Advertisements

ಸುಪ್ರೀಂಕೋರ್ಟ್ ನಲ್ಲಿ ದೀದಿಗೆ ಮುಖಭಂಗ : ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ಆಯುಕ್ತರಿಗೆ ಸುಪ್ರೀಂ ಆದೇಶ

ಶಾರದಾ ಚಿಟ್‌ ಫಂಡ್ ಹಗರಣದ ತನಿಖೆ ಸಂಬಂಧ ಸಿಬಿಐ ವಿಚಾರಣೆಯನ್ನು ಎದುರಿಸುವಂತೆ ಸುಪ್ರೀಂಕೋರ್ಟ್ ಕೋಲ್ಕತ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.

ಪ್ರಕರಣ ಕುರಿತಂತೆ ಸಿಬಿಐ ನಿನ್ನೆ ಸುಪ್ರೀಂಕೋರ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್, ಸಿಬಿಐ ಮುಂದೆ ನೀವು ಹಾಜರಾಗಬೇಕು ಮತ್ತು ತನಿಖೆಗೆ ಪೂರ್ಣ ಸಹಕಾರ ನೀಡಬೇಕು ಎಂದು ರಾಜೀವ್ ಕುಮಾರ್ ಅವರಿಗೆ ಸೂಚಿಸಿದರು. ಇದೇ ವೇಳೆ ರಾಜೀವ್ ಕುಮಾರ್  ರನ್ನು ಬಂಧಿಸದಂತೆ ಸಿಬಿಐಗೆ ಸಿಜೆಐ ಸೂಚನೆ ನೀಡಿದ್ದಾರೆ. 

ಇನ್ನು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಕಮಿಷನರ್ ಕುಮಾರ್‌ ದಾಖಲಸಿರುವ ನ್ಯಾಯಾಂಗ ನಿಂದನೆ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿದ್ದು, ಫೆಬ್ರವರಿ 20ರೊಳಗೆ ಉತ್ತರಿಸುವಂತೆ ಸೂಚಿಸಿದ್ದು, ಅಂದೇ ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಜೊತೆಗೆ ಫೆಬ್ರವರಿ 20ರಂದು ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸಮನ್ಸ್ ಜಾರಿ ಮಾಡಿದೆ. 

ಕೋಲ್ಕತ ಪೊಲೀಸ್ ಕಮಿಷನರ್‌ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲೇಬೇಕು. ಆದರೆ ಸಿಬಿಐ ಅವರನ್ನು ಬಂಧಿಸುವಂತಿಲ್ಲ ಎಂದು ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದ್ದು. ಶಿಲ್ಲಾಂಗ್‌ನ ತಟಸ್ಥ ಸ್ಥಳದಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ರಾಜೀವ್ ಕುಮಾರ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. 

ಒಟ್ಟಿನಲ್ಲಿ ಸಿಬಿಐ ಮತ್ತು ಕೇಂದ್ರ ವಿರುದ್ಧ ಸಮರಕ್ಕೆ ಇಳಿದಿದ್ದ ಮಮತಾ ಬ್ಯಾನರ್ಜಿಗೆ ತೀವ್ರ ಹಿನ್ನಡೆಯಾಗಿದೆ. ಭ್ರಷ್ಟ ಅಧಿಕಾರಿಯೊಬ್ಬನ ರಕ್ಷಣೆ ಧಾವಿಸಿ ಬ್ಯಾನರ್ಜಿ ಎಡವಟ್ಟು ಮಾಡಿಕೊಂಡಿದ್ದಾರೆ.

ಇದೀಗ ಮಮತಾ ಬ್ಯಾನರ್ಜಿ ಬೆಂಬಲಕ್ಕೆ ಧಾವಿಸಿದ್ದ ಕರ್ನಾಟಕದ ನಾಯಕರೂ ಸೇರಿದಂತೆ ದೇಶದ ಇತರ ನಾಯಕರು ಜನತೆ ಉತ್ತರಿಸಬೇಕಾಗಿದೆ.

Advertisements

Leave a Reply

%d bloggers like this: