12 ಗಂಟೆ ಪ್ರತಿಭಟನೆಗೆ 10 ಕೋಟಿ ರೂ. ಖರ್ಚು ಮಾಡಿದ ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರ ವಿಶೇಷ ರಾಜ್ಯ ಸ್ಥಾನಮಾನ ನೀಡಲಿಲ್ಲ ಎಂದು ಸಿಎಂ ಚಂದ್ರಬಾಬು ನಾಯ್ಡು ನವದೆಹಲಿಯಲ್ಲಿ ಸೋಮವಾರ (ಫೆ.11) ಪ್ರತಿಭಟನೆ ಆಯೋಜಿಸಿದ್ದರು. ಧರ್ಮ ಹೋರಾಟ ದೀಕ್ಷೆ ಎಂಬ ಹೆಸರಿನಲ್ಲಿ ನಡೆದ ಈ ಪ್ರತಿಭಟನೆಯು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ನಡೆದಿತ್ತು.

ಕೇವಲ 12 ತಾಸುಗಳ ಪ್ರತಿಭಟನೆಗೆ 10 ಕೋಟಿ ರೂ. ಖರ್ಚು ಮಾಡಿದ್ದಾರೆ.

ಈ ಪ್ರತಿಭಟನೆಗಾಗಿ ಜನರನ್ನು ಕರೆದೊಯ್ಯಲು ಶ್ರೀಕಾಕುಲಂ ಮತ್ತು ಅನಂತಪುರದಿಂದ ಎರಡು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿತ್ತು. ರೈಲಿನಲ್ಲಿ ಬಂದಿದ್ದ ಜನರು ಹಾಗೂ ಗಣ್ಯವ್ಯಕ್ತಿಗಳಿಗಾಗಿ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಉಳಿದುಕೊಳ್ಳಲು ವಿವಿಧ ಹೋಟೆಲ್​ಗಳಲ್ಲಿ 1,100 ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿತ್ತು.

ಈ ಎಲ್ಲ ಖರ್ಚು ವೆಚ್ಚಗಳಿಗಾಗಿ ಸರ್ಕಾರಿ ಬೊಕ್ಕಸದಿಂದ ಹಣ ಬಿಡುಗಡೆ ಮಾಡುವಂತೆ ಸಿಎಂ ಚಂದ್ರಬಾಬು ನಾಯ್ಡು ಫೆ.6ರಂದು ಆದೇಶ ಹೊರಡಿಸಿದ್ದರು.

ಇದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ದೇವೇಗೌಡರು ನಾಯ್ಡು ಅವರಿಗೆ ಜ್ಯೂಸ್ ಕೊಟ್ಟು ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದರು.

ಈ ನಾಯಕರು ಮೋದಿ ವಿರುದ್ಧ ಹೋರಾಡಲು ನಿಂತಿದ್ದಾರೆ. ಇದೇ 10 ಕೋಟಿಯಲ್ಲಿ ಆಂಧ್ರದ ನೆಲದಲ್ಲಿ ಅಭಿವೃದ್ಧಿ ಕೆಲಸ ಮಾಡಬಹುದಿತ್ತು. ಒಟ್ಟಿನಲ್ಲಿ ಜನರ ತೆರಿಗೆ ದುಡ್ಡು ಪೋಲು ಮಾಡಿದ ನಿಮಗೊಂದು ಧಿಕ್ಕಾರವಿರಲಿ.

Advertisements

One Comment on “12 ಗಂಟೆ ಪ್ರತಿಭಟನೆಗೆ 10 ಕೋಟಿ ರೂ. ಖರ್ಚು ಮಾಡಿದ ಚಂದ್ರಬಾಬು ನಾಯ್ಡು

  1. Pingback: ನಿಮ್ಮಿಬ್ಬರಲ್ಲಿ ಬೆಗ್ಗರ್ಸ್ ಯಾರು…ದಯವಿಟ್ಟು ಹೇಳಿ ಸಖತ್ ಆಗಿರೋ ಭಿಕ್ಷೆ ಹಾಕಬೇಕಾಗಿದೆ. – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: