Advertisements

ಗಲ್ಲಿಗೇರಿಸುವವರು ಬೇಕಾಗಿದ್ದಾರೆ…ಅರ್ಜಿ ಆಹ್ವಾನಿಸಿದ ಶ್ರೀಲಂಕಾ ಸರ್ಕಾರ

ಶ್ರೀಲಂಕಾದಲ್ಲಿ 42 ವರ್ಷಗಳ ಬಳಿಕ ಮರಣದಂಡನೆ ಶಿಕ್ಷೆ ಮರು ಜಾರಿಯಾಗಿದೆ. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಈ ನಿರ್ಧಾರ ಕೈಗೊಂಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಈ ನಿರ್ಧಾರ ಜಾರಿಗೆ ಬರಲಿದೆ. ಹೀಗಾಗಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ಶ್ರೀಲಂಕಾ ಅಧಿಕಾರಿಗಳು ಸಿದ್ದತೆ ಪ್ರಾರಂಭಿಸಿದ್ದಾರೆ.

ಈ ಸಂಬಂಧ ಅಪರಾಧಿಗಳನ್ನು ಗಲ್ಲಿಗೇರಿಸಲು ಇಬ್ಬರನ್ನು ನೇಮಿಸಿಕೊಳ್ಳಲು ಜೈಲು ಇಲಾಖೆ ನಿರ್ಧರಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ಶ್ರೀಲಂಕಾದ ಜೈಲು ಆಯುಕ್ತ ಪಿಎನ್​ಎಂ ಧಾನಾಸಿಂಘೆ ಮಾಹಿತಿ ನೀಡಿದ್ದಾರೆ.

ಶ್ರೀಲಂಕಾದಲ್ಲಿ ಮಾದಕವಸ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಆದರೂ ಕೆಲ ದುಷ್ಕರ್ಮಿಗಳು ಮಾದಕವಸ್ತು ಕಳ್ಳಸಾಗಣೆ ಮಾಡಿ, ಮಾರಾಟ ಮಾಡುತ್ತಿದ್ದಾರೆ. ಇಂತಹ ಅಕ್ರಮ ಎಸಗಿದವರನ್ನು ಈಗಾಗಲೆ ಬಂಧಿಸಲಾಗಿದೆ. ಅವರೆಲ್ಲರಿಗೂ ಮರಣದಂಡನೆ ಶಿಕ್ಷೆ ವಿಧಿಸಿ, ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಸಿರಿಸೇನಾ ಕೆಲದಿನಗಳ ಹಿಂದೆ ಸಂಸತ್​ನಲ್ಲಿ ಹೇಳಿಕೆ ನೀಡಿದ್ದರು.

ಈಗಾಗಲೇ ಮಾದಕವಸ್ತುಗಳನ್ನು ಮಾರಾಟ ಮಾಡಿ ಸಿಕ್ಕಿಬಿದ್ದ 48 ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇವರಲ್ಲಿ 30 ಜನರು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.ಇನ್ನುಳಿದ 18 ಜನರನ್ನು ಗಲ್ಲಿಗೇರಿಸುವುದು ಖಚಿತವಾಗಿದೆ.

1976ರಲ್ಲಿ ಮರಣ ದಂಡನೆ ಶಿಕ್ಷೆ ನೀಡುವುದನ್ನು ಶ್ರೀಲಂತಾ ಸ್ಥಗಿತಗೊಳಿಸಿತ್ತು. ಇದಾದ ನಂತರ ನಮಗೇನು ಕೆಲಸ ಎಂದು ಗಲ್ಲಿಗೇರಿಸುವವರು ಕೆಲಸ ಬಿಟ್ಟು ಹೋಗಿದ್ದಾರೆ.

Advertisements

Leave a Reply

%d bloggers like this: