Advertisements

ನಾನು ಕನ್ನಡದವಳು, ಕರ್ನಾಟಕದವಳು : ಅನಿತಾ ಕುಮಾರಸ್ವಾಮಿ :ಪತಿ ಪತ್ನಿಯ ಹೇಳಿಕೆಗೆ ತಾಳೆಯೇ ಇಲ್ಲ

ಇತ್ತೀಚೆಗೆ ಸುಮಲತಾ ಅಂಬರೀಶ್ ಜಾತಿ ವಿಚಾರದ ಕೆದಕಿದ್ದ ಜೆಡಿಎಸ್ ಮುಖಂಡ ಶ್ರೀಕಂಠೇಗೌಡ ಎಡವಟ್ಟು ಮಾಡಿಕೊಂಡಿದ್ದರು. ಸುಮಲತಾ ಮಂಡ್ಯದ ಗೌಡ್ತಿಯಲ್ಲ, ಅವರು ಆಂಧ್ರದ ಗೌಡ್ತಿ ಅಂದಿದ್ದರು.

ಇದು ಅಭಿಮಾನಿಗಳು ಮಾತ್ರವಲ್ಲ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಪುತ್ರ ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಕುಮಾರಸ್ವಾಮಿ ಆಡಿದ ಮಾತನ್ನು ಜನ ಟ್ರೋಲ್ ಮಾಡಿದ್ದರು.

ನನ್ನ ಪತ್ನಿ ಆಂಧ್ರ ಮೂಲದವರು ಎಂದು ಕುಮಾರಸ್ವಾಮಿ ಹೇಳಿರುವುದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಇದರಿಂದ ದೇವೇಗೌಡರ ಕುಟುಂಬ ತೀವ್ರ ಮುಜುಗರಕ್ಕೂ ಒಳಗಾಗಿತ್ತು.

ಇದೀಗ ವಿಧಾನಸೌಧದಲ್ಲಿ ಮಾತನಾಡಿರುವ ಶಾಸಕಿ ಅನಿತಾ ಕುಮಾರಸ್ವಾಮಿ,ನಾನು ಕನ್ನಡದವಳು, ಕರ್ನಾಟಕಕ್ಕೆ ಸೇರಿದವಳು, ಕನ್ನಡ ಸಂಸ್ಕೃತಿಯನ್ನು ಅನುಸರಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ನಾನು ತೆಲುಗಿನವಳು ಅನ್ನುವುದು ಸುಳ್ಳು ಎಂದಿರುವ ಅವರು ಪತಿ ಸಿಎಂ ಕುಮಾರಸ್ವಾಮಿ ಹೇಳಿರುವುದು ಸುಳ್ಳು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ನಾನು ಕೋಲಾರ ಚಿಕ್ಕಬಳ್ಳಾಪುರ ಕಡೆಯವಳು, ಕೋಲಾರ ಆಂಧ್ರ ಗಡಿ ಭಾಗಕ್ಕೆ ಸಮೀಪದಲ್ಲಿದೆ ಅನ್ನುವುದು ನಿಜ. ಆದರೆ ಅದು ಕರ್ನಾಟಕದ ಭಾಗವಾಗಿದೆ. ಹೀಗಾಗಿ ನಾನು ಈ ನೆಲದ ಸಂಸ್ಕೃತಿ ಸಂಸ್ಕಾರವನ್ನು ಅನುಸರಿಸುತ್ತೇನೆ, ಕೋಲಾರ ಭಾಗದಲ್ಲಿ ತೆಲುಗು ಮಾತನಾಡುತ್ತಾರೆ. ಆದರೆ ನನಗೆ ತೆಲುಗಿನ ಒಂದು ಅಕ್ಷರವೂ ಬರುವುದಿಲ್ಲ ಎಂದಿದ್ದಾರೆ.

ಸಿನಿಮಾಕ್ಕೆ ಸಂಬಂಧಪಟ್ಟಂತೆ ಕುಮಾರಸ್ವಾಮಿ ಮಾತನಾಡಿದ್ದಾರೆ ಎಂದು ಹೇಳಿರುವ ಅನಿತಾ ಕುಮಾರಸ್ವಾಮಿ ಅವೆಲ್ಲಾ ಸಿನಿಮಾ ಸಲುವಾಗಿನ ಗಿಮಿಕ್ ಎಂದು ಒಪ್ಪಿಕೊಂಡಿದ್ದಾರೆ.

ಒಟ್ಟಿನಲ್ಲಿ ಜನರಿಗೆ ಇದೀಗ ಟ್ರೋಲ್ ಮಾಡಲು ಮತ್ತೊಂದು ವಿಷಯ ಸಿಕ್ಕಿದ ಹಾಗಾಯ್ತು. ಕುಮಾರಸ್ವಾಮಿ ಅಂದು ಹೇಳಿದ್ದು ಸುಳ್ಳೋ, ಅನಿತಾಕ್ಕ ಇಂದು ಹೇಳುತ್ತಿರುವುದು ಸತ್ಯವೋ ಟೋಟಲ್ ಗೊಂದಲ ಸ್ವಾಮಿ ಗೊಂದಲ…

Advertisements

Leave a Reply

%d bloggers like this: