ಮಂಡ್ಯದ ಗೌಡ್ತಿಯ ಆದಿಚುಂಚನಗಿರಿ ಭೇಟಿ : ಜೆಡಿಎಸ್ ನಾಯಕರಿಗೆ ಸಿಕ್ಕಾಪಟ್ಟೆ ಗಡಿಬಿಡಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅದ್ಯಾವ ಕ್ಷೇತ್ರ ಕಲರ್ ಫುಲ್ ಆಗಿರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಮಂಡ್ಯ ಮಾತ್ರ ಚುನಾವಣೆ ಘೋಷಣೆಯಾಗಿ, ಅಭ್ಯರ್ಥಿ ಅಂತಿಮವಾಗುವ ತನಕ ಕಲರ್ ಫುಲ್ ಆಗಿರೋದ್ರಲ್ಲಿ ಸಂಶಯವಿಲ್ಲ.

ಅಂತಹುದೊಂದು ಮುನ್ಸೂಚನೆ ಶ್ರೀಆದಿಚುಂಚನಗಿರಿಯ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ದೊರೆತಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಮಗ ಅಭಿಷೇಕ್ ಜೊತೆ ಭೇಟಿ ಕೊಟ್ಟ ಸುಮಲತಾ ಅಂಬರೀಶ್ ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತ್ರ ಶ್ರೀಕ್ಷೇತ್ರದ ಸ್ವಾಮೀಜಿಗಳೊಂದಿಗೆ ಮಾತುಕತೆ ಕೂಡಾ ನಡೆಸಿದರು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಲಭೈರವೇಶ್ವರನ ದರ್ಶನ ಪಡೆದು ಸ್ವಾಮೀಜಿಯ ಆಶೀರ್ವಾದ ಪಡೆಯಬೇಕು ಎಂದು ಎರಡು ತಿಂಗಳಿಂದ ಅಂದುಕೊಂಡಿದ್ದೆವು. ಎಲ್ಲರೂ ರಾಜಕೀಯವಾಗಿ ಮೊದಲ ಹೆಜ್ಜೆ ಪಡೆಯಲು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ ಎಂದು ನನಗೆ ಗೊತ್ತಿಲ್ಲ. ಮಾಧ್ಯಮದವರು ಹೇಳಿದ ಮೇಲೆ ಗೊತ್ತಾಗಿದೆ ಎಂದಿದ್ದಾರೆ. ( ಒಂದು ಕಡೆ ಮಂಡ್ಯದಲ್ಲಿ ಸುಮಲತಾ ನಿಲ್ಲಬೇಕು ಅನ್ನುವ ಕಾರ್ಯಕರ್ತರ ಒತ್ತಡ ಮತ್ತೊಂದು ಕಾಕತಾಳೀಯ ಅನ್ನುವಂತೆ ಸುಮಲತಾ ಅವರ ದೇವಸ್ಥಾನ ಭೇಟಿ ಗಮನಾರ್ಹ)

ಇದೇ ವೇಳೆ ರಾಜಕೀಯ ಪ್ರವೇಶ ಕುರಿತಂತೆ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್ ಜೀವನದಲ್ಲಿ ಯಾರೇ ಗೆಲ್ಲಿಸಿದ್ದರೂ, ಸೋಲಿಸಿದ್ದರೂ ಅಭಿಮಾನಿಗಳು ಮಾತ್ರ ಯಾವತ್ತೂ ಅವರ ಜೊತೆಯಲ್ಲಿಯೇ ಇದ್ದರು. ಆ ಅಭಿಮಾನಿಗಳ ಪ್ರೀತಿ, ವಿಶ್ವಾಸ, ಆಸೆ ಏನಿದೆ ಅದನ್ನು ನೆರವೇರಿಸಬೇಕು ಎಂಬ ಆಸೆ ನನಗೂ ಇದೆ.

ಅಭಿಮಾನಿಗಳ ಆಸೆ ಏನಿತ್ತು ಅದಕ್ಕೆ ಸೋಲಾಗಬಾರದು, ಗೆಲುವಾಗಬೇಕು ಅನ್ನುವುದೇ ನನ್ನ ಆಸೆ.
ಸದ್ಯಕ್ಕೆ ಈ ನಿರ್ಧಾರ ನನ್ನೊಬ್ಬಳ ಕೈಯಲ್ಲಿಲ್ಲ. ಎಲ್ಲರನ್ನೂ ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧರಿಸಬೇಕಿದೆ. ಅದಕ್ಕೂ ಕಾಲಕೂಡಿ ಬರಬೇಕು. ನಾನು ಯೋಚನೆ ಮಾಡಬೇಕು ಎಂದರು.

ಅಂಬರೀಶ್ ಅವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದವರು ಎಂದೇ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ನಾನು ಕೂಡ ಖಂಡಿತವಾಗಿಯೂ ಕಾಂಗ್ರೆಸ್ಸನಿಂದಲೇ ಸ್ಪರ್ಧಿಸಲು ಅಪೇಕ್ಷಿಸುತ್ತೇನೆ. ಒಂದು ವೇಳೆ ಜೆಡಿಎಸ್ ಗೆ ಟಿಕೆಟ್ ಕೊಟ್ಟರೆ ಪಕ್ಷೇತರವಾಗಿ ನಿಲ್ಲಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಆದ್ದರಿಂದ ಅವರ ಆಸೆಯನ್ನು ನಾನು ಗೆಲ್ಲಿಸುತ್ತೇನೆ ಎಂದಿದ್ದಾರೆ.

ನನಗೆ ರಾಜಕೀಯಕ್ಕೆ ಬರಲು ಇಷ್ಟವಿಲ್ಲ. ಆದರೂ ಜನರ ಒತ್ತಡ ಹೆಚ್ಚಿದೆ. ಅಂಬರೀಶ್ ಅಭಿಮಾನಿಗಳು ನನ್ನ ಜೊತೆಗಿದ್ದಾರೆ ಅನ್ನುವುದೇ ನನಗೆ ಸಂತೋಷ ತಂದಿದೆ.

ರಾಜಕೀಯಕ್ಕೆ ಬರಬೇಕು ಎಂದು ಜನ ಮಾಡುತ್ತಿರುವ ಒತ್ತಾಯವನ್ನು ಗೌರವಿಸುವ ನಾನು ದುಡುಕಿ ನಿರ್ಧಾರ ಕೈಗೊಳ್ಳುವುದಿಲ್ಲ. ಹಿರಿಯರ ಸಲಹೆ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ.
ಜೊತೆಗೆ ಮಂಡ್ಯ ಬಿಟ್ಟು ಬೇರೆ ಕಡೆಯಿಂದ ನಾನು ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲಿಗೆ ಜೆಡಿಎಸ್ ಮಂಡ್ಯ ಕ್ಷೇತ್ರವನ್ನು ಮರೆಯುವುದು ಅನಿವಾರ್ಯವಾಗಿದೆ. ಯಾಕೆಂದರೆ ಅದ್ಯಾವ ಪಕ್ಷದ ಕಾರ್ಯಕರ್ತರೇ ಇರಲಿ ಅವರು ಕಾರ್ಯಕರ್ತರಿಗಿಂತ ಮುಂಚೆ ಅಂಬರೀಶ್ ಅಭಿಮಾನಿ. ಇದು ಮಂಡ್ಯದ ಅಲಿಖಿತ ಸಂಪ್ರದಾಯ.

ಈಗ ಸುಮಲತಾ ಅವರು ಕಾಂಗ್ರೆಸ್ ಟಿಕೆಟ್ ಮೊದಲ ಆದ್ಯತೆ ಅಂದಿದ್ದಾರೆ. ಅಲ್ಲಿಗೆ ಜೆಡಿಎಸ್ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಲೇಬೇಕು. ಕೊಟ್ಟರೆ ನಿಖಿಲ್ ಕುಮಾರಸ್ವಾಮಿ ಬೇರೆ ಕ್ಷೇತ್ರವನ್ನು ನೋಡಿಕೊಳ್ಳಬೇಕಾಗುತ್ತದೆ. ನಿಖಿಲ್ ಅವರನ್ನು ಗೆಲ್ಲಿಸಬಹುದಾದ ಬೇರೆ ಯಾವ ಕ್ಷೇತ್ರವೂ ಸದ್ಯಕ್ಕೆ ಖಾಲಿ ಇಲ್ಲ.

ಒಂದು ವೇಳೆ ಮಂಡ್ಯವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡದೇ ತಾನೇ ಕ್ಷೇತ್ರವನ್ನು ಉಳಿಸಿಕೊಂಡಿತು ಅಂದರೆ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುತ್ತಾರೆ. ಆಗ ಅಂಬರೀಶ್ ಅಭಿಮಾನಿಗಳು ಸುಮಲತಾ ಅವರ ಪರವಾಗಿ ಪ್ರಚಾರಕ್ಕೆ ಇಳಿಯುತ್ತಾರೆ. ಚಂದನವನವೂ ಸುಮಲತಾ ಪರವಾಗಿ ಮಂಡ್ಯಕ್ಕೆ ಧಾವಿಸುತ್ತದೆ.

ಇಂತಹ ಸಂದರ್ಭದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಕಣಕ್ಕೆ ಇಳಿದರೂ ಜೆಡಿಎಸ್ ಗಿಂತ ಹೀನಾಯವಾಗಿ ಸೋಲುತ್ತದೆ.

ಒಟ್ಟಿನಲ್ಲಿ ಮಂಡ್ಯದ ಗೌಡ್ತಿಯ ತಾಕತ್ತು ಏನು ಅನ್ನುವುದನ್ನು ಸುಮಲತಾ ತೋರಿಸಬೇಕಾಗಿಲ್ಲ. ರೆಬೆಲ್ ಸ್ಟಾರ್ ಅಭಿಮಾನಿಗಳೇ ಅದನ್ನು ತೋರಿಸಿಕೊಡ್ತಾರೆ ಅನ್ನುವುದರಲ್ಲಿ ಸಂಶಯವಿಲ್ಲ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: