ಕಾನೂನು ಎದುರಿಸುವ ತಾಕತ್ತು ತೋರಿದ ಬಿಎಸ್ವೈ ಮಂಜುನಾಥನ ಮುಂದೆ ಸತ್ಯ ಒಪ್ಪಿಕೊಳ್ಳಬೇಕಾಯ್ತಲ್ಲ

ಯಡಿಯೂರಪ್ಪನವರು ಇತ್ತೀಚಿಗೆ ನಡೆದುಕೊಳ್ಳುವ ರೀತಿ ನೋಡಿದರೆ, ಅವರು ಸಿಎಂ ಕುಮಾರಸ್ವಾಮಿ ಅವರನ್ನು ಓವರ್ ಟೇಕ್ ಮಾಡುವುದು ಖಂಡಿತಾ.

ರಾಜ್ಯ ರಾಜಕಾರಣದಲ್ಲಿ Hir and Run, ಯು ಟರ್ನ್ ಪರಿಣಿತರು ಯಾರು ಅಂದರೆ ಮೊದಲಿಗೆ ಬರುವುದು ಕುಮಾರಸ್ವಾಮಿ ಹೆಸರು. ಆದರೆ ಇದೀಗ ಕುಮಾರಸ್ವಾಮಿಯವರದ್ದು ಯು ಟರ್ನ್ ಅದ್ಯಾವ ಲೆಕ್ಕ, ನನಗೆ ಅವರಿಗಿಂತ ಸೂಪರ್ ಆಗಿ ಯು ಟರ್ನ್ ಬರುತ್ತದೆ ಎಂದು ಯಡಿಯೂರಪ್ಪ ತೋರಿಸಿಕೊಟ್ಟಿದ್ದಾರೆ.  

ಅವತ್ತು ಬಜೆಟ್ ಮಂಡಿಸುವ ಮುನ್ನ ಆಪರೇಷನ್ ಕಮಲ ಕುರಿತಂತೆ ಯಡಿಯೂರಪ್ಪ ನಡೆಸಿದ ಆಡಿಯೋ ಕ್ಲಿಪ್ ಅನ್ನು ಸಿಎಂ ಕುಮಾರ ಸ್ವಾಮಿ ಫೆಬ್ರವರಿ 8 ರಂದು ಬಿಡುಗಡೆ ಮಾಡಿದ್ದರು.

ಅಂದು ಆಡಿಯೋದಲ್ಲಿ ಇರುವುದು ನಾನಲ್ಲ, ಅದು ನನ್ನ ದನಿ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತಿ ಎಂದು ಯಡಿಯೂರಪ್ಪ ಘೋಷಿಸಿದ್ದರು. ಅವತ್ತು ಯಡಿಯೂರಪ್ಪ ಗುಡುಗಿದ ಶೈಲಿ ನೋಡಿದರೆ ಹೌದಲ್ವ, ಯಡಿಯೂರಪ್ಪ ಮಾತಿನಲ್ಲಿ ಸತ್ಯಾಂಶವಿದೆ ಅನ್ನಿಸಿತ್ತು.

ಆದರೆ ಇಂದು ಅದು ನನ್ನದೇ ದನಿ, ಜೆಡಿಎಸ್ ಶಾಸಕರ ಪುತ್ರನೊಂದಿಗೆ ನಾನೇ ಮಾತನಾಡಿದ್ದು, ಶರಣ್ ಗೌಡ ಬಂದಿದ್ದು ಕೂಡಾ ನಿಜ ಎಂದು ಯು ಟರ್ನ್ ಹೊಡೆದಿದ್ದಾರೆ.

ಮುಖ್ಯಮಂತ್ರಿಯೇ ಈ ವ್ಯಕ್ತಿಯನ್ನು ಕಳುಹಿಸಿ ರೆಕಾರ್ಡ್ ಮಾಡಿಸಿದ್ದಾರೆ. ಎಂ.ಎಲ್.ಸಿ ಸ್ಥಾನಕ್ಕೆ ಬೇಡಿಕೆ ಮಾತ್ರವಲ್ಲದೆ  25 ಕೋಟಿ ಕೇಳುವಂತೆ ಮಾಡಿದ್ದಾರೆ. ಇವೆಲ್ಲಾ ಕುಮಾರಸ್ವಾಮಿ ಕುತಂತ್ರ ಎಂದು ಪುಟ್ಟದೊಂದು ಮೊಂಡು ಬಾಣವನ್ನು ಕುಮಾಸ್ವಾಮಿಯತ್ತ ಎಸೆದಿದ್ದಾರೆ.

ಹಾಗಾದರೆ ಯಡಿಯೂರಪ್ಪ ಅದ್ಯಾಕೆ ಬೆದರಿದರು. ಅದಕ್ಕೆ ಕಾರಣ ಧರ್ಮಸ್ಥಳ.

ಯಾವಾಗ ಕುಮಾರಸ್ವಾಮಿ ಧರ್ಮಸ್ಥಳದ ನೆಲದಲ್ಲಿ ನಿಂತು, ಆಡಿಯೋದಲ್ಲಿ ಇರುವುದೇ ಯಡಿಯೂರಪ್ಪ ಖಚಿತ, ಒಂದು ವೇಳೆ ಅದು ಸುಳ್ಳಾದರೆ ನಾನೇ ರಾಜಕೀಯ ನಿವೃತಿ ಪಡೆಯುತ್ತೇನೆ ಎಂದು, 10 ವರ್ಷಗಳ ಹಳೆ ಅಣೆ ಪ್ರಮಾಣದ ಕಥೆಯನ್ನು ಪ್ರಸ್ತಾಪಿಸಿದ್ದರು.

ಅಷ್ಟೇ, ಯಾವಾಗ ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ನಿಂತು ಈ ಮಾತುಗಳನ್ನು ಹೇಳಿದರೂ ಯಡಿಯೂರಪ್ಪ ಬೆದರಿದ್ದಾರೆ. ಹಿಂದಿನ ಆಣೆ ಪ್ರಮಾಣದಿಂದ ಏನೆಲ್ಲಾ ಪರಿಣಾಮ ಬೀರಿತ್ತು ಅನ್ನುವುದು ನೆನಪಿಗೆ ಬಂದಿದೆ. ಹೀಗಾಗಿ ಆಗಿದ್ದು ಆಗ್ಲಿ ಎಂದು ಸತ್ಯ ಒಪ್ಪಿಕೊಂಡಿದ್ದಾರೆ.

ಹಾಗಾದರೆ ಅವತ್ತು ಅದೊಂದು ಮಿಮಿಕ್ರಿ, ಅದರಲ್ಲಿ ಇರುವುದು ನನ್ನ ದನಿಯಲ್ಲ ಎಂದು ಹೇಳಿದ್ಯಾಕೆ ಯಡಿಯೂರಪ್ಪನವರೇ. ಯಾರನ್ನು ಬಕ್ರ ಮಾಡಲು ಹೊರಟಿದ್ದೀರಿ. ಅವತ್ತೇ ಸತ್ಯ ಒಪ್ಪಿಕೊಂಡದರೆ ನಿಮ್ಮ ಮೇಲೆ ನಂಬಿಕೆ ಉಳಿಯುತ್ತಿತ್ತು.

Advertisements

One Comment on “ಕಾನೂನು ಎದುರಿಸುವ ತಾಕತ್ತು ತೋರಿದ ಬಿಎಸ್ವೈ ಮಂಜುನಾಥನ ಮುಂದೆ ಸತ್ಯ ಒಪ್ಪಿಕೊಳ್ಳಬೇಕಾಯ್ತಲ್ಲ

  1. Pingback: ನಾನು ಪ್ರಧಾನಿಯಾಗಿರಬೇಕಿತ್ತು… ಅನಂತ್​ ಕುಮಾರ್​ ಹೆಗಡೆಯನ್ನ ಜೈಲಿಗೆ ಹಾಕ್ತಿದ್ದೆ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: