ಇವೆಲ್ಲಾ ಮಗಳ ಕಾಲ್ಗುಣ : ಹಾಸನದಲ್ಲಿ 80 ಎಕರೆ ತೋಟ ಖರೀದಿಸಿದ ಯಶ್

ಹುಟ್ಟೂರಿನಲ್ಲಿ ಜಾಗ ಖರೀದಿಸಬೇಕು ಅನ್ನುವ ತನ್ನ ಹಲವು ವರ್ಷದ ಕನಸನ್ನು ನಟ ಯಶ್ ನನಸು ಮಾಡಿಕೊಂಡಿದ್ದಾರೆ. ಅದು ಕೂಡಾ ಯಶ್, ರಾಧಿಕಾ ದಂಪತಿಯ ಬದುಕಿಗೆ ಮಗಳು ಬಂದ ಮೇಲೆ ಅನ್ನುವುದು ವಿಶೇಷ.

ಹೀಗಾಗಿಯೇ ಯಶ್ ಜಾಗ ಖರೀದಿಸಿದ ಸುದ್ದಿ ತಿಳಿದ ಅಭಿಮಾನಿಗಳು ಎಲ್ಲವೂ ಮಗಳ ಕಾಲ್ಗುಣ ಎಂದು ಹರಸಿ ಹಾರೈಸಿದ್ದಾರೆ.

ಯಶ್‌ ಹುಟ್ಟಿದ್ದು ಹಾಸನದಲ್ಲಿ, ಬೆಳೆದಿದ್ದು ಮೈಸೂರಿನಲ್ಲಿ. ಇರುವುದು ಬೆಂಗಳೂರಿನಲ್ಲಿ. ಆದ್ರು, ಹುಟ್ಟೂರು ಅವರನ್ನು ಸೆಳೆಯುತ್ತಿತ್ತು. ಮೈಸೂರಿನಲ್ಲೇ ಮನೆಮಾಡಿ ಎಂಬ ಒತ್ತಾಯವಿತ್ತು. ಆದರೆ ಚಿತ್ರರಂಗ, ಸಾಮಾಜಿಕ ಚಟುವಟಿಕೆಯ ಕಾರಣದಿಂದ ಬೆಂಗಳೂರನ್ನು ಅಪ್ಪಿಕೊಳ್ಳುವುದು ಅನಿವಾರ್ಯ. ಹೀಗಾಗಿ ಮೈಸೂರಿನಲ್ಲಿ ಮುಂದೆ ನೋಡೋಣ ಎಂದು ಇದೀಗ ಹಾಸನದ ವಿದ್ಯಾನಗರದಲ್ಲಿ ಒಂದು ಮನೆ ಮತ್ತು ಮನೆಯಿಂದ ಒಂದಿಷ್ಟು ಕಿಲೋಮೀಟರ್ ದೂರದಲ್ಲಿ 80 ಎಕರೆ ವಿಸ್ತೀರ್ಣದ ಮಾವು, ಸಪೋಟ, ಗೋಡಂಬಿ ತೋಟವನ್ನು ಖರೀದಿಸಿದ್ದಾರೆ.

ಹಾಗಾದರೆ ಯಶ್ ಗೆ ಹಾಸನದ ನಂಟು ಹೇಗೆ ಅನ್ನುವ ಪ್ರಶ್ನೆ ಮೂಡಬಹುದು, ಅದಕ್ಕೂ ಉತ್ತರವಿದೆ. ಯಶ್ ತಾಯಿಯ ತಂದೆಯ ಊರು ಹಾಸನದ ದೊಡ್ಡಕೊಂಡಗೊಳ, ಯಶ್ ತಾಯಿ ಪುಷ್ಪ ಅವರು ಹುಟ್ಟಿದ್ದು ಹಾಸನದ ಆಡುವಳ್ಳಿಯಲ್ಲಿ, ಪುಷ್ಪ ಅವರ ಅಜ್ಜಿ ಮನೆ ಬೂವನಹಳ್ಳಿ,  ಇನ್ನು ಯಶ್ ಹುಟ್ಟಿದ್ದು  ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಹೀಗಾಗಿ ಇದು ನನ್ನೂರು ಅನ್ನುವ ಯಶ್, ಎಲ್ಲೆ ಇದ್ರು ನಮ್ಮೂರನ್ನು ಮರೆಯಲು ಆಗುತ್ತಾ ಎಂದು ಹುಟ್ಟಿದ ಊರಿನೊಂದಿಗೆ ಬಿಡಲಾಗದ ಗಂಟನ್ನು ಬೆಸೆದುಕೊಂಡಿದ್ದಾರೆ.

ಹಾಗಂತ ಯಶ್ ಮೈಸೂರನ್ನು ಮರೆತ್ತಿದ್ದಾರೆಯೇ ಖಂಡಿತಾ ಇಲ್ಲ. ಮೈಸೂರನ್ನು ಮತ್ತಷ್ಟು ಸುಂದರವಾಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಅವರು ಹಮ್ಮಿಕೊಂಡಿದ್ದಾರೆ.

Advertisements

One Comment on “ಇವೆಲ್ಲಾ ಮಗಳ ಕಾಲ್ಗುಣ : ಹಾಸನದಲ್ಲಿ 80 ಎಕರೆ ತೋಟ ಖರೀದಿಸಿದ ಯಶ್

  1. Pingback: ಕಿಚ್ಚನ ಕಿವಿ ಮಾತು :ನಿಜವಾದ ಅಭಿಮಾನಿಯಾದರೆ ಈ ರೀತಿ ಮಾಡಬೇಡಿ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: