ಒಬ್ಬ ಭ್ರಷ್ಟ ಅಧಿಕಾರಿಯ ರಕ್ಷಣೆಗೆ ಮಮತಾ ರಾಜಕೀಯದಲ್ಲಿ ಕೈ ಜೋಡಿಸಿದ ಖಾಕಿ ಪಡೆ

ಬಹುಕೋಟಿ ಹಗರಣದ ತನಿಖೆಗೆ ಅಸಹಕಾರ ಮತ್ತು ವಿಳಂಬ ಅನುಸರಿಸುತ್ತಿರುವ ಕೋಲ್ಕತ್ತಾ ಪೊಲೀಸ್ ಆಯುಕ್ತರನ್ನು ವಿಚಾರಿಸಲು ತೆರಳಿದ ಸಿಬಿಐ ಅಧಿಕಾರಿಗಳನ್ನು ತಡೆದ ಪೊಲೀಸ್ ಪಡೆ ಸಿಬಿಐ ಅಧಿಕಾರಿಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವ ಮೂಲಕ ಇತಿಹಾಸ ಬರೆದಿದೆ.

ಸಿಬಿಐ ಅಧಿಕಾರಿಗಳನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಅಂದರೆ ಅದರ ಹಿಂದೆ ಆಡಳಿತ ಪಕ್ಷದ ಕೈವಾಡ ಇದೆ ಅನ್ನುವುದು ಸ್ಪಷ್ಟ. ಮಾತ್ರವಲ್ಲದೆ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ರಕ್ಷಣೆಗೆ ಪಶ್ಚಿಮ ಬಂಗಾಳದ ಹಿರಿಯ ಪೊಲೀಸ್ ಅಧಿಕಾರಿಗಳು ನಿಂತಿದ್ದಾರೆ ಅನ್ನುವುದು ಸ್ಪಷ್ಟ.

ಪೊಲೀಸ್ ಅಧಿಕಾರಿಗಳು ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುವುದನ್ನು ಬಿಟ್ಟು ಭ್ರಷ್ಟನೊಬ್ಬನನ್ನು ರಕ್ಷಿಸಲು ನಿಂತಿದ್ದು ದುರಂತವೇ ಸರಿ.

ಸಿಬಿಐ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಬೆನ್ನಲ್ಲೇ ಪಶ್ಚಿಮ ಬಂಗಾಳದ ಪೊಲೀಸ್ ಮುಖ್ಯಸ್ಥರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ನಿವಾಸಕ್ಕೆ ಧಾವಿಸಿದರು.

ಇದು ಸಾಕಾಗಲ್ಲ ಅನ್ನುವಂತೆ ಮಮತಾ ಬ್ಯಾನರ್ಜಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಮುಖ್ಯಮಂತ್ರಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಅವರು ಕೂಡಾ ಕೂತಿದ್ದಾರೆ.

ಮಮತಾ ಬ್ಯಾನರ್ಜಿ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಗೊತ್ತಿದ್ದರೂ ಹಿರಿಯ ಪೊಲೀಸ್ ಅಧಿಕಾರಿಗಳು ಧರಣಿ ಸ್ಥಳದಲ್ಲಿ ಕೂತಿದ್ದಾರೆ ಅಂದರೆ ದುರಂತವೇ ಸರಿ.

ಮಾತ್ರವಲ್ಲದೆ ಭ್ರಷ್ಟಚಾರ ಆರೋಪ ಎದುರಿಸುತ್ತಿರುವ ಮತ್ತು ಸಿಬಿಐ ಕಣ್ಣಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಅಧಿಕಾರಿ ರಾಜೀವ್ ಕುಮಾರ್ ಕೂಡಾ ಧರಣಿ ಸ್ಥಳದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ತಪ್ಪು ಮಾಡಿಲ್ಲ ಅಂದರೆ ಇಷ್ಟೊಂದು ಹೈಡ್ರಾಮ ಮಾಡುವ ಅಗತ್ಯವಿರಲಿಲ್ಲ. ತಪ್ಪು ಮಾಡಿಲ್ಲ ಅಂದರೆ ನ್ಯಾಯ ಕೊಡುವ ಸುಪ್ರೀಂಕೋರ್ಟ್ ಇದೆ. ಮಮತಾ ಬ್ಯಾನರ್ಜಿ ಮತ್ತು ಅವರ ಖಾಕಿ ಪಡೆ ಆಡುತ್ತಿರುವ ನಾಟಕ ನೋಡಿದರೆ ಅವರಿಗೆ ನ್ಯಾಯಾಲಯದ ಮೇಲೆ ನಂಬಿಕೆ ಇರುವಂತಿಲ್ಲ.

ಸಿಬಿಐ ತಪ್ಪು ಮಾಡಿದೆ ಅನ್ನುವುದಾದರೆ ಸುಪ್ರೀಂಕೋರ್ಟ್ ಕದ ತಟ್ಟಬೇಕಿತ್ತು, ಅದನ್ನು ಬಿಟ್ಟು ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆದು, ಧರಣಿಯ ನಾಟಕದ ಅಗತ್ಯವಿರಲಿಲ್ಲ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: