Advertisements

ಮಾಜಿ ಎಣ್ಣೆ ಮಂತ್ರಿಯಿಂದ ಇದೆಂಥಾ ಮಾತು :ಸಿದ್ದಗಂಗಾಶ್ರೀಗಳಂತೆ ಯಡಿಯೂರಪ್ಪ ಕೂಡಾ ದಾಸೋಹಿ

ತಮ್ಮ ನಾಯಕ ಯಡಿಯೂರಪ್ಪ ಅವರನ್ನು ಹೊಗಳುವ ಭರಾಟೆಯಲ್ಲಿ ಮಾಜಿ ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ತುಮಕೂರು ಶ್ರೀಗಳೊಂದಿಗೆ ಯಡಿಯೂರಪ್ಪ ಅವರನ್ನು ಹೋಲಿಸಿದ್ದಾರೆ.

ಇಂದು ಯಡಿಯೂರಪ್ಪ ಅವರ ಮನೆಯಲ್ಲಿ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ಮಂತ್ರ ಮಾತನಾಡಿದ ಅವರು, ತಿಂಡಿಯೊಂದಿಗೆ ನಡೆದ ಸಭೆಗೆ ವಿಶೇಷ ಅರ್ಥ ಕಲ್ಲಿಸುವ ಅಗತ್ಯ ಇಲ್ಲ. ನಾವೇನು ದೇವೆಗೌಡರ ಮೆನೆಗೆ ಉಪಹಾರಕ್ಕೆ ಹೋಗಿದ್ದೀವಾ? ನಮ್ಮ ನಾಯಕರ ಮನೆಗೆ ನಾವು ಬರಬಾರದೇ? ಜೆಡಿಎಸ್​​ನಲ್ಲಿ ಯಾರೇ ಹೋಗಬೇಕಾದರೂ ಫೋನ್ ಮಾಡಿಕೊಂಡು ನಾನು ಬರ್ಲಾ ಸರ್ ಅಂತಾ ಕೇಳಿಕೊಂಡು ಹೋಗಬೇಕು. ಆದರೆ ನಮ್ಮ ನಾಯಕರ ಮನೆಗೆ ನಾವು ಯಾವಾಗಲೇ ಬರಲಿ, ಬಾಗಿಲು ತೆರದಿರುತ್ತೆ.ತುಮಕೂರು ಶ್ರೀಗಳು ಹೇಗೆ ದಾಸೋಹಿಯಾಗಿದ್ರೋ ಹಾಗೆ ಯಡಿಯೂರಪ್ಪ ಅವರು ದಾಸೋಹಿ ಆಗಿದ್ದಾರೆ ಎಂದು ಹೇಳಿದ್ದಾರೆ.

ಆಪರೇಶನ್ ಕಮಲ ಕುರಿತಂತೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ನಾವು ಆಪರೇಶನ್ ಕಮಲ ಮಾಡುತ್ತಿಲ್ಲ. ಬಿಜೆಪಿ ಸರ್ಕಾರ ಬೀಳಿಸುವ ಕೆಲಸ ಮಾಡಿಲ್ಲ. ಮೈತ್ರಿ ಸರ್ಕಾರದ ಹೊಡೆದಾಟ, ಬಡಿದಾಟದಿಂದಲೇ ಹೀಗಾಗುತ್ತಿದೆ.ಅವರು ಚಾಕು ಚೂರಿ ಹಿಡಿಯೋದೊಂದು ಬಾಕಿ ಇದೆ ಎಂದರು.

Advertisements

Leave a Reply

%d bloggers like this: