ ಸಮಯ ಎಂದೋ ಮುಗಿದು ಹೋಗಿದೆ.

ಈ ನಡುವೆ ರಾಜಕೀಯ ವ್ಯಕ್ತಿಗಳು ದಿನಕ್ಕೊಂದು ಹೇಳಿಕೆಗೆ ಹೊಸ ಸೇರ್ಪಡೆ  ಮಂಡ್ಯದ ಮಳವಳ್ಳಿ ಜೆಡಿಎಸ್​ ಶಾಸಕ ಡಾ.ಕೆ. ಅನ್ನದಾನಿ.

ರಾಜಕೀಯ ಗಿಮಿಕ್​ ಗಾಗಿ ಪ್ರಧಾನಿ ಮೋದಿ ಪುಲ್ವಾಮ ದಾಳಿ ನಡೆಸಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿರುವ ಅವರು, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಈ ದಾಳಿಯನ್ನು ಬಳಸಿಕೊಳ್ಳಲು ಮೋದಿ ತಂತ್ರಗಾರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

350 ಕೆಜಿ ಸ್ಫೋಟಕ ಬಳಸಿ ದಾಳಿ ಮಾಡಲಾಗಿದೆ. ಹಾಗಾದರೆ ಇಷ್ಟೊಂದು ಪ್ರಮಾಣದ ಸ್ಫೋಟಕ ದೇಶದ ಒಳಗೆ ಹೇಗೆ ಬಂತು? ಗಡಿಯಲ್ಲಿನ ಚೆಕ್ ​​​ಪೋಸ್ಟ್​​ನಲ್ಲಿರುವ ಸೈನಿಕ ಸಿಬ್ಬಂದಿಗಳು ಏನು ಮಾಡುತ್ತಿದ್ಧರು.? ಒಂದು ನಾಯಿ ಗಡಿ ದಾಟಿದರೂ ಪ್ರಧಾನಿಗೆ ಮಾಹಿತಿ ಹೋಗುತ್ತದೆ. ಹೀಗಿರುವಾಗ ಇಷ್ಟೊಂದು ಪ್ರಮಾಣದ ಸ್ಪೋಟಕ ಗಡಿ ದಾಟಿ ಬಂದಿರುವ ಮಾಹಿತಿ ಅವರಿಗೆ ಇಲ್ಲ ಅಂದರೆ ಹೇಗೆ?  ಅನ್ನುವುದು ಇವರ ಪ್ರಶ್ನೆ.

ನಿಮ್ಮ ಪ್ರಶ್ನೆಯನ್ನು ಮೆಚ್ಚಲೇಬೇಕು ಶಾಸಕರೇ, ನಿಮ್ಮನ್ನು ಆಯ್ಕೆ ಮಾಡಿದ ಮತದಾರರು ನಿಜಕ್ಕೂ ಅದೃಷ್ಟವಂತರೇ ಸರಿ. ಮಾನ್ಯ ಶಾಸಕರೇ ಕಾಶ್ಮೀರದಲ್ಲಿ ಉಗ್ರಗಾಮಿಗಳಿಗೆ ಅಲ್ಲಿನ ಸ್ಥಳೀಯ ಜನರೇ ಬೆಂಬಲ ನೀಡುತ್ತಿದ್ದಾರೆ. ಭಾರತದ ನೆಲದಲ್ಲಿದ್ದರೂ ಕಾಶ್ಮೀರದ ಕೆಲ ನಾಗರಿಕರು ಉಗ್ರಗಾಮಿಗಳ ಪರವಾಗಿದ್ದಾರೆ. ಸೈನ್ಯದ ಮೇಲೆ ಕಲ್ಲು ತೂರುವ ಮಂದಿ ಭಾರತದಲ್ಲಿದ್ದಾರೆ. ಭಾರತದ ಅನ್ನ ತಿಂದು ಗಾಳಿ ಸೇವಿಸಿ ಪಾಕ್ ಗೆ ಧಿಕ್ಕಾರ ಕೂಗುವವರು ನಮ್ಮ ನಿಮ್ಮ ನಡುವಿದ್ದಾರೆ. ಇದು ನಿಮ್ಮ ಗಮನಕ್ಕಾಗಿ.

Advertisements

One Comment on “ಪುಲ್ವಾಮ ದಾಳಿ ಹಿಂದೆ ಮೋದಿ ಕೈವಾಡ : ಜೆಡಿಎಸ್ ಶಾಸಕನ ಹೇಳಿ

  1. Pingback: ಅಧಿಕಾರಿಗಳನ್ನು ಲೋಫರ್ ಎಂದ ಬಿಜೆಪಿ ಶಾಸಕ…! – torrentspree

Leave a Reply

%d bloggers like this: