Advertisements

ಮೋದಿ ಗುಜರಾತ್ CM ಆದ ವೇಳೆ ತಾಯಿ ಹೇಳಿದ ಮಾತೇನು ಗೊತ್ತಾ…?

ಹ್ಯೂಮನ್ಸ್‌ ಆಫ್‌ ಬಾಂಬೆ’ಗೆ ಸಂದರ್ಶನ ನೀಡಿರುವ ಪ್ರಧಾನಿ ಮೋದಿ ಕುತೂಹಲಕಾರಿ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ತಾವು ಪ್ರಧಾನಿಯಾದಾಗ ನನ್ನ ತಾಯಿ ಹೆಚ್ಚು ಖುಷಿಪಟ್ಟಿರಲಿಲ್ಲ ಅನ್ನುವ ಮೂಲಕ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ. ಹಾಗಾದ್ರೆ ಮೋದಿ ತಾಯಿ ಹೀರಾಬೆನ್ ಯಾವಾಗ ಹೆಚ್ಚು ಖುಷಿಪಟ್ಟಿದ್ದರು.

ಗುಜರಾತ್​ನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವುದಕ್ಕೂ ಮುನ್ನ ಅಮ್ಮನನ್ನು ಭೇಟಿ ಮಾಡಿದ್ದೆ. ನೀನೇನು ಮಾಡುತ್ತಿಯೆಂದು ನನಗೆ ಗೊತ್ತಿಲ್ಲ. ಆದರೆ, ಲಂಚ ಪಡೆಯಬೇಡ. ಎಂದೂ ಭ್ರಷ್ಟನಾಗಬೇಡ ಎಂದು ಅಮ್ಮ ಹೇಳಿದ್ದರು. ಇದನ್ನು ಯಾವತ್ತೂ ಪಾಲಿಸುವೆ ಎಂದು ಹ್ಯೂಮನ್ಸ್ ಆಫ್ ಬಾಂಬೆ- ಫೇಸ್​ಬುಕ್ ಪೇಜ್​ಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಾನು ಗುಜರಾತ್‌ನ ಮುಖ್ಯಮಂತ್ರಿಯಾಗುತ್ತೇನೆ ಎಂದು ತಿಳಿದಾಗ ದೆಹಲಿಯಲ್ಲಿದ್ದೆ. ಪ್ರಮಾಣವಚನ ಸ್ವೀಕರಿಸುವುದಕ್ಕೂ ಮೊದಲು ಅಹಮದಾಬಾದ್‌ನಲ್ಲಿ ನನ್ನ ಸೋದರರ ಜೊತೆಗಿರುವ ತಾಯಿಯ ಆಶೀರ್ವಾದ ಪಡೆಯಲು ಹೋದೆ. ಅಷ್ಟರಲ್ಲಾಗಲೇ ಅಹಮದಾಬಾದ್‌ನಲ್ಲಿ ಸಂಭ್ರಮಾಚರಣೆ ಶುರುವಾಗಿತ್ತು.

ನನ್ನ ತಾಯಿಗೆ ತನ್ನ ಮಗ ಗುಜರಾತ್‌ನ ಮುಖ್ಯಮಂತ್ರಿಯಾಗುವುದು ತಿಳಿದಿತ್ತು. ನನ್ನನ್ನು ತಬ್ಬಿಕೊಂಡ ಆಕೆ ಮೊದಲಿಗೆ ಹೇಳಿದ್ದೇನು ಗೊತ್ತಾ? ‘ನೀನಿನ್ನು ಗುಜರಾತ್‌ನಲ್ಲಿ ಇರುತ್ತೀಯಾ ಎಂಬುದೇ ನನಗೆ ಎಲ್ಲಕ್ಕಿಂತ ಖುಷಿಯ ಸಂಗತಿ.’ ತಾಯಿಯ ಗುಣವೇ ಅದು. ಆಕೆಗೆ ತನ್ನ ಸುತ್ತ ಏನಾದರೂ ನಡೆಯುತ್ತಿರಲಿ, ಮಕ್ಕಳು ಮಾತ್ರ ತನಗೆ ಹತ್ತಿರವಿರಬೇಕು.

‘ಲಂಚ ಪಡೆಯಬೇಡ ಎಂದು ಅಮ್ಮ ಹೇಳಿದ ನೀತಿಪಾಠ ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಪ್ರಧಾನಿಯಾದಾಗಲೂ ನನ್ನನ್ನು ಮತ್ತಷ್ಟು ವಿನಮ್ರನನ್ನಾಗಿ ಮಾಡಿತು. ಯಾವುದೇ ಅಧಿಕಾರದಲ್ಲಿದ್ದರೂ ಪ್ರಾಮಾಣಿಕವಾಗಿರಬೇಕು, ದೇಶಕ್ಕಾಗಿ ದುಡಿಯಬೇಕು ಎಂಬುದು ಆಕೆಯ ಕಳಕಳಿ’ ಎಂದು ಮೋದಿ ಹೇಳಿದ್ದಾರೆ.

ಸಂದರ್ಶನದ ಮೊದಲ ಮೂರು ಕಂತುಗಳಲ್ಲಿ ಬಾಲ್ಯ, ರೈಲು ನಿಲ್ದಾಣದಲ್ಲಿ ಟೀ ಮಾರಾಟ ಮಾಡಿದ್ದು, ಅಧ್ಯಾತ್ಮದತ್ತ ಸೆಳೆತ, ಆರ್​ಎಸ್​ಎಸ್ ಕಚೇರಿಯಲ್ಲಿ ಪಾತ್ರೆ ತೊಳೆಯುತ್ತಿದ್ದ ದಿನಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದರು.

Advertisements

One Comment on “ಮೋದಿ ಗುಜರಾತ್ CM ಆದ ವೇಳೆ ತಾಯಿ ಹೇಳಿದ ಮಾತೇನು ಗೊತ್ತಾ…?

  1. Pingback: ಉಚಿತ ಒಳ ಉಡುಪು ಕೊಡಿ ಉಚಿತ ಬ್ಯೂಟಿಪಾರ್ಲರ್ ಭಾಗ್ಯ ಕರುಣಿಸಿ : ಮೋದಿಗೆ ಬಿಚ್ಚಮ್ಮ ಸಾವಂತ್ ಬೇಡಿಕೆ – torrentspree

Leave a Reply

%d bloggers like this: