Advertisements

ಸೂಪರ್ ಸಿಎಂ ದರ್ಬಾರ್ : ಶಿಷ್ಟಾಚಾರ ಉಲ್ಲಂಘಿಸಿ ವೇದಿಕೆಯಲ್ಲಿ ಮಗನನ್ನು ಕೂರಿಸಿದ ರೇವಣ್ಣ

ಸರ್ಕಾರಿ ಕಾರ್ಯಕ್ರಮ ಅಂದ ಮೇಲೆ ಅಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ಮಾತ್ರ ವೇದಿಕೆಯಲ್ಲಿ ಕೂರಬೇಕು ಅನ್ನುವುದು ನಿಯಮ. ಈ ಇಬ್ಬರನ್ನೂ ಹೊರತುಪಡಿಸಿದರೆ ಅಧಿಕೃತವಾಗಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಣವಾದವರಿಗೆ ವೇದಿಕೆ ಹತ್ತಲು ಅವಕಾಶ.ಅದು ಶಿಷ್ಟಾಚಾರ.

ಆದರೆ ನಮ್ಮ ರಾಜಕಾರಣಿಗಳಿಂದ ಶಿಷ್ಟಚಾರಕ್ಕೆ ಬೆಲೆ ಸಿಗುತ್ತದೆ ಅಂದುಕೊಂಡರೆ ಅದು ನಮ್ಮ ಮೂರ್ಖತನ. ರಾಜಕಾರಣಿಗಳ ಬೆಂಬಲಿಗರೇ ಚೆಯರ್ ಎಳೆದುಕೊಂಡು ತಮ್ಮ ನಾಯಕನ ಹಿಂದೆ ವಿರಾಜಮಾನರಾಗುತ್ತಾರೆ. ಅದ್ಯಾವ ಪಕ್ಷದ ಕಾರ್ಯಕ್ರಮಕ್ಕೂ ಕಡಿಮೆ ಇಲ್ಲದಂತೆ ಸರ್ಕಾರಿ ಕಾರ್ಯಕ್ರಮಗಳು ನಡೆದ ಉದಾಹರಣೆ ಸಾಕಷ್ಟಿದೆ. ಅದು ಆ ಪಕ್ಷದ ಸರ್ಕಾರ, ಈ ಪಕ್ಷದ ಸರ್ಕಾರ ಅನ್ನುವ ವ್ಯತ್ಯಾಸವಿಲ್ಲ.

ಇದೀಗ ಸೋಮವಾರ ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳು ಕೂತಿದ್ದ ವೇದಿಕೆಯ ಮೇಲೆ ರಾಜ್ಯ ಲೋಕೋಪಯೋಗಿ ಸಚಿವ ರೇವಣ್ಣ ಅವರ ಪುತ್ರ ಸೂರಜ್ ಅವರನ್ನು ಕರೆದು ಕೂರಿಸಿದ್ದು ಈಗ ವಿವಾದ ಹುಟ್ಟು ಹಾಕಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸೂರಜ್ ಗೆ ವೇದಿಕೆಯಲ್ಲಿ ಮೊದಲ ಸ್ಥಾನ ನೀಡಲಾಗಿತ್ತು.

ಮುಖ್ಯಮಂತ್ರಿ ಹಾಗೂ ಅಧಿಕಾರಿಗಳು ಇದ್ದಾಗ ಅಂಥ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಯಲ್ಲದವರಿಗೆ ವೇದಿಕೆಯ ಮೇಲೆ ಮೊದಲ ಸ್ಥಾನ ನೀಡುವುದಿಲ್ಲ. ಹೀಗಿದ್ದರೂ, ಸೂರಜ್ ಐಜಿ ಹಾಗೂ ಎಸ್ಪಿಗಳ ನಡುವೆ ಕುಳಿತಿದ್ದರು.

ಸಚಿವರ ಪುತ್ರ ಎಂಬ ಕಾರಣಕ್ಕೆ ಅಧಿಕಾರಿಗಳ ಮಧ್ಯೆ ತಂದು ಕೂರಿಸುವುದು ಎಷ್ಟು ಸರಿ? ಜೆಡಿಎಸ್ ನಾಯಕರೇ ಉತ್ತರಿಸಬೇಕು.

Advertisements

One Comment on “ಸೂಪರ್ ಸಿಎಂ ದರ್ಬಾರ್ : ಶಿಷ್ಟಾಚಾರ ಉಲ್ಲಂಘಿಸಿ ವೇದಿಕೆಯಲ್ಲಿ ಮಗನನ್ನು ಕೂರಿಸಿದ ರೇವಣ್ಣ

  1. Pingback: ಅರಣ್ಯಧಿಕಾರಿಗಳ ಮೇಲೆ ಬಿಜೆಪಿ ಶಾಸಕನ ಗೂಂಡಾಗಿರಿ..! – torrentspree

Leave a Reply

%d bloggers like this: