Advertisements

ಉಚಿತ ಒಳ ಉಡುಪು ಕೊಡಿ ಉಚಿತ ಬ್ಯೂಟಿಪಾರ್ಲರ್ ಭಾಗ್ಯ ಕರುಣಿಸಿ : ಮೋದಿಗೆ ಬಿಚ್ಚಮ್ಮ ಸಾವಂತ್ ಬೇಡಿಕೆ

ರಾಖಿ ಸಾವಂತ್, ವೈರಲ್ ಹೇಗೆ ಆಗಬೇಕು ಅನ್ನುವುದನ್ನು ಈ ಪುಣ್ಯಾದಿಗಿತ್ತಿಯಿಂದ ಕಲಿಯಬೇಕು. ಈಕೆ ನಿಂತರೂ ಸುದ್ದಿ ಕುಂತರೂ ಸುದ್ದಿ. ಬಟ್ಟೆ ಹಾಕಿದರೂ ಸುದ್ದಿ, ಹಾಕದಿದ್ದರೂ ಸುದ್ದಿ.

ಇದೀಗ ಮತ್ತೆ ರಾಖಿ ಸಾವಂತ್ ಸುದ್ದಿಯಲ್ಲಿದ್ದಾಳೆ. ತಾನು ಸುದ್ದಿಯಾಗಬೇಕು ಅನ್ನುವ ಕಾರಣಕ್ಕೆ ಜೊತೆಗೆ ಮೋದಿಯ ಹೆಸರನ್ನು ಎಳೆದು ತಂದಿದ್ದಾಳೆ.

ಇತ್ತೀಚೆಗೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ರಾಖಿಸಾವಂತ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಚಿತ್ರ ವಿಚಿತ್ರ ಬೇಡಿಕೆಯ ಪಟ್ಟಿ ಸಲ್ಲಿಸಿದ್ದಾಳೆ. ಪಟ್ಟಿಯ ವಿವರ ಕೇಳಿದ್ರೆ ನೀವು ರಾಖಿಸಾವಂತ್ ಗೆ ಉಗಿಯೋದು ಗ್ಯಾರಂಟಿ.

ಆಕೆಯ ಮೊದಲ ಬೇಡಿಕೆ, ಮಹಿಳೆಯರಿಗೆ ಉಚಿತ ಒಳ ಉಡುಪು. ಮಹಿಳೆಯರು ಧರಿಸುವ ಬ್ರಾ, ಪ್ಯಾಟಿ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಪ್ಯಾಟಿಗಳು ಉಚಿತವಾಗಿ ಸಿಗುತ್ತಿಲ್ಲ. ಒಳ ಉಡುಪುಗಳಿಗೆ ನಾಲ್ಕೈದು ಸಾವಿರ ಖರ್ಚಾಗುತ್ತದೆ. ಹೀಗಾಗಿ ಮೋದಿಯವರು ಮಹಿಳೆಯರ ಒಳ ಉಡುಪನ್ನು ಉಚಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿದ್ದಾಳೆ.

ಅಷ್ಟು ಮಾತ್ರವಲ್ಲದೆ ಸುಂದರವಾಗಿ ಕಾಣಬೇಕಾದರೆ ಸೌಂದರ್ಯ ವರ್ಧಕಗಳು ಬೇಕೇ ಬೇಕು. ಆದರೆ ಮಾರುಕಟ್ಟೆಯಲ್ಲಿ ಲಿಪ್ ಸ್ಟಿಕ್, ಪೌಡರ್ ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಹಿಳೆಯರು ಸುಂದರವಾಗಿ ಕಾಣುವ ನಿಟ್ಟಿನಲ್ಲಿ ಉಚಿತ ಬ್ಯೂಟಿ ಪಾರ್ಲರ್ ಗಳನ್ನು ತೆರೆಯುವಂತೆ ಬಿಚ್ಚಮ್ಮ ಆಗ್ರಹಿಸಿದ್ದಾಳೆ. ಅದು ಹೇಗಿರಬೇಕು ಗೊತ್ತಾ, ರಸ್ತೆ ರಸ್ತೆಗಳಲ್ಲಿ ಉಚಿತ ಶೌಚಾಲಯಗಳಿದೆ ತಾನೇ, ಹಾಗೇ ಬ್ಯೂಟಿಪಾರ್ಲರ್ ಗಳು ಉಚಿತವಾಗಿ ಸಿಗಬೇಕು ಅಂದಿದ್ದಾಳೆ.

ಖಾಸಗಿ ಬ್ಯೂಟಿ ಪಾರ್ಲರ್ ಮಂದಿ ಸಿಕ್ಕಾ ಪಟ್ಟೆ ದುಬಾರಿಯಾಗಿದ್ದಾರೆ. ವ್ಯಾಕ್ಸಿಂಗ್ ಅಂತ ಹೋದ್ರೆ ಕೈಗಿಷ್ಟು, ಕಾಲಿಗಿಷ್ಟು ಎಂದು ಹಣ ಪೀಕುತ್ತಾರೆ.ನನ್ನಂಥ ಸೆಲೆಬ್ರೆಟಿಗಳಿಗೆ ಬ್ಯೂಟಿ ಪಾರ್ಲರ್ ವೆಚ್ಚ ದುಬಾರಿಯಾಗಿದೆ. ಇನ್ನು ಗ್ರಾಮೀಣ ಮಹಿಳೆಯರ ಕಷ್ಟ ಎಷ್ಟಿರಬಹುದು. ಹೀಗಾಗಿ ಉಚಿತ ಶೌಚಾಲಯದಂತೆ ಉಚಿತ ಬ್ಯೂಟಿ ಪಾರ್ಲರ್ ಗಳನ್ನು ತೆರೆಯಿರಿ ಎಂದು ಮನವಿ ಮಾಡಿದ್ದಾಳೆ.

ಇನ್ನು ಉಚಿತ ಬ್ಯೂಟಿ ಪಾರ್ಲರ್ ತೆರೆಯುವುದರಿಂದ ತಲಾಖ್ ಪ್ರಕರಣಗಳು ಕಡಿಮೆಯಾಗುತ್ತದೆಯಂತೆ. ಉಚಿತ ಬ್ಯೂಟಿ ಪಾರ್ಲರ್ ಗೆ ಮಹಿಳೆಯರು ಹೋಗುವುದರಿಂದ ಸುಂದರವಾಗಿ ಕಾಣುತ್ತಾರೆ. ಹೀಗಾಗಿ ಅವರ ಗಂಡಂದಿರು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹೆಂಡತಿ ಸುಂದರವಾಗಿದ್ದರೆ ಪತಿ ಮಹಾಶಯರು ತಲಾಖ್ ನೀಡೋದಿಲ್ಲ ಅನ್ನುವ ಲಾಭವನ್ನು ಬೇರೆ ಮೋದಿಯವರಿಗೆ ಮನವಿ ಮಾಡಿದ್ದಾಳೆ ಪುಣ್ಯಾದಿಗಿತ್ತಿ.

ಅಷ್ಟಕ್ಕೆ ಮುಗಿಯಿತು ಅಂದುಕೊಂಡ್ರ ಇಲ್ಲ, ಜನರಿಗೆ ಉಚಿತವಾಗಿ ಕಾಂಡೋಮ್ ಬೇರೆ ಹಂಚಬೇಕಂತೆ.

Advertisements

Leave a Reply

%d bloggers like this: