ದೇಶ ಭಕ್ತರೇ ತಟ್ಟಿ ಚಪ್ಪಾಳೆ.. ಹೊಡೆಯಿರಿ ಶಿಳ್ಳೆ.. ಮಲ್ಯ ಪ್ರಕರಣದಲ್ಲಿ ಸಿಕ್ಸರ್ ಬಾರಿಸಿದ ಭಾರತ

ಭಾರತದ ಬ್ಯಾಂಕು ಗಳಿಗೆ ಬಹುಕೋಟಿ ಸಾಲ ಪಡೆದು ವಂಚಿಸಿ ದೇಶ ಬಿಟ್ಟು ಪರಾರಿಯಾಗಿ ಬ್ರಿಟನ್‌ನಲ್ಲಿ ಆಶ್ರಯ ಪಡೆದಿದ್ದ ಮದ್ಯದ ದೊರೆ ವಿಜಯ್‌ ಮಲ್ಯನ ಗಡಿಬಾರಿಗೆ ಬ್ರಿಟನ್ ಸರ್ಕಾರ ಅಸ್ತು ಅಂದಿದೆ.

ಈ ಮೂಲಕ ವಂಚಕ ಮಲ್ಯನನ್ನು ಭಾರತಕ್ಕೆ ಕರೆತರುವ ಪ್ರಯತ್ನದಲ್ಲಿ ದೊಡ್ಡ ಯಶಸ್ಸು ಸಿಕ್ಕಿದೆ.

ಮಲ್ಯ ಹಸ್ತಾಂತರಕ್ಕೆ ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್‌ ಜಾವೆದ್‌ ಅನುಮತಿ ನೀಡಿದ್ದು, ಬ್ರಿಟನ್ ಗೃಹ ಇಲಾಖೆ ಮಲ್ಯ ಹಸ್ತಾಂತರ ಸಂಬಂಧದ ಎಲ್ಲಾ ದಾಖಲೆಗಳಿಗೆ ಸೋಮವಾರ ಸಹಿ ಮಾಡಿದೆ.

ಕಳೆದ ಡಿಸೆಂಬರ್‌ನಲ್ಲಿ ವೆಸ್‌ ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಜಯ್‌ ಮಲ್ಯ ಹಸ್ತಾಂತರಕ್ಕೆ ತೀರ್ಪು ನೀಡಿತ್ತು.

ಗೃಹ ಇಲಾಖೆ ಕಾರ್ಯದರ್ಶಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶ ಎಮ್ಮ ಆರ್ಬುಥನ್‌ನಾಟ್‌ ತಮ್ಮ ಆದೇಶದಲ್ಲಿ ಸೂಚಿಸಿದ್ದರು.

ಬ್ಯಾಂಕ್ ವಂಚನೆ ಸಂಬಂಧ ವಿಚಾರಣೆ ಎದುರಿಸಲು ಭಾರತಕ್ಕೆ ಹಸ್ತಾಂತರದ ಪರವಾಗಿ ಲಂಡನ್ ನ್ಯಾಯಾಲಯವು ತೀರ್ಪುನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಆದರೆ ಮಲ್ಯ ಈ ಸಂಬಂಧ 14 ದಿನಗಳೊಳಗೆ ಭಾರತಕ್ಕೆ ಗಡಿಪಾರು ಆಗುವುದರ ಕುರಿತಂತೆ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಸಹ ಅವಕಾಶ ಕಲ್ಪಿಸಲಾಗಿದೆ.

ಸದ್ಯ ಗಡಿಪಾರು ಒಪ್ಪಂದ ಕುರಿತ ಕಾರ್ಯವಿಧಾನದಡಿಯಲ್ಲಿ, ಮುಖ್ಯ ಮ್ಯಾಜಿಸ್ಟ್ರೇಟ್ ತೀರ್ಪನ್ನು ಗೃಹ ಕಾರ್ಯದರ್ಶಿಗೆ ಕಳುಹಿಸಲಾಗಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: