ನಿಖಿಲ್ ಮಂಡ್ಯದವರೆ..? ಸುಮಲತಾ ಮಂಡ್ಯದ ಗೌಡ್ತಿ ಅಲ್ಲವೆಂದ ಶ್ರೀಕಂಠೇ ಗೌಡರಿಗೆ ಫುಲ್ ಕ್ಲಾಸ್

ಜೆಡಿಎಸ್ ನಾಯಕರ ಎಡವಟ್ಟುಗಳ ಸರಮಾಲೆ ಮತ್ತೆ ಮುಂದುವರಿದಿದೆ. ಹಲವಾರು ವರ್ಷಗಳ ಹಿಂದೆ ನಟಿ ರಮ್ಯ ಅವರ ಕುಟುಂಬ ನಕ್ಷೆಗೆ ಕೈ ಹಾಕಿದ ಜೆಡಿಎಸ್ ನಾಯಕರೊಬ್ಬರು ಹಿಗ್ಗಾ ಮುಗ್ಗಾ ಜಾಡಿಸಿಕೊಂಡಿದ್ದರು.

ಇದೀಗ ಅದೇ ಪಕ್ಷದ ಕೆ.ಟಿ.ಶ್ರೀಕಂಠೇಗೌಡರ ಸರದಿ. ಸುಮಲತಾ ಅಂಬರೀಶ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಅನ್ನುವ ಸುದ್ದಿಯಿಂದ ನಿದ್ದೆ ಕಳೆದುಕೊಂಡಿರುವ ನಾಯಕರು ಬಾಯಿಗೆ ಬಂದಂತೆ ಮಾತನಾಡಲಾರಂಭಿಸಿದ್ದಾರೆ.  

ಕೆ.ಟಿ.ಶ್ರೀಕಂಠೇಗೌಡರು ಒಂದು ಹೆಜ್ಜೆ ಮುಂದೆ ಹೋಗಿ ಸುಮಲತಾ ಮಂಡ್ಯದ ಗೌಡ್ತಿ ಅಲ್ಲ ಅನ್ನುವ ಮಾತು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

ನನ್ನ ಮನೆಗೆ ರಾಜಕಾರಣ ಕೊನೆಯಾಗಲೆಂದು ಅಂಬರೀಶ್ ಅವರು ಬದುಕಿದ್ದಾಗ ಸ್ಪಷ್ಟವಾಗಿ ಹೇಳಿದ್ದಾರೆ. ಸುಮಲತಾ ಎಂದೂ ಮಂಡ್ಯದ ಗೌಡ್ತಿ ಅಲ್ಲ, ಆಂಧ್ರ ಪ್ರದೇಶದ ಗೌಡ್ತಿ. ರಮ್ಯಾ ಅವರು ಎಷ್ಟರ ಮಟ್ಟಕ್ಕೆ ನಮ್ಮ ಕೆಲಸ ಮಾಡಿಕೊಟ್ಟರು ಎಂದು ನೋಡಿ ಆಗಿದೆ ಎಂದು ಸೋಮವಾರ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಹೇಳಿದ್ದರು.

ಅಂಬರೀಶ್ ಕಡೆ ದಿನಗಳಲ್ಲಿ ಮಂಡ್ಯದಿಂದ ಏಕೆ ಚುನಾವಣೆಗೆ ನಿಲ್ಲಲಿಲ್ಲ? ಜನ ಸೋಲಿಸುತ್ತಾರೆ ಎಂದು ಅಂಬಿಗೆ ಚೆನ್ನಾಗಿಯೇ ಗೊತ್ತಿತ್ತು. ಅದಕ್ಕೆ ಅಂಬಿ ಕ್ಷೇತ್ರಕ್ಕೆ ಬರಲಿಲ್ಲ. ರಾಜಕಾರಣ ಹುಡುಗಾಟ ಅಲ್ಲ. ಜನರ ನೋವಿಗೆ ಸ್ಪಂದಿಸುವವರು ನಮಗೆ ಬೇಕು. ಜನಪ್ರತಿನಿಧಿಗಳ ಆಯ್ಕೆ ವಿಚಾರದಲ್ಲಿ ಮಂಡ್ಯ ಜನ ಸಾಕಷ್ಟು ನೋವು ಉಂಡಿದ್ದಾರೆ. ಎಲ್ಲಿಯೋ ಕುಳಿತು ಸ್ಪರ್ಧೆ ಮಾಡುತ್ತೇನೆ ಅನ್ನುವವರನ್ನ ಮಂಡ್ಯದ ಜನ ಗೆಲ್ಲಿಸುವುದಿಲ್ಲ ಎಂದು ಮಾತು ಮುಂದುವರಿಸಿದ್ದಾರೆ.

ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಅಂಬಿ ಅಭಿಮಾನಿಗಳು ಮಾತ್ರವಲ್ಲ, ಮಂಡ್ಯದ ಜನ ಸಿಡಿದು ನಿಂತಿದ್ದಾರೆ. ಸಾಮಾಜಿಕ ಜಾಲತಾಣವನ್ನು ಫಿನಾಯಿಲ್ ಹಾಕಿ ತೊಳೆಯುವ ಮಟ್ಟಿಗೆ ಜನ ಶ್ರೀಕಂಠೇಗೌಡರಿಗೆ ಉಗಿದಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದರೆ ಕರೆಗಳಿಂದ ಬೇಸತ್ತ ಶ್ರೀಕಂಠೇಗೌಡರು ಮೊಬೈಲ್ ಸ್ವಿಚ್​ ಆಫ್ ಮಾಡಿದ್ದಾರೆ.

ಅದರಲ್ಲೂ ಅಂಬಿ ಅಭಿಮಾನಿಗಳು ಎತ್ತಿದ ಪ್ರಶ್ನೆಯಲ್ಲಿ ಗಮನ ಸೆಳೆದದ್ದು ಈ ಪ್ರಶ್ನೆ.

ನಿಖಿಲ್ ಕುಮಾರಸ್ವಾಮಿ ಮಂಡ್ಯದವರೆ? ಭವಾನಿ ಮೈಸೂರಿನವರಲ್ಲವೇ. ಅನಿತಾ ಕುಮಾರಸ್ವಾಮಿ ಚಿಕ್ಕಬಳ್ಳಾಪುರದವರಲ್ಲವೇ? ಈಗ ನಿಖಿಲ್‌ಕುಮಾರ್ ಮಂಡ್ಯದಿಂದ ಸ್ಪರ್ಧಿಸಲು ಅರ್ಥವಿದೆ ಅನ್ನುತ್ತಿರುವ ನೀವು ಇದಕ್ಕೆ ಮೊದಲು ಉತ್ತರಿಸಿ ಅಂದಿದ್ದಾರೆ.

ಹೌದಲ್ವ… ಸುಮಲತಾ ಮಂಡ್ಯದ ಗೌಡ್ತಿ ಅಲ್ಲ ಅನ್ನುವುದಾದರೆ ನಿಖಿಲ್ ಮಂಡ್ಯಕ್ಕೆ ಬರಲು ಹೇಗೆ ಸಾಧ್ಯ, ಭವಾನಿ ಹಾಸನ ಜಿಲ್ಲಾ ಪಂಚಾಯತ್ ಚುನಾವಣೆಗೆ ಕಣಕ್ಕೆ ಇಳಿದಿರುವುದು ಸರಿಯೇ, ಅನಿತಾ ಕುಮಾರಸ್ವಾಮಿ ರಾಮನಗರಕ್ಕೆ ಹೋಗಿದ್ಯಾಕೆ..ಉತ್ತರ ಬೇಕಲ್ವ.

Advertisements

One Comment on “ನಿಖಿಲ್ ಮಂಡ್ಯದವರೆ..? ಸುಮಲತಾ ಮಂಡ್ಯದ ಗೌಡ್ತಿ ಅಲ್ಲವೆಂದ ಶ್ರೀಕಂಠೇ ಗೌಡರಿಗೆ ಫುಲ್ ಕ್ಲಾಸ್

  1. Pingback: ನಾನು ಕನ್ನಡದವಳು, ಕರ್ನಾಟಕದವಳು : ಅನಿತಾ ಕುಮಾರಸ್ವಾಮಿ :ಪತಿ ಪತ್ನಿಯ ಹೇಳಿಕೆಗೆ ತಾಳೆಯೇ ಇಲ್ಲ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: