Advertisements

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಮುಗಿ ಬಿದ್ದಾಗ ಅನ್ನಪೂರ್ಣೇಶ್ವರಿ ಠಾಣೆ ಸವಿ ನಿದ್ದೆಯಲ್ಲಿತ್ತು…! `

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಬಂದ ಮೇಲೆ ರಾಜ್ಯದ ಖಾಕಿ ಪಡೆಗಳಿಗೆ ಬಿಸಿ ಮುಟ್ಟಿದ್ದು ಸುಳ್ಳಲ್ಲ. ಬೆಂಗಳೂರು ಮೀಸೆ ತಿರುವಿ ಗಡ್ಡ ಬಿಟ್ಟು ತಿರುಗುತ್ತಿದ್ದ ಪಡ್ಡೆಗಳ ಬಾಲ ಕಟ್ ಆಗಿದೆ.

ಹಾಗಂತ ಎಲ್ಲಾ ಠಾಣೆಗಳು ಕುಮಾರಸ್ವಾಮಿ ಆದೇಶಕ್ಕೆ ಸ್ಪಂದಿಸಿದೆ ಅಂದುಕೊಂಡರೆ ಸುಳ್ಳು. ಅದಕ್ಕೊಂದು ಬೆಸ್ಟ್ ಉದಾಹರಣೆ ನಾವು ಕೊಡ್ತೀವಿ.

ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಓರ್ವ ಪಿಂಪ್‍ನನ್ನು ಬಂಧಿಸಿದ್ದಾರೆ.

ಮಂಡ್ಯ ಮೂಲದ ಪ್ರವೀಣ್ ಬಂಧಿತ ಪಿಂಪ್. ಆರೋಪಿ ಪ್ರವೀಣ್ ನಾಗರಭಾವಿಯ ಬಾಡಿಗೆ ಮನೆಯೊಂದರಲ್ಲಿ ದಂಧೆ ನಡೆಸುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ತಂಡವು ಎಸಿಪಿ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿತ್ತು. ಈ ವೇಳೆ ಪ್ರವೀಣ್ ಬಲೆಗೆ ಬಿದ್ದಿದ್ದಾನೆ.

ಈ ದಾಳಿಯಲ್ಲಿ ಮಾಗಡಿ ಹಾಗೂ ಕುಣಿಗಲ್ ಮೂಲದ ಮೂವರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿ ಪ್ರವೀಣ್‍ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಡಿಸಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗರಬಾವಿ ಇರೋದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಅಂದರೆ ವೇಶ್ಯವಾಟಿಕೆ ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿತ್ತು. ಪೊಲೀಸರ ಕಣ್ಣಿಗೆ ಕಾಣಿಸಿದಂತೆ ಇವರು ವ್ಯವಹಾರ ನಡೆಸಲು ಸಾಧ್ಯವೇ, ಖಂಡಿತಾ ಇಲ್ಲ. ಅವರಿಗೆ ಗೊತ್ತಿರುತ್ತದೆ. ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಗುತ್ತದೆ ಅಂದ ಮೇಲೆ ಸ್ಥಳೀಯ ಠಾಣೆಗೆ ಗೊತ್ತಿಲ್ಲದಿರಲು ಹೇಗೆ ಸಾಧ್ಯ. ( ಹಾಗಿದ್ದ ಮೇಲೆ ಸ್ಥಳೀಯ ಠಾಣೆಗಳ ಅಗತ್ಯವೇನಿದೆ)

ಬೆಂಗಳೂರು ಅನೇಕ ಕಡೆಗಳಲ್ಲಿ ಇದೇ ರೀತಿಯ ದಂಧೆಗಳು ಅವ್ಯಾಹತವಾಗಿ ನಡೆಯುತ್ತಿದೆ. ಆನ್ ಲೈನ್ ಗಳಲ್ಲಿ ಭರ್ಜರಿ ವ್ಯವಹಾರ ಜೋರಾಗಿದೆ. ಪೊಲೀಸರು ಒಂದಿಷ್ಟು ಎಚ್ಚರ ವಹಿಸಿದರೆ ಇವರ ಹೆಡೆ ಮುರಿ ಕಟ್ಟಲು ಸಾಧ್ಯ. ಅದಕ್ಕೆ ಸಿಸಿಬಿ ಅಗತ್ಯವಿಲ್ಲ. ಸ್ಥಳೀಯ ಠಾಣೆಗಳಿಗೆ ಇಲಾಖೆ ಉನ್ನತ ಅಧಿಕಾರಿಗಳು ಬಿಸಿ ಮುಟ್ಟಿಸಬೇಕಷ್ಟೇ.

Advertisements

Leave a Reply

%d bloggers like this: