Advertisements

TIMES NOW ವಾಹಿನಿ ವಿರುದ್ಧ ತಿರುಗಿ ಬಿದ್ದ ಸಿಎಂ ಕುಮಾರಸ್ವಾಮಿ

ಪುಲ್ವಾಮಾದಲ್ಲಿ ಭಯೋತ್ಪಾದಕ ಕೃತ್ಯದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಟೈಮ್ಸ್‌ ನೌ ವಾಹಿನಿಯು ತಿದ್ದಿದೆ ಎಂದು ಕುಮಾರಸ್ವಾಮಿ ಟ್ವಿಟ್ಟರ್‌ನಲ್ಲಿ ಆರೋಪಿದ್ದಾರೆ.

ತಾವು ನೀಡಿದ್ದ ಹೇಳಿಕೆಯನ್ನು ತಿದ್ದಿರುವುದಲ್ಲದೆ, ತಪ್ಪಾಗಿ ಅರ್ಥ ಮಾಡಿಕೊಂಡು ಋಣಾತ್ಮಕ ಅರ್ಥ ಹೊಮ್ಮುವಂತೆ ಟೈಮ್ಸ್‌ ನೌ ವಾಹಿನಿ ವರದಿ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಉಗ್ರರ ದಾಳಿಯನ್ನು ಖಂಡಿಸಿದ್ದ ಸಿಎಂ ಕುಮಾರಸ್ವಾಮಿ, ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವ ಜೊತೆಗೆ, ದೇಶದ ಒಳಗಿನ ಉಗ್ರರನ್ನು ನಿಯಂತ್ರಿಸಬೇಕಿದೆ ಎಂದು ಹೇಳಿದ್ದರು.

ಆದರೆ ಇದನ್ನು ತಪ್ಪಾಗಿ ವರದಿ ಮಾಡಿದ ಚಾನೆಲ್, ಭಯೋತ್ಪಾದನೆಗೆ ಭಾರತವೇ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ವರದಿ ಪ್ರಕಟಿಸಿತ್ತು.

ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವುದು ಸರಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಸಹ ಟೈಮ್ಸ್‌ ನೌ ವರದಿಯಲ್ಲಿ ಹೇಳಿತ್ತು.

ಈ ತಪ್ಪು ವರದಿಯನ್ನು ಖಂಡಿಸುತ್ತೇನೆ, ನೀವು ತಪ್ಪು ವರದಿ ಮಾಡಿದ್ದು ಮಾತ್ರವಲ್ಲ ನಾನು ಹೇಳಿದ್ದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರಿ, ಗಂಭೀರ ವಿಷಯದಲ್ಲಿ ಹೀಗೆ ಮಾಡಿರುವುದು ಸರಿ ಅಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಷಯದಲ್ಲಿ ಕುಮಾರಸ್ವಾಮಿಯವರನ್ನು ಬೆಂಬಲಿಸಲೇಬೇಕು. ರಾಷ್ಟ್ರೀಯ ವಾಹಿನಿಗಳು ನಮ್ಮ ನಾಯಕರ ಸುದ್ದಿಗಳನ್ನು ತಪ್ಪಾಗಿ ವರದಿ ಮಾಡಿದ ವೇಳೆ ಖಂಡಿಸಲೇಬೇಕು. ರಾಜಕೀಯವಾಗಿ ಏನೇ ಇರಲಿ, ರಾಜ್ಯ ವಿಚಾರ ಬಂದರೆ ಕುಮಾರಸ್ವಾಮಿ ನಮ್ಮ ಮುಖ್ಯಮಂತ್ರಿ.

ಇನ್ನು ಕುಮಾರಸ್ವಾಮಿ ಅಂದು ಭಯೋತ್ಪಾದನೆಗೆ ಭಾರತವೇ ಕಾರಣ ಎಂದು ಹೇಳಿರಲಿಲ್ಲ. ಯುದ್ದ ಬೇಡ ಅಂದಿದ್ದರು, ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಿ ಅಂದಿದ್ದರು. ಗಂಭೀರ ವಿಷಯಗಳಲ್ಲಿ ರಾಷ್ಟ್ರೀಯ ವಾಹಿನಿಯೊಂದು ತಪ್ಪಾಗಿ ವರದಿ ಮಾಡಿದ್ದನ್ನು ಪ್ರತಿಯೊಬ್ಬ ಕನ್ನಡಿಗ ಖಂಡಿಸಲೇಬೇಕು.

Advertisements

One Comment on “TIMES NOW ವಾಹಿನಿ ವಿರುದ್ಧ ತಿರುಗಿ ಬಿದ್ದ ಸಿಎಂ ಕುಮಾರಸ್ವಾಮಿ

  1. Pingback: ನಿಮ್ಮಿಬ್ಬರಲ್ಲಿ ಬೆಗ್ಗರ್ಸ್ ಯಾರು…ದಯವಿಟ್ಟು ಹೇಳಿ ಸಖತ್ ಆಗಿರೋ ಭಿಕ್ಷೆ ಹಾಕಬೇಕಾಗಿದೆ. – torrentspree

Leave a Reply

%d bloggers like this: