Advertisements

ಚುನಾವಣಾ ರಾಜಕೀಯ ನಿವೃತಿಯ ಮುನ್ಸೂಚನೆ ಕೊಟ್ಟ ದೇವೇಗೌಡರು

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಾಜಿ ದೇವೇಗೌಡರು ಹಾಸನದಲ್ಲಿ ಸ್ಪರ್ಧಿಸುವುದಿಲ್ಲ ಬದಲಾಗಿ ಮೊಮ್ಮಗ ಪ್ರಜ್ವಲ್ ಗೆ ಜಾಗ ಬಿಟ್ಟುಕೊಡುತ್ತಾರೆ ಎನ್ನಲಾಗಿದೆ. ಆದರೆ ಭವಾನಿ ರೇವಣ್ಣ, ಮಾವನವರೇ ಹಾಸನದಲ್ಲಿ ಸ್ಪರ್ಧಿಸಬೇಕು ಅನ್ನುತ್ತಿದ್ದಾರೆ.

ಮತ್ತೊಂದು ಕಡೆ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಸಿಎಂ, ಹಾಲಿ ಸಂಸದ ಸದಾನಂದಗೌಡ ವಿರುದ್ಧ ಸ್ಪರ್ಧಿಸುತ್ತಾರೆ ಅನ್ನುವ ಸುದ್ದಿ ಇದೆ.

ಈ ನಡುವೆ ಮುಂಬರೋ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವ ಸಾಧ್ಯತೆ ಇಲ್ಲ ಎಂಬ ಸೂಚನೆಯನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಗುರುವಾರ ಲೋಕಸಭೆಯಲ್ಲಿ ನೀಡಿದ್ದಾರೆ.

ರಾಷ್ಟ್ರಪತಿಗಳ ಭಾಷಣ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ 86 ವರ್ಷದ ಮಾಜಿ ಪ್ರಧಾನಿ, ಲೋಕಸಭೆಯಲ್ಲಿ ಇದು ನನ್ನ ಕೊನೆಯ ಭಾಷಣವಾಗಬಹುದು ಎಂದಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ದೇವೇಗೌಡರು 1996-1997ರಲ್ಲಿ ಸಂಯುಕ್ತ ರಂಗ ಸರ್ಕಾರದ ನಾಯಕತ್ವ ವಹಿಸಿದ್ದರು.

13 ದಿನಗಳ ವಾಜಪೇಯಿ ಸರ್ಕಾರದ ನಂತರ ಬಂದ ಸಂಯುಕ್ತ ರಂಗ ಸರ್ಕಾರದಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದರು.

ಕಾಂಗ್ರೆಸ್ ಮತ್ತು ಎಡಪಕ್ಷಗಳು ಬಾಹ್ಯ ಬೆಂಬಲ ನೀಡಿದ್ದ ಅಂದಿನ ಯುನೈಟೆಡ್ ಫ್ರಂಟ್ ಮೈತ್ರಿಕೂಟ ಬೆಂಬಲಿಸಿದ್ದ ಮೈತ್ರಿಕೂಟ ಪಕ್ಷಗಳಿಗೆ ದೇವೇಗೌಡರು ಭಾಷಣದಲ್ಲಿ ಧನ್ಯವಾದ ಸಲ್ಲಿಸಿದರು.

ಎಡಪಕ್ಷಗಳ ಅತ್ಯಂತ ಹಿರಿಯ ನಾಯಕ ಜ್ಯೋತಿ ಬಸು ಅವರಿಗೆ ಪ್ರಧಾನ ಮಂತ್ರಿಯಾಗಲು ಸಿಪಿಐ-ಎಂ ಪಾಲಿಟ್ ಬ್ಯೂರೊ ಒಪ್ಪಿಗೆ ಸೂಚಿಸದ ಕಾರಣ ಪ್ರಧಾನಿಯಾಗುವ ಯೋಗ ದೇವೇಗೌಡರಿಗೆ ಒಲಿದುಬಂದಿತ್ತು.

1933ರ ಮೇ 18ರಂದು ಜನಿಸಿರುವ ದೇವೇಗೌಡರು 1994ರಿಂದ 1996ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.

Advertisements

One Comment on “ಚುನಾವಣಾ ರಾಜಕೀಯ ನಿವೃತಿಯ ಮುನ್ಸೂಚನೆ ಕೊಟ್ಟ ದೇವೇಗೌಡರು

  1. Pingback: ಸಂಸತ್ತಿಗೆ ಹೋಗಲು ನಿಖಿಲ್ – ಪ್ರಜ್ವಲ್ ದೇವೇಗೌಡರಿಗೆ ಊರುಗೋಲು….! – torrentspree

Leave a Reply

%d bloggers like this: