ಸುಮಲತಾ ಸೋಲಿಸಲು ಜೆಡಿಎಸ್ ರಣತಂತ್ರ : ಮರೆತವರನ್ನು ಮತ್ತೆ ನೆನಪಿಸಿಕೊಂಡ ದೇವೇಗೌಡರು

ಜೆಡಿಎಸ್ ವರಿಷ್ಠರ ವಿರುದ್ಧ ಇರುವ ದೊಡ್ಡ ಆರೋಪ ಅಂದ್ರೆ, ಪಕ್ಷದಲ್ಲಿ ನಾಯಕರಿಗೆ ಬೆಳೆಯಲು ಅವಕಾಶವಿಲ್ಲ. ಕುಟುಂಬಕ್ಕೆ ಆಪ್ತರಾದವರಿಗೆ ಮಾತ್ರ ಇಲ್ಲಿ ಬೆಳೆಯಲು ಅವಕಾಶ ಅನ್ನುವುದು.

ಇದು ಹೌದು ಅನ್ನುವ ಅನೇಕ ಉದಾಹರಣೆಗಳನ್ನು ರಾಜಕೀಯ ವಿಶ್ಲೇಷಕರು ಕೊಡುತ್ತಾರೆ.

ಇದೀಗ ಇದೇ ಸಾಲಿನಲ್ಲಿ ಮುನ್ನಲೆಗೆ ಬಂದಿರುವುದು ಮಾಜಿ ಸಚಿವ ಎಸ್.ಡಿ.ಜಯರಾಂ ಕುಟುಂಬ.

ಮಂಡ್ಯದ ನಾಯಕರಾಗಿದ್ದ ಎಸ್,ಡಿ, ಜಯರಾಂ ನಿಧನವಾದ ನಂತ್ರ ಉಪಚುನಾವಣೆಯಲ್ಲಿ ಅವರ ಪತ್ನಿ ಪ್ರಭಾವತಿ ಗೆಲುವು ಸಾಧಿಸಿದ್ದರು. ಆದರೆ ಬಳಿಕ ವಿಧಾನಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಪ್ರಭಾವತಿ ಸೋಲು ಕಂಡರು. ಆ ಚುನಾವಣೆಯಲ್ಲಿ ಎಸ್.ಎಂ. ಶಂಕರ್ ಗೆಲುವು ಕಂಡರು.

ಆ ನಂತರ ಜಯರಾಂ ಕುಟುಂಬ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಯ್ತು, ಹೀಗಾಗಿಯೇ ಅವರು ಕೂಡಾ ಚುನಾವಣಾ ರಾಜಕಾರಣದಿಂದ ದೂರ ಸರಿದರು.

ಆದರೆ  ಪ್ರಭಾವತಿ ಜಯರಾಂ ಅವರಿಗೆ ಕಳೆದ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ನೀಡದೆ, ಜಯರಾಂ ಕುಟುಂಬವನ್ನು ರಾಜಕೀಯವಾಗಿ ದೂರವಿಡಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಕಳೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಎಸ್.ಡಿ.ಜಯರಾಂ ಅವರ ಪುತ್ರ ಅಶೋಕ್ ಜಯರಾಂ ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದರು. ಸಾಕಷ್ಟು ಸಾಕಷ್ಟು ರಾದ್ದಾಂತ, ಜಟಾಪಟಿ ನಂತರ ಅಶೋಕ್ ಜಯರಾಂ ಕಣದಿಂದ ಹಿಂದೆ ಸರಿದರು. ಅಲ್ಲ ಹಿಂದೆ ಸರಿಸುವಲ್ಲಿ ದಳಪತಿಗಳು ಯಶಸ್ವಿಯಾಗಿದ್ದರು.  

ಕಳೆದ ಚುನಾವಣೆಗೆ ತಮಗೆ ಟಿಕೆಟ್ ಕೈತಪ್ಪಿದ್ದರಿಂದ ಹಾಗೂ ತಮ್ಮ ತಾಯಿಗೂ ಬೇರಾವುದೇ ರಾಜಕೀಯ ಅವಕಾಶ ಸಿಗದ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಗೆ ಅಶೋಕ್ ಈಗಾಗಲೇ ಚುನಾವಣಾ ತಯಾರಿ ಆರಂಭಿಸಿದ್ದರು.

ಈ ನಡುವೆ ಬಯಸದೆ ಬಂದ ಭಾಗ್ಯ ಅನ್ನುವಂತೆ ತಾಯಿ ಪ್ರಭಾವತಿ ಜಯರಾಂ ಅವರನ್ನು ಜೆಡಿಎಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಾಗಂತ ಇದು ಅಶೋಕ್ ಅವರನ್ನು ತಣ್ಣಗಾಗಿಸುವ ಪ್ರಯತ್ನ ಖಂಡಿತಾ ಅಲ್ಲ.

ಬದಲಾಗಿ ಸುಮಲತಾ ಅವರನ್ನು ಮಣಿಸಲು ಹೂಡಿರುವ ರಣತಂತ್ರ.

ಮಾಜಿ ಸಚಿವ ಎಸ್.ಡಿ.ಜಯರಾಂ ಅವರ ಪತ್ನಿ, ಮಾಜಿ ಶಾಸಕಿ ಪ್ರಭಾವತಿ ಜಯರಾಂ ಅವರನ್ನು ಇದೀಗ ಜೆಡಿಎಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಾಡುವ ಮೂಲಕ ಮಂಡ್ಯದಲ್ಲಿ ಮತ್ತೆ ಮಹಿಳಾ ನಾಯಕಿಯೊಬ್ಬರನ್ನು ಬೆಳೆಸುವ ಲಕ್ಷಣ ಗೋಚರಿಸಿದೆ.

ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಆಕಾಂಕ್ಷಿತರ ಸಂಖ್ಯೆಯನ್ನು ಕಡಿತಗೊಳಿಸಲು ಹಾಗೂ ಎದುರಾಳಿಗಳನ್ನು ಹಳಿಯಲು ಪ್ರಭಾವತಿ ಜಯರಾಂ ಅವರಿಗೆ ಮಹಿಳಾ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಅನ್ನುವುದು ಎಲ್ಲರ ಮಾತು. ಆದರೆ ದೇವೇಗೌಡರು ಒಂದು ಕಲ್ಲಿನಲ್ಲಿ ಎರಡು ಹಣ್ಣು ಉರುಳಿಸಲು ಮುಂದಾಗಿದ್ದಾರೆ.

ಜಯರಾಂ ಜನತಾದಳದ ನಾಯಕನಾಗಿ, ಸಚಿವರಾಗಿ ಉತ್ತಮ ಕೆಲಸ ಮಾಡಿ ಹೆಸರುವಾಸಿ ಆಗಿದ್ದರು. ಅಲ್ಲದೇ, ಜಯರಾಂ ಕುಟುಂಬಕ್ಕೆ ಅಧಿಕಾರ ಕೊಟ್ಟಿಲ್ಲ ಎಂಬ ಆರೋಪ ಜೆಡಿಎಸ್ ಮೇಲಿದೆ. ಆದ್ದರಿಂದ ಈ ಮೂಲಕ ಜಯರಾಂ ಕುಟುಂಬಕ್ಕೆ ಅಧಿಕಾರ ಕೊಟ್ಟಂತೆ ಆಗುವುದಲ್ಲದೇ, ಸುಮಲತಾ ವಿರುದ್ಧ ಸ್ಟ್ರಾಂಗ್ ಕ್ಯಾಂಡಿಡೇಟ್ ನಿಲ್ಲಿಸಿದಂತೆ ಆಗುತ್ತದೆ ಎಂಬುದು ಜೆಡಿಎಸ್ ಮಾಸ್ಟರ್‌ ಪ್ಲಾನ್.

ಆದರೆ ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಶ್ವಿನಿ ಗೌಡ ಅವರನ್ನು ಕಣಕ್ಕಿಳಿಸುವುದಾಗಿ ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರಿಗೆ ಟಿಕೆಟ್ ತಪ್ಪಿತ್ತು. ಐ.ಆರ್.ಎಸ್ ಹುದ್ದೆಯಲ್ಲಿದ್ದ ಅಶ್ವಿನಿ ರಾಜಕೀಯ ಭವಿಷ್ಯ ಸಲುವಾಗಿ ಉನ್ನತ ಹುದ್ದೆಗೆ ದೊಡ್ಡ ನಮಸ್ಕಾರ ಹೇಳಿ ಬಂದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Advertisements

One Comment on “ಸುಮಲತಾ ಸೋಲಿಸಲು ಜೆಡಿಎಸ್ ರಣತಂತ್ರ : ಮರೆತವರನ್ನು ಮತ್ತೆ ನೆನಪಿಸಿಕೊಂಡ ದೇವೇಗೌಡರು

  1. Pingback: ನಾನು ಕನ್ನಡದವಳು, ಕರ್ನಾಟಕದವಳು : ಅನಿತಾ ಕುಮಾರಸ್ವಾಮಿ :ಪತಿ ಪತ್ನಿಯ ಹೇಳಿಕೆಗೆ ತಾಳೆಯೇ ಇಲ್ಲ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: