Advertisements

ಪ್ರಿಯಾಂಕ ವಾದ್ರಾ ವಿರುದ್ಧ ಮಾತನಾಡಿದ್ದೀರ…ನಾಳೆ ನಿಮ್ಮ ವಿರುದ್ಧ ದೂರು ದಾಖಲು

ಇತ್ತೀಚೆಗಷ್ಟೇ ಸಕ್ರಿಯ ರಾಜಕಾರಣ ಪ್ರವೇಶಿಸಿದ ಪ್ರಿಯಾಂಕಾ ವಾದ್ರಾ ಬಗ್ಗೆ ದುರುದ್ದೇಶಪೂರಿತವಾಗಿ ಕೀಳುಮಟ್ಟದ ಪ್ರಚಾರ ಮಾಡುತ್ತಿರುವವರ ವಿರುದ್ಧ ಕಾಂಗ್ರೆಸ್‌ ಮಹಿಳಾ ಘಟಕ ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಸೋಮವಾರ ಎಫ್.ಐ.ಆರ್‌ ದಾಖಲಿಸಲಿದೆ.

ಈ ಬಗ್ಗೆ  ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್‌ ಟ್ವಿಟರ್‌ ನಲ್ಲಿ ಮಾಹಿತಿ ನೀಡಿದ್ದು,  ನಾನು ದೆಹಲಿಯಲ್ಲಿ ಎಫ್.ಐ.ಆರ್‌ ದಾಖಲಿಸುತ್ತಿದ್ದೇನೆ. ರಾಜ್ಯ ಘಟಕ ಅಧ್ಯಕ್ಷರಿಗೆ ಆಯಾ ರಾಜ್ಯಗಳ ರಾಜಧಾನಿಗಳಲ್ಲಿ ಎಫ್.ಐ.ಆರ್‌ ದಾಖಲಿಸಲು ಸೂಚಿಸಲಾಗಿದೆ ಎಂದಿದ್ದಾರೆ.

ಹಲವು ಬಿಜೆಪಿ ನಾಯಕರು ಪ್ರಿಯಾಂಕಾ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ರಾಜಕೀಯ ಪ್ರವೇಶಿಸುವ ಮಹಿಳೆಯರನ್ನು ಕೀಳಾಗಿ ನಡೆಸಿಕೊಳ್ಳುವ ಪರಿಪಾಠ ನಮ್ಮ ದೇಶದಲ್ಲಿದೆ. ಇದಕ್ಕೆ ಪ್ರಿಯಾಂಕಾ ವಾದ್ರಾ ಕೂಡ ಹೊರತಾಗದೇ ಇದ್ದದ್ದು ಬೇಸರ ತರಿಸಿದೆ. ಹೀಗಾಗಿ ಕಾನೂನು ಮೊರೆ ಹೋಗುತ್ತಿರುವುದಾಗಿ ಸುಶ್ಮಿತಾ ಹೇಳಿದ್ದಾರೆ.

Advertisements

One Comment on “ಪ್ರಿಯಾಂಕ ವಾದ್ರಾ ವಿರುದ್ಧ ಮಾತನಾಡಿದ್ದೀರ…ನಾಳೆ ನಿಮ್ಮ ವಿರುದ್ಧ ದೂರು ದಾಖಲು

  1. Pingback: ಉಗ್ರರ ಅಟ್ಟಹಾಸ : ಮಾಧ್ಯಮಗೋಷ್ಟಿ ರದ್ದುಗೊಳಿಸಿದ ಪ್ರಿಯಾಂಕ ವಾದ್ರಾ – torrentspree

Leave a Reply

%d bloggers like this: