Advertisements

ಹಾಗೇ ಸುಮ್ಮನೆ ಕಾಲ್ ಕೆಜಿ ಪ್ರೀತಿ : ಹಿತಾ ಚಂದ್ರಶೇಖರ್ – ಕಿರಣ್ ಶ್ರೀನಿವಾಸ್ ಕಲ್ಯಾಣ

ಬೆಳ್ಳಿತರೆ ಹಾಗೂ ಕಿರುತೆರೆ ನಟ, ‘ಹಾಗೆ ಸುಮ್ಮನೇ’ ಖ್ಯಾತಿಯ ಕಿರಣ್ ಶ್ರೀನಿವಾಸ್ ಗೃಹಸ್ಥಾಶ್ರಮಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ.

ನಟಿ ಹಾಗೂ ಸಿಹಿ ಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ಕಿರಣ್ ಶ್ರೀನಿವಾಸ್ ಜೊತೆ ಮದುವೆ ಆಗುತ್ತಿದ್ದಾರೆ ಎಂಬ ವಿಷಯವನ್ನು ಅವರಿಬ್ಬರ ಕ್ಲೋಸ್ ಫ್ರಂಡ್, ನಟಿ ಸೋನು ಗೌಡ ಬಹಿರಂಗ ಮಾಡಿದ್ದಾರೆ. ತಮ್ಮ ಫ್ರೆಂಡ್ಸ್ ಮದುವೆಯ ಕ್ಷಣವನ್ನು ಖುಷಿಯಿಂದ ಎಂಜಾಯ್ ಮಾಡಲು ತಾವು ಕಾತರದಿಂದ ಕಾಯುತ್ತಿರುವುದಾಗಿಯೂ ಸೋನು ಗೌಡ ಹೇಳಿದ್ದಾರೆ. 

ಕಿರಣ್ ಹಾಗೂ ಹಿತಾ ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ‘ಒಂಥರಾ ಬಣ್ಣಗಳು’ ಚಿತ್ರದಲ್ಲಿ ಕಿರಣ್ ಹಾಗೂ ಹಿತಾ ಒಟ್ಟಿಗೆ ನಟಿಸಿದ್ದರು. ಅಲ್ಲಾದ ಪರಿಚಯ,ಗೆಳೆತನಕ್ಕೆ ತಿರುಗಿತ್ತು. ನಂತರ ಅವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ.

2008ರಲ್ಲಿ ‘ಹಾಗೇ ಸುಮ್ಮನೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಹ್ಯಾಂಡ್ ಸಮ್ ನಟ ಕಿರಣ್ ಶ್ರೀನಿವಾಸ್ ಮುಂದೆ ಎಂದೂ ‘ಹಾಗೇ ಸುಮ್ಮನೇ’ ಕುಳಿತಿಲ್ಲ. ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದ ಕಿರಣ್, ಹಿಂದಿ ಧಾರಾವಾಹಿಗಳಲ್ಲೂ ನಟಿಸುತ್ತಿದ್ದಾರೆ.

ಕಲರ್ಸ್ 24 ನಲ್ಲಿ ಮೂಡಿ ಬಂದಿರುವ ‘ರಾಯ್ ಡಿಸೋಜಾ’ ದಲ್ಲಿನ ಅವರ ‘ದೇವ್’ ಪಾತ್ರವು ಭಾರತದ ತುಂಬೆಲ್ಲ ಭಾರೀ ಮೆಚ್ಚುಗೆ ಗಳಿಸಿದೆ. 

ಇತ್ತೀಚಿಗೆ ಜನಪ್ರಿಯ ವೆಬ್ ಸರಣಿಗೂ ಕಾಲಿಟ್ಟಿರುವ ಕಿರಣ್ ಈಗಷ್ಟೇ ಬ್ರೇಕಿಂಗ್ ನ್ಯೂಸ್ ಅಂಡ್ ಸಾಲ್ಟ್ ಸಿಟಿ’ದ ಚಿತ್ರೀಕರಣ ಮುಗಿಸಿದ್ದಾರೆ. ಈಗ ಬಾಲಿವುಡ್‌ನ ‘ಚಿತ್ರಕೂಟ್’ ಸಿನಿಮಾ ಶೂಟಿಂಗ್‌ಗೆ ಕಿರಣ್ ಸಜ್ಜಾಗಿದ್ದಾರೆ.

ಕಿರಣ್ ಸದ್ಯ ‘ಮೈಸೂರ್ ಮಸಾಲಾ’ ಚಿತ್ರದ ಶೂಟಿಂಗ್ ಮುಗಿಸಿ ವೆಬ್ ಸಿರೀಸ್‌ಗಳ ನಟನೆಯಲ್ಲಿ ನಿರತರಾಗಿದ್ದಾರೆ. ಅವರ ನಟನೆಯ ‘ಮೈಸೂರು ಮಸಾಲಾ’ ಸದ್ಯವೇ ಬಿಡುಗಡೆಯಾಗಲಿದೆ. 

ಕಿರಣ್ ‘ಪ್ರೀತಿಯಿಂದ ರಮೇಶ್’, ‘ನಿರುತ್ತರ’, ‘ರಿಧಮ್’, ‘ಕಾಂಚನಾ’, ‘ಚಿರು’, ‘ಮುಗಿಲ ಮಲ್ಲಿಗೆಯೋ’ ಹಾಗೂ ‘ಒಂಥರಾ ಬಣ್ಣಗಳು’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶನದ ಕನಸನ್ನೂ ಹೊತ್ತಿರುವ ಕಿರಣ್ ಸದ್ಯವೇ ಆ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಲಿದ್ದಾರೆ.

ಇನ್ನೂ ಹಿತಾ ಚಂದ್ರಶೇಖರ್ 2016ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡಾನ್ಸಿಂಗ್ ಸ್ಟಾರ್’ ಸೀಸನ್ 3ರಲ್ಲಿ ವಿಜೇತೆಯಾಗಿದ್ದರು. ನಂತರ ‘ಕಾಲ್ ಕೆಜಿ ಪ್ರೀತಿ’ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು.

ಇನ್ನು ಮದುವೆ ಕುರಿತಂತೆ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಹಿತಾ, “ಕಿರಣ್, ನಾನು ಮತ್ತು ಸೋನು ‘ಒಂಥರಾ ಬಣ್ಣಗಳು’ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದೆವು. ಈ ಸಿನಿಮಾದ ಮೂಲಕ ಕಿರಣ್ ಪರಿಚಯವಾಗಿದ್ದು, ಆದರೆ ಕಿರಣ್ ನಮ್ಮ ಕುಟುಂಬದವರಿಗೆ ಪರಿಚಯವಿದ್ದಾರೆ. ಎರಡು ಕುಟುಂಬದವರ ನಡುವೆ ಉತ್ತಮ ಒಡನಾಟವಿದೆ. ಕಿರಣ್, ನಾನು ಮೊದಲಿಗೆ ಸ್ನೇಹಿತರಾಗಿದ್ದು, ಬಳಿಕ ಪರಸ್ಪರ ಪ್ರೀತಿಸುತ್ತಿದ್ದೆವು. ಇತ್ತೀಚೆಗಷ್ಟೆ ಇಬ್ಬರು ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇವೆ ಎಂದು ಹಿತಾ ಅವರು ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದಾರೆ.

ಪ್ರೀತಿಯ ವಿಚಾರ ಎರಡು ಕುಟುಂಬದವರಿಗೂ ಗೊತ್ತಿದೆ. ಇನ್ನೆರಡು ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇವೆ. ಅಂದೇ ಮದುವೆಯ ದಿನಾಂಕ ಪ್ರಕಟಿಸುತ್ತೇವೆ ಅಂದಿದ್ದಾರೆ.

Advertisements

Leave a Reply

%d bloggers like this: