Advertisements

ರೈತ ಸ್ನೇಹಿ ಸೈಕಲ್, ಡ್ರೋನ್ ಅನ್ವೇಷಿಸಿದ ಗ್ರಾಮೀಣ ಪ್ರತಿಭೆಗಳು ಅಮೆರಿಕಾಗೆ

ರೈತ ಸ್ನೇಹಿ ಸೈಕಲ್ ಮತ್ತು ಡ್ರೋನ್ ಗಳನ್ನು ಅನ್ವೇಷಿಸಿರುವ ನೆಲಮಂಗಲ ತಾಲೂಕಿನ ಸರಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಅಮೆರಿಕಾದಲ್ಲಿ ನಡೆಯಲಿರುವ ವಸ್ತು ಪ್ರದರ್ಶನವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ.

ನೆಲಮಂಗಲ ಸಮೀಪದ ಸೋಲದೇವನಹಳ್ಳಿಯ ವೈದ್ಯರತ್ನ ಲಕ್ಷಮ್ಮ ಗಂಗಣ್ಣ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಜನಾರ್ಧನ್ ಮತ್ತು ಮಧು ಕುಮಾರ್ ಈ ಅವಕಾಶ ಪಡೆದ ವಿದ್ಯಾರ್ಥಿಗಳು.

ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಹಳೆಯ ಸೈಕಲ್ ಅನ್ನು ಬಿಟ್ಟನೆ ಮಾಡಲು, ಕಳೆ ತೆಗೆಯಲು ಮತ್ತು ಕೀಟನಾಶ ಸಿಂಪಡಿಸಲು ಅನುಕೂಲವಾಗುವಂತೆ ಮರು ವಿನ್ಯಾಸ ಮಾಡಿದ್ದಾರೆ.

ಇನ್ನು ಇವರ ಕೈಯಲ್ಲಿ ತಯಾರಾಗಿರುವ ಡ್ರೋನ್ ಕೀಟನಾಶಕ ಸಿಂಪಡಿಸುವ ಸಾಧನವಾಗಿ ರೂಪಿತವಾಗಿದೆ. ಅವರು ಅನ್ವೇಷಿಸಿರುವ ಡ್ರೋನ್ ಒಂದು ಲೀಟರ್ ನೀರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

ದ್ರಾಕ್ಷಿ ತೋಟ, ಕಾಫಿ ತೋಟ ಮಾತ್ರವಲ್ಲದೆ ಎತ್ತರದ ತೆಂಗಿನಮರಕ್ಕೂ ಕೀಟನಾಶಕ ಸಿಂಪಡಿಸುವ ಸಾಮರ್ಥ್ಯವನ್ನು ಈ ಡ್ರೋನ್ ಹೊಂದಿದೆ.

ಇನ್ನು ವಿಶೇಷ ಅಂದರೆ ಈ ಎರಡು ಸಂಶೋಧನೆಗಳಿಗೆ ವೆಚ್ಚವಾಗಿರುವುದು ಕೇವಲ 18 ಸಾವಿರ, ಸಹಪಾಠಿ ಮಧು ನಾಯಕ್ ತಂದುಕೊಟ್ಟ ಹಳೆಯ ಕಚ್ಟಾ ಸಾಮಾಗ್ರಿಗಳನ್ನು ಪೇರಿಸಿ ಈ ಸಂಶೋಧನೆ ಮಾಡಲಾಗಿದೆ.

ಅಮೆರಿಕಾದಲ್ಲಿ ಅಂತರ ರಾಷ್ಟ್ರೀಯ ವಿಜ್ಞಾನ ಪ್ರದರ್ಶನ ಎಪ್ರಿಲ್ ತಿಂಗಳಲ್ಲಿ ನಡೆಯಲಿದ್ದು, ತಮ್ಮ ಸಂಶೋಧನ ಮಾದರಿಗಳನ್ನು ಈ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಭಾರತದ ದಕ್ಷಿಣ ವಲಯ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಇವರು ಪ್ರಥಮ ಸ್ಥಾನ ಪಡೆದಿದ್ದರು.

Advertisements

Leave a Reply

%d bloggers like this: