Advertisements

ಉಗ್ರರ ಅಟ್ಟಹಾಸ : ಮಾಧ್ಯಮಗೋಷ್ಟಿ ರದ್ದುಗೊಳಿಸಿದ ಪ್ರಿಯಾಂಕ ವಾದ್ರಾ

ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಆತ್ಮಾಹುತಿ ದಾಳಿ ನಡೆಸಿದ ಪಾಪಿ ಪಾಕಿಸ್ತಾನದ ಕೂಸುಗಳು ಭಾರತದ ವೀರ ಯೋಧರ ಮೇಲೆ ಅಟ್ಟಹಾಸ ಮೆರೆದಿದ್ದಾರೆ.

ಕಳೆದೊಂದು ದಶಕದ ಅವಧಿಯಲ್ಲೇ ನಡೆದ ಭೀಕರ ದಾಳಿ ಇದಾಗಿದ್ದು, ಇಡೀ ದೇಶ ಆಕ್ರೋಶದಿಂದ ಕುದಿಯುತ್ತಿದೆ.

ಈ ನಡುವೆ ಎಐಸಿಸಿ ವಕ್ತಾರರೊಬ್ಬರು ಸೈನಿಕರ ಸಾವಿನಲ್ಲೂ ರಾಜಕೀಯ ಮಾಡುವ ಯತ್ನ ಮಾಡಿದ್ದಾರೆ. ಪ್ರಬುದ್ಧ ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಇಂದು ಸೈನಿಕರ ಕುಟುಂಬಕ್ಕೆ ಸಾಂತ್ವಾನ ಹೇಳಬೇಕಿತ್ತು. ರಾಜಕೀಯವಾಗಿ ಯಾವುದೇ ಕಿತ್ತಾಟವಿರಲಿ, ದೇಶದ ವಿಚಾರದಲ್ಲಿ ನಾವು ಸರ್ಕಾರದ ಜೊತೆಗಿದ್ದೇವೆ, ದೇಶದ ಜನತೆಗೆ ರಕ್ಷಣೆ ಕೊಡುತ್ತಿರುವ ಸೈನಿಕರ ವಿಚಾರದಲ್ಲಿ ನಾವು ಸರ್ಕಾರದ ಜೊತೆಗಿದ್ದೇವೆ ಅನ್ನಬೇಕಿತ್ತು. ಆದರೆ ಸುರ್ಜಿತ್ ವಾಲ ಎಂಬ ವಕ್ತಾರ, ಸಾವಿನಲ್ಲೂ ರಾಜಕೀಯ ಮಾಡಿದ್ದಾರೆ.

ಆದರೆ ಪ್ರಬುದ್ಧತೆ ತೋರಿದ್ದು, ಪ್ರಿಯಾಂಕ ವಾದ್ರಾ, ಈ ಮಧ್ಯೆ ಹುತಾತ್ಮ ಯೋಧರ ಪರ ನಿಂತ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ, ಲಕ್ನೋದಲ್ಲಿ ತಮ್ಮ ಸುದ್ದಿಗೋಷ್ಠಿ ರದ್ದು ಪಡಿಸಿ ಮೌನಾಚರಣೆ ಆಚರಿಸಿದ್ದಾರೆ. ‘ರಾಜಕೀಯ ಮಾತನಾಡಲು ಸುದ್ದಿಗೋಷ್ಟಿ ಕರೆದಿದ್ದೆ. ಆದರೆ ಇದು ರಾಜಕೀಯ ಮಾತನಾಡುವ ಸಮಯವಲ್ಲ.

ಇಡೀ ದೇಶ ಹುತಾತ್ಮ ಯೋಧರ ಜೊತೆ ನಿಲ್ಲುವ ಸಮಯ. ಮೌನಾಚರಣೆ ಸಲ್ಲಿಸುವ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ಧೈರ್ಯ ತುಂಬೋಣ ಎಂದು ಪ್ರಿಯಾಂಕಾ ಹೇಳಿದರು.

ನಿಜಕ್ಕೂ ಪ್ರಿಯಾಂಕ ನಡೆಯನ್ನು ಮೆಚ್ಚಬೇಕು. ಇಂತಹುದೊಂದು ಬುದ್ದಿ ಬೇರೆ ಕಾಂಗ್ರೆಸ್ ನಾಯಕರಿಗೆ ಇರುತ್ತಿದ್ದರೆ ಎಂದೋ ಪಕ್ಷ ಉದ್ಧಾರವಾಗುತ್ತಿತ್ತು. ಆದರೇನು ಮಾಡುವುದು ಪ್ರಿಯಾಂಕ ಪತಿಯ ಬೆನ್ನ ಹಿಂದೆ ಭ್ರಷ್ಟಚಾರದ ಆರೋಪಗಳಿವೆಯಲ್ಲ.

Advertisements

Leave a Reply

%d bloggers like this: