Advertisements

ಮಮತಾ V/S ಸಿಬಿಐ : ರಾಜೀವ್ ಕುಮಾರ್ ಐಪಿಎಸ್ ಯಾರು ಗೊತ್ತಾ…?

ರೋಸ್ ವ್ಯಾಲಿ ಹಾಗೂ ಶಾರದಾ ಚಿಟ್ ಫಂಡ್ ಹಗರಣದ ಕುರಿತಂತೆ ಸಿಬಿಐ ನಡೆಸುತ್ತಿದ್ದ ತನಿಖೆಗೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರವೇ ಅಡ್ಡಿಯಾಗಿ ಕೂತಿದೆ. ಸಾವಿರಾರು ಜನರ ಕೋಟಿ ಕೋಟಿ ಹಣವನ್ನು ನುಂಗಿದ ಮಂದಿಯನ್ನು ಶಿಕ್ಷಿಸಬೇಕಾದ ರಾಜ್ಯ ಸರ್ಕಾರ ಭ್ರಷ್ಟರ ರಕ್ಷಣೆಗೆ ಮುಂದಾಗಿದೆ. ಹೂಡಿಕೆದಾರರ ಹಿತ ಕಾಯಬೇಕಾಗಿದ್ದ ಮಮತಾ ಬ್ಯಾನರ್ಜಿ, ಒಬ್ಬ ಪೊಲೀಸ್ ಅಧಿಕಾರಿ ಸಲುವಾಗಿ ಬೀದಿಗೆ ಬಂದಿದ್ದಾರೆ.

ಹಾಗಾದರೆ ಮಮತಾ ಬ್ಯಾನರ್ಜಿ ರಕ್ಷಿಸಲು ಮುಂದಾಗಿರುವ ರಾಜೀವ್ ಕುಮಾರ್ ಯಾರು ಗೊತ್ತಾ…

ರಾಜೀವ್ ಕುಮಾರ್ 1989ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಕೋಲ್ಕತ್ತಾ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ. 2016ರಲ್ಲಿ ಇವರನ್ನು ಕೋಲ್ಕತ್ತಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಈ ಹಿಂದೆ ರಾಜೀವ್ ಕುಮಾರ್ ಬಿದಾ ನಗರ್ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು. ಜೊತೆಗೆ ಕೋಲ್ಕತ್ತಾ ಪೊಲೀಸ್ ಕೈ ಕೆಳಗಡೆ ಕಾರ್ಯ ನಿರ್ವಹಿಸುತ್ತಿದ್ದ STF ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದರು.

Special Investigation Team ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ರೋಸ್ ವ್ಯಾಲಿ ಹಾಗೂ ಶಾರದಾ ಚಿಟ್ ಫಂಡ್ ಹಗರಣ ಕುರಿತ ತನಿಖೆಯ ನೇತೃತ್ವ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಹಗರಣ ಕುರಿತಂತೆ ಹಲವಾರು ಕಡತಗಳು ನಾಪತ್ತೆಯಾಗಿತ್ತು. ಈ ಕಾರಣಕ್ಕಾಗಿ ಸಿಬಿಐ ರಾಜೀವ್ ಕುಮಾರ್ ಅವರನ್ನು ವಿಚಾರಿಸಲು ಬಯಸಿದೆ. ಈ ಸಲುವಾಗಿ  ಈ ಹಿಂದೆ ಹಲವು ಬಾರಿ ಸಿಬಿಐ ನೋಟೀಸ್ ಜಾರಿ ಮಾಡಿತ್ತು. ಜೊತೆಗೆ SIT ತನಿಖೆ ಸಂದರ್ಭದಲ್ಲಿನ ಕಡತಗಳನ್ನು ಹಸ್ತಾಂತರಿಸುವಂತೆ ಸೂಚಿಸಿತ್ತು.

ಆದರೆ ಸಿಬಿಐ ನೋಟೀಸ್ ಗೆ ಉತ್ತರಿಸಿದರೆ ತಪ್ಪಿಸಿಕೊಳ್ಳುತ್ತಿರುವ ರಾಜೀವ್ ಕುಮಾರ್ SIT ತನಿಖೆ ಸಂದರ್ಭದಲ್ಲಿನ ಕಡತಗಳನ್ನು ಕೂಡಾ ಹಸ್ತಾಂತರಿಸಿಲ್ಲವಂತೆ.

Advertisements

Leave a Reply

%d bloggers like this: