Advertisements

ನಟಸಾರ್ವಭೌಮನಿಗೆ ಬಿಯರ್ ಅಭಿಷೇಕ – ಪುನೀತ್ ರಾಜ್ ಕುಮಾರ್ ಗರಂ

ಇತ್ತೀಚೆಗೆ ಬಿಡುಗಡೆಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ.

ಇನ್ನು ಅಭಿಮಾನಿಗಳ ಅಬ್ಬರ ಕೇಳಬೇಕಾ, ಪ್ರೀತಿಯ ನಾಯಕನ ಸಿನಿಮಾ ಬಿಡುಗಡೆಯಾದ ಜೋಶ್ ನಲ್ಲಿ ಅಭಿಮಾನಿಯೊಬ್ಬ ಪುನೀತ್ ಪೋಸ್ಟರ್‌ಗೆ ಬಿಯರ್ ಅಭಿಷೇಕ ಮಾಡಿದ್ದ.

ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಮಾತ್ರವಲ್ಲದೆ ಸಾಕಷ್ಟು ವಿರೋಧವೂ ಕೇಳಿ ಬಂದಿತ್ತು. ಇಂತಹ ಅಭಿಮಾನಿಗಳಿಗೆ ಅಪ್ಪು ಬುದ್ದಿ ಮಾತು ಹೇಳಬೇಕು ಅನ್ನುವ ಸಲಹೆ ಬಂದಿತ್ತು.

ಇದೀಗ ಈ ಬಗ್ಗೆ ಪವರ್ ಸ್ಟಾರ್ ಪ್ರತಿಕ್ರಿಯಿಸಿದ್ದು, ಸಿನಿಮಾದಲ್ಲಿ ನಾವು ಏನೇನೋ ಮಾಡುತ್ತೇವೆ. ಚಿತ್ರದಲ್ಲಿ ಕೊಲೆ ಮಾಡುತ್ತೇವೆ. ಹಾಗಂತ ನೀವು ನಿಜ ಜೀವನದಲ್ಲಿ ಕೊಲೆ ಮಾಡಿ ಎಂದು ಹೇಳುವುದಿಲ್ಲ. ಇದು ಕೇವಲ ಒಂದು ಹಾಡಿನ ದೃಶ್ಯವಷ್ಟೇ. ಸಮಾಜಕ್ಕೆ ಸಂದೇಶ ನೀಡುವ ಉದ್ದೇಶ ಅಲ್ಲಿದೆ. ಹಾಗಂತ ಬಿಯರ್ ಉಪಯೋಗಿಸುವುದು ಸರಿಯಲ್ಲ. ಆ ರೀತಿ ಮಾಡುವುದು ಬೇಡ ಎಂದು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಮೆಜಿಸ್ಟಿಕ್ ನ ತ್ರಿವೇಣಿ ಚಿತ್ರಮಂದಿರದಲ್ಲಿ ಅಪ್ಪು ಚಿತ್ರ ಪ್ರದರ್ಶನವಾಗುತ್ತಿದ್ದು, ಮೊದಲ ಶೋ ವೇಳೆ ಅಭಿಮಾನಿಯೊಬ್ಬ ಪುನೀತ್ ಪೋಸ್ಟರ್ ಗೆ ಬಿಯರ್ ಅಭಿಷೇಕ ಮಾಡಿದ್ದ.

ಸಿನಿಮಾ ನಟರ ಚಿತ್ರಗಳು ಬಿಡುಗಡೆಯಾದಾಗ ಸಾಮಾನ್ಯವಾಗಿ ಸ್ಟಾರ್ ನಟರ ಕಟೌಟ್ ಗಳಿಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಸಹಿ ಸಂಭ್ರಮಿಸುವುದು ಸಾಮಾನ್ಯ.

ಒಂದು ಹೆಜ್ಜೆ ಮುಂದೆ ಹೋಗಿ ಕಟೌಟ್ ಗಳಿಗೆ, ಪೋಸ್ಟರ್ ಗಳಿಗೆ ಹಾಲಾಭಿಷೇಕ ಮಾಡುವುದು ಕೂಡಾ ಉಂಟು.

ಆದರೆ ಇತ್ತೀಚಿನ ದಿನಗಳಲ್ಲಿ ಸಂಭ್ರಮಿಸುವ ವಿಧಾನವೂ ಬದಲಾಗುತ್ತಿದೆ ಅನ್ನುವುದನ್ನು ತೋರಿಸಲು ಈ ಹುಚ್ಚು ಅಭಿಮಾನಿ ತೋರಿಸಲು ಹೋಗಿ ಪೋಸ್ಟರ್, ಕಟೌಟ್ ಗಳಿಗೆ ಬಿಯರ್ ಅಭಿಷೇಕ ಮಾಡಿ ಖುಷಿ ಪಟ್ಟಿದ್ದ.

Advertisements

Leave a Reply

%d bloggers like this: