Advertisements

ಭೂಗತಪಾತಕಿ ರವಿ ಪೂಜಾರಿ ಪೊಲೀಸ್ ವಶಕ್ಕೆ

ಮೋಸ್ಟ್ ವಾಂಟೆಡ್ ಭೂಗತ ಪಾತಕಿ ರವಿ ಪೂಜಾರಿ ಕೊನೆಗೂ ಸೆರೆ ಸಿಕ್ಕಿದಾನೆ.  ರವಿ ಪೂಜಾರಿಯನ್ನು ದಕ್ಷಿಣ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ.

ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾರುವ ರವಿ ಪೂಜಾರಿ ಪೊಲೀಸರ ಮೋಸ್ಟ್ ವಾಂಟೆಂಡ್ ಭೂಗತ ಪಾತಕಿಯಾಗಿದ್ದಾನೆ.

ಈತ ರಿಮೋಟ್ ರೌಡಿಸಂ ನಡೆಸಿದ ಮೊದಲ ಭೂಗತ ಪಾತಕಿ ಎಂಬ ಕುಖ್ಯಾತಿಯೂ ರವಿ ಪೂಜಾರಿಗಿದೆ.  60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿರುವ ರವಿ ಪೂಜಾರಿ ಮೇಲೆ ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿ ಹಲವೆಡೆ ಕೇಸ್ ದಾಖಲಾಗಿವೆ.

ಭೂಗತವಾಗಿದ್ದುಕೊಂಡೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರವಿ ಪೂಜಾರಿಯನ್ನು ಅರೆಸ್ಟ್ ಮಾಡಲು ಭಾರತದ ತನಿಖಾ ಸಂಸ್ಥೆಗಳು ಸೆನೆಗಲ್ ದೇಶದೊಂದಿಗೆ ಸಂಪರ್ಕದಲ್ಲಿದ್ದವು ಎಂದು ತಿಳಿದುಬಂದಿದ್ದು, ಈ ಹಿನ್ನಲೆಯಲ್ಲಿ ಸೆನೆಗಲ್ ಪೊಲೀಸರು ರವಿ ಪೂಜಾರಿಯನ್ನು ವಶಕ್ಕೆ ಪಡೆದಿರಬಹುದು ಎಂದು ಹೇಳಲಾಗುತ್ತಿದೆ.

ಸೆನೆಗಲ್ ಪೊಲೀಸರು ರವಿ ಪೂಜಾರಿಯನ್ನು ವಶಕ್ಕೆ ಪಡೆದಿರುವುದು ಖಚಿತವಾಗಿದ್ದು, ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ರವಿ ಪೂಜಾರಿ ಬಂಧನಕ್ಕೆ ಭಾರತ ಸರ್ಕಾರ ಪಶ್ಚಿಮ ಆಫ್ರಿಕಾ ದೇಶದವಾದ ಸೆನೆಗಲ್ ನೊಂದಿಗೆ ಸಂಪರ್ಕದಲ್ಲಿತ್ತು. ಬಂಧನ ಕುರಿತು ಭಾರತದ ಸರ್ಕಾರಕ್ಕೆ ಸೆನೆಗಲ್ ಸರ್ಕಾರ ಮಾಹಿತಿ ನೀಡಿದೆ ಎನ್ನಲಾಗಿದೆ. ಆದರೆ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ. 

ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾರುವ ರವಿ ಪೂಜಾರಿ ಸಿಸಿಬಿಯ ಹಿಟ್ ಲಿಸ್ಟ್​ನ ಅಗ್ರ ಸಾಲಿನಲ್ಲಿದ್ದನೆನ್ನಲಾಗಿದೆ. ರಿಮೋಟ್ ರೌಡಿಸಂ ನಡೆಸಿದ ಮೊದಲ ಭೂಗತ ಪಾತಕಿ ಎಂಬ ಕುಖ್ಯಾತಿಯೂ ರವಿ ಪೂಜಾರಿಗಿದೆ. ಇಂಟರ್​ಪೋಲ್​ನಿಂದಲೂ ಪೂಜಾರಿ ಬಂಧನಕ್ಕೆ ರೆಡ್ ಕಾರ್ನರ್ ನೋಟೀಸ್ ನೀಡಲಾಗಿತ್ತು.

ಕೆಲ ದಿನಗಳ ಹಿಂದಷ್ಟೇ ಮುಂಬೈ ಪೊಲೀಸರು ರವಿ ಪೂಜಾರಿ ಗ್ಯಾಂಗ್​ನ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು. ಈ ಬಂಧಿತರಲ್ಲಿ ಬೆಂಗಳೂರಿನ ಆಕಾಶ್ ಶೆಟ್ಟಿ ಕೂಡ ಒಬ್ಬ. ಭೂಗತ ಪಾತಕಿಯು ಬಿಲ್ಡರ್ ಒಬ್ಬರಿಗೆ ಫೋನ್​ನಲ್ಲಿ ಬೆದರಿಕೆ ಹಾಕಿದ್ದ. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಆಕಾಶ್ ಶೆಟ್ಟಿಯನ್ನು ಬಂಧಿಸಿದ್ದರು.

ರವಿ ಪೂಜಾರಿಗೆ ನಗರದಲ್ಲಿರುವ ಬಿಲ್ಡರ್ ಗಳ ಬಗ್ಗೆ ಮಾಹಿತಿ ಕೊಡುತ್ತಿದ್ದುದು ಆಕಾಶ್ ಶೆಟ್ಟಿ ಮತ್ತು ವಿಲಿಯಮ್ ರಾಡ್ರಿಕ್ಸ್. ಇದೇ ಕಾರಣಕ್ಕೆ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದ ಪೊಲೀಸರು ಎಂಕೋಕಾ( ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಡಿ ಮೊಕದ್ದಮೆ ದಾಖಲಿಸಿ ಜೈಲಿಗಟ್ಟಿದ್ದರು.

ಇದೀಗ ಸ್ವತಃ ಅಂಡರ್​ವರ್ಲ್ಡ್ ಡಾನ್ ರವಿ ಪೂಜಾರಿಯೇ ಬಂಧಿತನಾಗಿದ್ಧಾನೆ. 90ರ ದಶಕದಲ್ಲಿ ಭೂಗತಲೋಕದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದ ರವಿ ಪೂಜಾರಿ ದುಬೈನಲ್ಲಿ ಕೂತೇ ಮುಂಬೈ, ಮಂಗಳೂರು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ.

ಈ ಹಿಂದೆ ಕರ್ನಾಟಕದ ಮಾಜಿ ಶಾಸಕ ಅನಿಲ್ ಲಾಡ್ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್, ಸಂಸದ ಡಿಕೆ ಸುರೇಶ್, ಶಿವಸೇನಾ ಸಂಸದರು ಸೇರಿದಂತೆ ಹಲವು ಉದ್ಯಮಿಗಳಿಗೆ ಹಾಗೂ ಚಿತ್ರತಾರೆಯರಿಗೆ ಬೆದರಿಕೆ ಹಾಕಿದ್ದ ಎಂಬ ಬಗ್ಗೆ ಪ್ರಕರಣ ದಾಖಲಾಗಿತ್ತು

ಬುಧವಾರ ಕೂಡಾ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ವಿಜಯನಗರ ಠಾಣೆಗೆ ರವಿ ಪೂಜಾರಿ ವಿರುದ್ಧ ದೂರು ಸಲ್ಲಿಸಿದ್ದರು.

Advertisements

Leave a Reply

%d bloggers like this: