Advertisements

ಕುರುಕ್ಷೇತ್ರದಲ್ಲಿ ಹೊಸ ಪಾಠ ಕಲಿತರಂತೆ ದರ್ಶನ್

ಮನೆಯಲ್ಲಿ ಕೂತು ಆಡ್ತಾ ಇದ್ದೀಯಾ…. ನಿಮ್ಮ ಯಾವ ಚಿತ್ರವೂ ರಿಲೀಸ್ ಆಗಿಲ್ಲ ಎಂದು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ ಎಂದು  ಕುರುಕ್ಷೇತ್ರ ಚಿತ್ರ ವಿಳಂಭ ಕುರಿತಂತೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಫಿಲ್ಮಂ ಮ್ಯಾಗಜೀನ್ ಒಂದಕ್ಕೆ ಸಂದರ್ಶನ ನೀಡಿರುವ ಅವರು ನಾನು ಕುರುಕ್ಷೇತ್ರ ಚಿತ್ರಕ್ಕಾಗಿ ನನ್ನ ಎಲ್ಲಾ ಕಮರ್ಷಿಯಲ್ ಚಿತ್ರಗಳನ್ನು ಮುಂದಕ್ಕೆ ತಳ್ಳಿ ಡೇಟ್ ಕೊಟ್ಟೆ. ಅಗಸ್ಟ್ 9ಕ್ಕೆ ಕೆಲಸ ಪ್ರಾರಂಭಿಸಿ, ಜನವರಿ 6ಕ್ಕೆ ಚಿತ್ರ ಮುಗಿಸಿದ್ದೇನೆ. ಚುನಾವಣೆ ಕಾರಣದಿಂದ ಮಾರ್ಚ್ ಮೊದಲ ವಾರದಲ್ಲೇ ಡಬ್ಬಿಂಗ್ ಮುಗಿಸಿಕೊಟ್ಟೆ. ಈಗ ಚಿತ್ರ ಬಿಡುಗಡೆ ಇಷ್ಟೊಂದು ಲೇಟ್ ಯಾಕಾಗುತ್ತಿದೆ ಅನ್ನುವುದೇ ಗೊತ್ತಿಲ್ಲ ಅಂದಿದ್ದಾರೆ.

ಒಂದೂವರೆ ವರ್ಷದಿಂದ ನನ್ನ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ ಎಂದು ನೊಂದು ಹೇಳಿರುವ ದರ್ಶನ್, ಕುರುಕ್ಷೇತ್ರದಿಂದ ಸಾಕಷ್ಟು ಪಾಠ ಕಲಿತೆ ಅಂದಿದ್ದಾರೆ.

ನಿರ್ಮಾಪಕ ಮುನಿರತ್ನ ಅವರ ವೇಗ ನೋಡಿ ನಾನೂ ಅವರ ಸ್ಪೀಡ್ ಗೆ ಹೊಂದಿಕೊಂಡೆ. ಏನೋ ಮಾಡುತ್ತಿದ್ದಾರೆ ಎಂದು ಪುಲ್ ಡೇಟ್ಸ್ ಕೊಟ್ಟೆ. ಈಗ ಚಿತ್ರ ಲೇಟ್ ಆಗುತ್ತಿದೆ. ಇದರಿಂದ ಎಲ್ಲರಿಗೂ ಲಾಸ್ ಆಗುತ್ತಿದೆ ಅನ್ನುವ ಮೂಲಕ ಕುರುಕ್ಷೇತ್ರದಿಂದ ಕಲಿತ ಪಾಠವನ್ನು ನೋವಿನಿಂದ ವಿವರಿಸಿದ್ದಾರೆ.

ಈ ಪಾಠದ ಕಾರಣದಿಂದಲೇ ಗಂಡುಗಲಿ ಮದಕರಿ ನಾಯಕ ಚಿತ್ರ ಮಾಡೋ ಮುನ್ನ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ನಿಮಗೆ 20 ದಿನ ಡೇಟ್ ಕೊಟ್ಟರೆ 10 ದಿನ ಕಮರ್ಷಿಯಲ್ ಚಿತ್ರಕ್ಕೆ ಡೇಟ್ ಕೊಡ್ತೀನಿ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ದರ್ಶನ್ ಹೇಳುವ ಮಾತಿನಲ್ಲಿ ಸತ್ಯಾಂಶವಿದೆ. ದರ್ಶನ್ ಚಿತ್ರ ಬಂದಿಲ್ಲ ಅಂದರೆ ಅವರ ಅಭಿಮಾನಿಗಳಿಗೆ ನೋವಾಗುವುದು ಸಹಜ. ಹೀಗಾಗಿ ಮುಲಾಜಿಲ್ಲದೆ ಅವರು ತಮ್ಮ ನೆಚ್ಚಿನ ನಾಯಕನ್ನು ಪ್ರೀತಿಯಿಂದ ಕೋಪಗೊಂಡು ಹಿಗ್ಗಾ ಮುಗ್ಗಾ ಜಾಡಿಸುತ್ತಾರೆ.

ಸದ್ಯ ಅಭಿಮಾನಿಗಳನ್ನು ಹೇಗೋ ದರ್ಶನ್ ಸಂತೈಸಿದ್ದಾರೆ, ಮುಂದೆ ಹಾಗೇ ಮಾಡುತ್ತಾ ಸಾಗಿದರೆ, ದರ್ಶನ್ ಭವಿಷ್ಯಕ್ಕೂ ಖಂಡಿತಾ ಒಳ್ಳೆಯದಲ್ಲ. ಹೀಗಾಗಿ ಅವರ ಖಡಕ್ಕ್ ನಿರ್ಧಾರಗಳತ್ತ ಮುಖ ಮಾಡಿದ್ದಾರೆ.

ತಾರಕ್ ಚಿತ್ರದ ನಂತ್ರ ದರ್ಶನ್ ಅವರ ಯಾವುದೇ ಚಿತ್ರ ತೆರೆ ಕಂಡಿಲ್ಲ. ಈಗ ಯಜಮಾನ ಬಿಡುಗಡೆಗೆ ಸಿದ್ದವಾಗಿದೆ. ಇದರ ಬೆನ್ನಲ್ಲೇ ಒಡೆಯ ಕೂಡಾ ಸಿದ್ದವಾಗುತ್ತಿದೆ.

ಇದೀಗ ಕುರುಕ್ಷೇತ್ರ ಮತ್ತು ಯಜಮಾನ ಜೊತೆ ಜೊತೆಗೆ ತೆರೆ ಕಾಣುವ ಸಾಧ್ಯತೆಗಳಿದೆ. ಯಜಮಾನ ಚಿತ್ರವನ್ನು ತಡವಾಗಿ ಬಿಡುಗಡೆ ಮಾಡಿ ಅನ್ನುವ ಒತ್ತಡ ಇದೆ ಅನ್ನುವ ಸುದ್ದಿ ಚಂದನವನದಲ್ಲಿದೆ. ಆದರೆ ಯಜಮಾನ ಬರಲಿ ಬಿಡಿ, ಎರಡೂ ಚಿತ್ರದಲ್ಲೂ ದರ್ಶನ್ ಇರ್ತಾರೆ, ಅಲ್ಲಿನ ದರ್ಶನ್ ಬೇರೆ ಅಲ್ಲಿನ ದರ್ಶನ್ ಬೇರೆ ಎಂದು ದರ್ಶನ್ ಮಾತು ಮುಗಿಸಿದ್ದಾರೆ.

Advertisements

Leave a Reply

%d bloggers like this: