ನಾಡು ಹೋಗು ಅಂತಿದೆ, ಕಾಡು ಬಾ ಅಂತಿದಿ ಯಾಕೆ ಸ್ವಾಮಿ ನಿಮಗಿದು – BSY ಗೆ ತಿವಿದ ಶಾಸಕರ ಪುತ್ರ

ಗುರುಮಠಕಲ್ ನ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಒಡ್ಡಿದ ಆಮಿಷದ ಆಡಿಯೋವನ್ನು ಇಂದು ಬಿಡುಗಡೆ ಮಾಡಲಾಗಿದೆ.

ಇಂದು ಬೆಳಗ್ಗೆ ತುರ್ತು ಪತ್ರಿಕಾಗೋಷ್ಟಿ ಕರೆದ ಸಿಎಂ ಕುಮಾರಸ್ವಾಮಿ ಶರಣಗೌಡ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಆಪರೇಷನ್ ಕಮಲಕ್ಕೆ ಸಾಕ್ಷಿ ಕೊಟ್ಟಿದ್ದಾರೆ.

ರಾತ್ರಿ 11.30ರ ಸುಮಾರಿಗೆ ಒಂದು ಕರೆ ಬಂತು ಆ ಕಡೆಯಿಂದ ಯಡಿಯೂರಪ್ಪ ಅವರು ನಿಮ್ಮ ಜೊತೆ ಮಾತನಾಡ್ಬೇಕಂತೆ ಎಂದು ಹೇಳಿದರು ನಾನು ಕರೆಯನ್ನು ಕಟ್ ಮಾಡಿದೆ. ಬಳಿಕ ಎರಡನೇ ಬಾರಿಯೂ ಅದೇ ನಂಬರ್ ನಿಂದ ಕಾಲ್ ಬಂದಾಗ ರಿಸೀವ್ ಮಾಡಲಿಲ್ಲ, ಮೂರನೇ ಬಾರಿಗೆ ಬೇರೆ ನಂಬರ್ ನಿಂದ ಕಾಲ್ ಬಂದಾಗ ರಿಸೀವ್ ಮಾಡಿದೆ. ಆಗ ಅತ್ತ ಕಡೆಯಿಂದ ಯಡಿಯೂರಪ್ಪ ಅವರು ಮಾತನಾಡಿ ನಾನು ದೇವದುರ್ಗ ಐಬಿಯಲ್ಲಿದ್ದೇನೆ ಇಲ್ಲಿಗೆ ನೀವು ಬರಬೇಕು ಎಂದು ಹೇಳಿದರು.

ಬಳಿಕ ನಾನು ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿ ನಾನೇ ಕಾಲ್ ಮಾಡಿ ಆ ಕರೆಯನ್ನು ಕುಮಾರಸ್ವಾಮಿಯವರಿಗೆ ಕೇಳಿಸಿದೆ. ಆ ನಂತರ ಕುಮಾರಸ್ವಾಮಿಯವರ ಸಲಹೆಯಂತೆ ಐಬಿಗೆ ಹೋದೆ.

ಸಂಜೆ 12.20ರ ಸುಮಾರಿಗೆ ಯಾದಗಿರಿಯಿಂದ ದೇವದುರ್ಗ ಐಬಿ ತಲುಪಿದೆ. ಅಲ್ಲಿ ಒಬ್ಬರು ಪತ್ರಕರ್ತರು, ಹಾಸನ ಶಾಸಕ ಪ್ರೀತಂ ಗೌಡ ಮತ್ತು ಮತ್ತೊಬ್ಬ ಶಾಸಕರಿದ್ದರು, ಈ ವೇಳೆ ನಿನ್ನ ತಂದೆಗೆ ವಯಸ್ಸಾಗಿದೆ. ಹೀಗಾಗಿ ನೀನು ಬಿಜೆಪಿಗೆ ಬಾ. ಬಳಿಕ ನಿನ್ನನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡುತ್ತೇವೆ. ನೀನು ಸೀದಾ ಇಂದೇ ಮುಂಬೈಗೆ ಹೋಗು ಎಂದು ಶಾಸಕರ ಪುತ್ರ ಶರಣಗೌಡಗೆ ಆಫರ್ ನೀಡಿದ್ದಾರೆ.

ಮಾತುಕತೆಯಲ್ಲಿ 50 ಕೋಟಿ ಆಫರ್ ನೀಡಿದರು. ಚುನಾವಣೆ ನಡೆದರೆ ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದರು. ಈ ವೇಳೆ ತಂದೆಯವರು ಅನರ್ಹರಾದರೆ ಏನು ಎಂದು ಕೇಳಿದ್ದಕ್ಕೆ ಅದಕ್ಕೆ ಏನು ತಲೆ ಕೆಡಿಸಿಕೊಳ್ಳಬೇಡ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು 50 ಕೋಟಿ ರೂ. ನೀಡಿ ಬುಕ್ ಮಾಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಕೋರ್ಟ್ ನಲ್ಲಿ ಏನಾದರೆ ಆದರೆ ಎಂದು ಕೇಳಿದ್ದಕ್ಕೆ ಅದಕ್ಕೆಲ್ಲ ಹೆದರುವ ಅಗತ್ಯವಿಲ್ಲ. ಅಮಿತ್ ಶಾ, ಮೋದಿ ಇದ್ದಾರೆ. ಸುಪ್ರೀಂ ಕೋರ್ಟ್ ಜಡ್ಜ್ ಗಳನ್ನು ಬುಕ್ ಮಾಡಿದ್ದಾರೆ ಎಂದು ಹೇಳಿದರು.

ನಿನಗೆ ಖಾತೆ ಕೊಡ್ತೀವಿ ಎಷ್ಟು ಬೇಕಾದ್ರೂ ದುಡ್ಡು ಮಾಡ್ಕೋ. ನಮ್ಮ ಜೊತೆ ಈಗಾಗಲೇ 16 ಮಂದಿ ಶಾಸಕರಿದ್ದಾರೆ. ನೀನು ಬಂದ್ರೆ 17 ಆಗುತ್ತದೆ ಎಂದು ಬಿಜೆಪಿಯವರು ಆಫರ್ ನೀಡಿರುವುದಾಗಿ ಶರಣಗೌಡ ಇದೇ ವೇಳೆ ತಿಳಿಸಿದ್ದಾರೆ.

ಇದೇ ವೇಳೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಶರಣಗೌಡ, ನಾವು ದೇವೇಗೌಡರ ಕುಟುಂಬಕ್ಕೆ ಮೋಸ ಮಾಡಲು ಸಾಧ್ಯವಿಲ್ಲ.ತಂದೆಯವರು 6 ಸಲ ಚುನಾವಣೆಯಲ್ಲಿ ಸ್ಪರ್ಧಿಸಿ 1 ಸಲ ಗೆದ್ದಿದ್ದಾರೆ. ಆ ಗೆಲುವಿಗೆ ಕಾರಣ ಕುಮಾರಸ್ವಾಮಿ ಹೀಗಾಗಿ ನಾವು ಪಕ್ಷ ಬಿಡುವುದಿಲ್ಲ.

ನಾಡು ಹೋಗು ಅಂತಿದೆ, ಕಾಡು ಬಾ ಅಂತಿದಿ ಆದ್ರೂ ಈ ಎಲ್ಲಾ ಕಾರ್ಯಕ್ರಮಗಳನ್ನು ಯಡಿಯೂರಪ್ಪ ಅದ್ಯಾಕೆ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಶಾಸಕರ ಪುತ್ರ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: