ಏನಿದು ಸಿಎಂ ಸಾಹೇಬ್ರೆ : ಜಿಲ್ಲಾ ಪಂಚಾಯತ್ ಸಿಇಒಗೆ ಆರು ತಿಂಗಳಿನಿಂದ ಸಂಬಳವೇ ಆಗಿಲ್ವಂತೆ…!

ರಾಜ್ಯದಲ್ಲಿ ಆಡಳಿತ ಚೆನ್ನಾಗಿದೆ, ಬೊಕ್ಕಸ ಭರ್ತಿಯಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ವಿವಿಧ ಸರ್ಕಾರಿ ಇಲಾಖೆಯ ನೌಕರರಿಗೆ ಹಲವು ತಿಂಗಳುಗಳಿಂದ ಸಂಬಳವೇ ಆಗಿಲ್ಲ.

ಇದಕ್ಕೊಂದು ಜೀವಂತ ನಿದರ್ಶನ ಇಂದು ಬಯಲಾಗಿದೆ.

ಬಾಕಿ ಇರುವ ಕೂಲಿ ಹಣ ಪಾವತಿ ಮಾಡಬೇಕೆಂದು ನೋವು ತೋಡಿಕೊಳ್ಳಲು ಬಂದ ಕೂಲಿ ಕಾರ್ಮಿಕ ಮಹಿಳೆಯರ ಎದುರು ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ತಮ್ಮ ಅಳಲನ್ನು ಹಂಚಿಕೊಂಡ ಪ್ರಸಂಗ ನಡೆದಿದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಎರಡು ತಿಂಗಳ ಬಾಕಿ ಕೂಲಿ ಹಣ ಪಾವತಿಸಿ, ವರ್ಷಪೂರ್ತಿ ಕೆಲಸ ನೀಡಬೇಕೆಂದು ಒತ್ತಾಯಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ ಜತೆ ಸೇರಿ ಮಹಿಳೆಯರು ಬುಧವಾರ ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಇಒ ಕವಿತಾ ಮನ್ನಿಕೇರಿ ಅವರ ಮುಂದೆ ಮಹಿಳೆಯರು ತಮ್ಮ ನೋವನ್ನು ತೋಡಿಕೊಂಡಾಗ, ನನಗೆ ಸರ್ಕಾರ ಆರು ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ ಎಂದು ತಮ್ಮ ನೋವು ತೋಡಿಕೊಂಡರು. ಸಿಇಒ ಅವರ ಅಸಹಾಯಕತೆಯ ನೋಡಿದ ಮಹಿಳೆಯರು, ನಮಗೆ ಎರಡು ತಿಂಗಳು, ಮೇಡಂಗೆ ಆರು ತಿಂಗಳು ಎಂದು ಪ್ರತಿಭಟನೆ ನಿರತ ಮಹಿಳೆಯರೇ ಕಂಗಾಲಾದರು.

ಐಎಎಸ್ ಮಟ್ಟದ ಅಧಿಕಾರಿಗಳಿಗೂ ಸರ್ಕಾರ ಸಂಬಳ ಕೊಟ್ಟಿಲ್ಲ ಅಂದ್ರೆ ಅವರಾದರೂ ಜನಸೇವೆ ಮಾಡಲು ಹೇಗೆ ಸಾಧ್ಯ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: