Advertisements

ಸುಳ್ಳು ಹೇಳಿದ ಅಮಿತಾಬ್ ಬಚ್ಚನ್ : ಈ ಫೋಟೋ ಅಸಲಿ ಕಥೆ ನಾವು ಹೇಳ್ತಿವಿ

ಮುಗ್ಧ ಮಕ್ಕಳ ಈ ಸೆಲ್ಫಿ ಚಿತ್ರ ಸಾಮಾಜಿಕ ತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅನೇಕ ಸೆಲೆಬ್ರೆಟಿಗಳು ಈ ಚಿತ್ರವನ್ನುತಮ್ಮ ಸಾಮಾಜಿಕ ಜಾಲಖಾತೆಗಳಲ್ಲಿ ಶೇರ್ ಮಾಡುತ್ತಿದ್ದಾರೆ.

ಆರಂಭದಲ್ಲಿ ಹಿರಿಯ ನಟ ಅನುಪಮ್‌ ಖೇರ್‌ ಟ್ವೀಟ್‌ ಮಾಡಿದ್ದರು. ಉತ್ತಮ ಮನಸ್ಸಿನಿಂದ ಉತ್ತಮ ಸಂಗತಿಗಳು ಪ್ರಕಟಗೊಳ್ಳುತ್ತವೆ ಎಂಬರ್ಥದಲ್ಲಿ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ.

ಮಾತ್ರವಲ್ಲದೆ ಖ್ಯಾತ ಫೋಟೋಗ್ರಾಫರ್ ಅತುಲ್ ಕಸ್ಬೇಕರ್ ಕೂಡ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.


ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಮಕ್ಕಳ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬೋಮನ್‌ ಇರಾನಿ, ಸೇರಿ ಮತ್ತಿತರರು ಈ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ.

ಇದೇ ಫೋಟೋವನ್ನು ಟ್ವೀಟ್ ಮಾಡಿದ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌, ಈ ಚಿತ್ರವನ್ನು ಫೋಟೋಶಾಪ್‌ ಮೂಲಕ ತಿರುಚಲಾಗಿದೆ ಎಂದು ಕಮೆಂಟ್ ಮಾಡಿ,. ಬಾಲಕನ ಕೈ ಮತ್ತು ಚಪ್ಪಲಿ ಹಿಡಿದಿರುವ ಕೈಗೂ ವ್ಯತ್ಯಾಸ ಕಂಡು ಬರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಮಿತಾಬ್ ವಿರುದ್ಧ ಜನ ತಿರುಗಿ ಬಿದ್ದರು. ಬಿಗ್ ಬಿ ಅಭಿಪ್ರಾಯಕ್ಕೆ ತೀವ್ರ ವಿರೋಧವೂ ವ್ಯಕ್ತವಾಯ್ತು.
ಕಸ್ಬೇಕರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬಚ್ಚನ್, ‘ಇದು ಫೋಟೋಶಾಪ್ ಮಾಡಿದ ಚಿತ್ರದಂತಿದೆ’ ಎಂದಿದ್ದರು. ಬಾಲಕನ ಕೈಯ್ಯಲ್ಲಿದ್ದ ಸ್ಲಿಪ್ಪರ್ ಆತನ ಕೈಗಿಂತಲೂ ದೊಡ್ಡದಾಗಿದ್ದುದನ್ನು ತೋರಿಸಿ ತಮ್ಮ ವಾದವನ್ನು ಬಚ್ಚನ್ ಸಮರ್ಥಿಸಿಕೊಂಡಿದ್ದರು.

ಇದಕ್ಕೆ ಮತ್ತೆ ಪ್ರತಿಕ್ರಿಯಿಸಿರುವ ಕಸ್ಬೇಕರ್, “ ಮೂವರು ಪೋಸ್ಟ್ ಪ್ರೊಡಕ್ಷನ್ ತಜ್ಞರ ಜತೆ ಚರ್ಚಿಸಿದ್ದೇನೆ. ಈ ಫೋಟೋ ಡಿಜಿಟಲ್ ತಂತ್ರಜ್ಞಾನದ ಮೂಲಕ ತಿರುಚಿದ್ದಲ್ಲ, ಇದು ಒರಿಜಿನಲ್ ಫೋಟೋ” ಎಂದು ಪ್ರತಿಪಾದಿಸಿದರು.


ಸ್ಮಾರ್ಟ್‌ಫೋನ್‌ ಮೂಲಕ ಈ ಚಿತ್ರವನ್ನು ದೊಡ್ಡದಾಗಿಸಿ ನೋಡುವಾಗ ಚಿತ್ರದ ಗುಣಮಟ್ಟ ಕುಸಿಯುವುದರಿಂದ ಚಪ್ಪಲಿ ಬಾಲಕ ಕೈಗಿಂತ ದೊಡ್ಡದಾಗಿರುವಂತೆ ಕಾಣುತ್ತದೆ’ ಎಂದು ಅವರು ವಾದಿಸಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಫೆಬ್ರವರಿ 2ರಂದು 11:22ರ ವೇಳೆಗೆ ಗೋಲ್ಡ್ ಕುಮಾರ್ ಎಂಬವರು ಇದನ್ನು ಶೇರ್ ಮಾಡಿಕೊಂಡಿದ್ದರು. ಬಳಿಕ ಆ ಫೋಟೋ 1000ಕ್ಕೂ ಹೆಚ್ಚು ಬಾರಿ ಶೇರ್ ಆಯಿತು. ಇತರ ಹಲವು ಫೇಸ್‌ಬುಕ್ ಪುಟಗಳಲ್ಲಿ ಸೆಲೆಬ್ರಿಟಿಗಳು ಕೂಡ ಫೋಟೋವನ್ನು ಶೇರ್‌ ಮಾಡಿಕೊಂಡರು.

ಇನ್ನು ಗೂಗಲ್‌ನ ರಿವರ್ಸ್‌ ಇಮೇಜ್ ಸರ್ಚ್‌ ನಲ್ಲಿ ಹುಡುಕಿದಾಗ, ಫೆಬ್ರವರಿ 2ಕ್ಕೆ ಮುನ್ನ ಈ ಚಿತ್ರ ಇಂಟರ್‌ನೆಟ್‌ನಲ್ಲಿ ಇರಲಿಲ್ಲ ಎಂದು ಗೊತ್ತಾಗಿದೆ. ಅಲ್ಲಿಗೆ ಅದು ಗೋಲ್ಡ್ ಕುಮಾರ್ ಎಂಬವರು ಪೋಸ್ಟ್ ಮಾಡಿದ ಒರಿಜಿನಲ್ ಚಿತ್ರವೇ ಎಂಬುದು ಪಕ್ಕಾ ಆಗಿದೆ.

ನಾಳೆಯಿಂದ ಮಾಧ್ಯಮಗಳು ಗೋಲ್ಡ್ ಕುಮಾರ್ ಬೆನ್ನು ಬೀಳಲಿದೆ.


ಇದೇ ಫೋಟೋವನ್ನು ಟ್ವೀಟ್ ಮಾಡಿದ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌,
ಈ ಚಿತ್ರವನ್ನು ಫೋಟೋಶಾಪ್‌ ಮೂಲಕ ತಿರುಚಲಾಗಿದೆ ಎಂದು ಕಮೆಂಟ್ ಮಾಡಿ,. ಬಾಲಕನ ಕೈ ಮತ್ತು ಚಪ್ಪಲಿ ಹಿಡಿದಿರುವ ಕೈಗೂ ವ್ಯತ್ಯಾಸ ಕಂಡು ಬರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಮಿತಾಬ್ ವಿರುದ್ಧ ಜನ ತಿರುಗಿ ಬಿದ್ದರು. ಬಿಗ್ ಬಿ ಅಭಿಪ್ರಾಯಕ್ಕೆ ತೀವ್ರ ವಿರೋಧವೂ ವ್ಯಕ್ತವಾಯ್ತು.
ಕಸ್ಬೇಕರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬಚ್ಚನ್, ‘ಇದು ಫೋಟೋಶಾಪ್ ಮಾಡಿದ ಚಿತ್ರದಂತಿದೆ’ ಎಂದಿದ್ದರು. ಬಾಲಕನ ಕೈಯ್ಯಲ್ಲಿದ್ದ ಸ್ಲಿಪ್ಪರ್ ಆತನ ಕೈಗಿಂತಲೂ ದೊಡ್ಡದಾಗಿದ್ದುದನ್ನು ತೋರಿಸಿ ತಮ್ಮ ವಾದವನ್ನು ಬಚ್ಚನ್ ಸಮರ್ಥಿಸಿಕೊಂಡಿದ್ದರು.
ಇದಕ್ಕೆ ಮತ್ತೆ ಪ್ರತಿಕ್ರಿಯಿಸಿರುವ ಕಸ್ಬೇಕರ್, “ ಮೂವರು ಪೋಸ್ಟ್ ಪ್ರೊಡಕ್ಷನ್ ತಜ್ಞರ ಜತೆ ಚರ್ಚಿಸಿದ್ದೇನೆ. ಈ ಫೋಟೋ ಡಿಜಿಟಲ್ ತಂತ್ರಜ್ಞಾನದ ಮೂಲಕ ತಿರುಚಿದ್ದಲ್ಲ, ಇದು ಒರಿಜಿನಲ್ ಫೋಟೋ” ಎಂದು ಪ್ರತಿಪಾದಿಸಿದರು.
ಸ್ಮಾರ್ಟ್‌ಫೋನ್‌ ಮೂಲಕ ಈ ಚಿತ್ರವನ್ನು ದೊಡ್ಡದಾಗಿಸಿ ನೋಡುವಾಗ ಚಿತ್ರದ ಗುಣಮಟ್ಟ ಕುಸಿಯುವುದರಿಂದ ಚಪ್ಪಲಿ ಬಾಲಕ ಕೈಗಿಂತ ದೊಡ್ಡದಾಗಿರುವಂತೆ ಕಾಣುತ್ತದೆ’ ಎಂದು ಅವರು ವಾದಿಸಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ ಫೆಬ್ರವರಿ 2ರಂದು 11:22ರ ವೇಳೆಗೆ ಗೋಲ್ಡ್ ಕುಮಾರ್ ಎಂಬವರು ಇದನ್ನು ಶೇರ್ ಮಾಡಿಕೊಂಡಿದ್ದರು. ಬಳಿಕ ಆ ಫೋಟೋ 1000ಕ್ಕೂ ಹೆಚ್ಚು ಬಾರಿ ಶೇರ್ ಆಯಿತು. ಇತರ ಹಲವು ಫೇಸ್‌ಬುಕ್ ಪುಟಗಳಲ್ಲಿ ಸೆಲೆಬ್ರಿಟಿಗಳು ಕೂಡ ಫೋಟೋವನ್ನು ಶೇರ್‌ ಮಾಡಿಕೊಂಡರು.
ಇನ್ನು ಗೂಗಲ್‌ನ ರಿವರ್ಸ್‌ ಇಮೇಜ್ ಸರ್ಚ್‌ ನಲ್ಲಿ ಹುಡುಕಿದಾಗ, ಫೆಬ್ರವರಿ 2ಕ್ಕೆ ಮುನ್ನ ಈ ಚಿತ್ರ ಇಂಟರ್‌ನೆಟ್‌ನಲ್ಲಿ ಇರಲಿಲ್ಲ ಎಂದು ಗೊತ್ತಾಗಿದೆ. ಅಲ್ಲಿಗೆ ಅದು ಗೋಲ್ಡ್ ಕುಮಾರ್ ಎಂಬವರು ಪೋಸ್ಟ್ ಮಾಡಿದ ಒರಿಜಿನಲ್ ಚಿತ್ರವೇ ಎಂಬುದು ಪಕ್ಕಾ ಆಗಿದೆ.
ನಾಳೆಯಿಂದ ಮಾಧ್ಯಮಗಳು ಗೋಲ್ಡ್ ಕುಮಾರ್ ಬೆನ್ನು ಬೀಳಲಿದೆ.

Advertisements

Leave a Reply

%d bloggers like this: