Advertisements

ಸಿಟ್ಯಾಕೋ…ಸಿಡುಕ್ಯಾಕೋ : ಸೆಲ್ಫಿ ತೆಗೆಯಲು ಮುಂದಾದ ಅಭಿಮಾನಿಗೆ ಧರ್ಮದೇಟು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳಲ್ಲಿ ನಿದ್ದೆರಾಮಯ್ಯ ಎಂದು ಕರೆಸಿಕೊಂಡಿದ್ದರು. ಆದರೆ ಇದೀಗ ಅವರು ಸಿಟ್ಟು ರಾಮಯ್ಯ, ಸಿಡುಕು ರಾಮಯ್ಯನಾಗುತ್ತಿದ್ದಾರೆ.

ಇಂದು ಮತ್ತೆ ತನ್ನ ಸಿಟ್ಟನ್ನು ಅಭಿಮಾನಿಗಳ ಮೇಲೆ ತೋರಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಸದನ ಮುಂದೂಡಿಕೆಯಾಗುತ್ತಿದ್ದಂತೆ ಕನಕ ಭವನ ಉದ್ಘಾಟನೆ ಸಲುವಾಗಿ ಮೈಸೂರಿಗೆ ಸಿದ್ದರಾಮಯ್ಯ ಆಗಮಿಸಿದ್ದಾರೆ.

ಈ ವೇಳೆ ಅಭಿಮಾನಿಯೊಬ್ಬ ನೆಚ್ಚಿನ ನಾಯಕನೊಂದಿಗೆ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಮುಂದೆ ಸಾಗುತ್ತಿದ್ದ ಸಿದ್ದು ಸಾಹೇಬ್ರು ಹಿಂದೆ ತಿರುಗಿ ಘರ್ಜಿಸಿದ್ದಾರೆ.

ಅಭಿಮಾನಿ ಸೆಲ್ಪಿ ಮೋಹದಿಂದ ಗರಂ ಆದ ಸಿದ್ದರಾಮಯ್ಯ ಅಭಿಮಾನಿಯನ್ನು ಗುರಾಯಿಸಿ ಬೆನ್ನಿಗೆ ಒಂದೇಟು ಬಿಗಿದಿದ್ದಾರೆ. ಮಾತ್ರವಲ್ಲದೆ ಆತನನ್ನು  ಹಿಂದಕ್ಕೆ ತಳ್ಳಿ ನಡಿ ಆಚೆ ಎಂದಿದ್ದಾರೆ.

ಹಿಂದೊಮ್ಮೆ ಮಹಿಳಾ ಕಾರ್ಯಕರ್ತೆಯೊಬ್ಬರನ್ನು ಹಿಗ್ಗಾ ಮುಗ್ಗಾ ಜಾಡಿಸಿ ಮೈಕ್ ಕಿತ್ತುಕೊಳ್ಳಲಿ ಹೋಗಿ ಬಟ್ಟೆ ಕೈಯಲ್ಲಿ ಬಂದ ಕಾರಣಕ್ಕೆ ಸಿದ್ದರಾಮಯ್ಯ ಸುದ್ದಿಯಾಗಿದ್ದರು.

ಸಿದ್ದರಾಮಯ್ಯ ಮುಂದೆ ಟೇಬಲ್ ಕುಟ್ಟಿದ್ರೆ ಹುಷಾರ್ :ಸಿದ್ದು ಬೆವರಿಳಿಸಿದ ತಾ.ಪಂ ಮಾಜಿ ಅಧ್ಯಕ್ಷೆ

ಏನೇ ಇರಲಿ ಮಾಜಿ ಸಿಎಂ ಸಾಹೇಬ್ರು ಒಂದ್ಸಲ ಬಿಪಿ ಚೆಕ್ ಮಾಡಿಕೊಳ್ಳುವುದು ಬೆಟರ್.  

ಕಳೆದ ವರ್ಷದ ಇದೇ ಅವಧಿಯಲ್ಲಿ ಬಳ್ಳಾರಿಯಲ್ಲಿ ಡಿಕೆಶಿ ಸೆಲ್ಫಿ ತೆಗೆಯಲು ಮುಂದಾಗಿದ್ದ ವ್ಯಕ್ತಿಯ ಕೈ ತಳ್ಳಿ ಮೊಬೈಲ್ ಕೆಳಗೆ ಬೀಳಿಸಿದ್ದರು.

2017ರ ನವೆಂಬರ್ ನಲ್ಲಿ ಬೆಳಗಾವಿಯಲ್ಲಿ ಸೆಲ್ಫಿ ಕ್ಲಿಕ್ಕಿಸಲು ಬಂದಿದ್ದ ವಿದ್ಯಾರ್ಥಿಯೊಬ್ಬನಿಗೆ ಇಂಧನ ಸಚಿವ ಡಿಕೆ ಶಿವಕುಮಾರ್ ಏಟು ಕೊಟ್ಟಿದ್ದನ್ನು ಇದೇ ವೇಳೆ ಸ್ಮರಿಸಿಕೊಳ್ಳಬಹುದಾಗಿದೆ.

Advertisements

One Comment on “ಸಿಟ್ಯಾಕೋ…ಸಿಡುಕ್ಯಾಕೋ : ಸೆಲ್ಫಿ ತೆಗೆಯಲು ಮುಂದಾದ ಅಭಿಮಾನಿಗೆ ಧರ್ಮದೇಟು

  1. Pingback: ನಿಮ್ಮಿಬ್ಬರಲ್ಲಿ ಬೆಗ್ಗರ್ಸ್ ಯಾರು…ದಯವಿಟ್ಟು ಹೇಳಿ ಸಖತ್ ಆಗಿರೋ ಭಿಕ್ಷೆ ಹಾಕಬೇಕಾಗಿದೆ. – torrentspree

Leave a Reply

%d bloggers like this: