ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯನ್ನು ತರಾಟೆಗೆ ತೆಗೆದುಕೊಂಡ ತಬುರಾವ್

ಅನಂತ್ ಕುಮಾರ್ ಹೆಗಡೆ ಅನ್ನುವ ಕೇಂದ್ರ ಸಚಿವರನ್ನು ಪ್ರಧಾನಿ ನರೇಂದ್ರ ಮೋದಿ ನಿಯಂತ್ರಿಸದಿದ್ದರೆ ಕಷ್ಟ. ತಾನು ಮಾಡಿದ ಸಾಧನೆಗಳನ್ನು ಹೇಳಿಕೊಳ್ಳಬೇಕಾದ ಸಚಿವರು ವೈಯುಕ್ತಿಕ ಟೀಕೆಗಳಿಗೆ ಇಳಿದಿರುವುದು ನಿಜಕ್ಕೂ ದುರಂತವೇ ಸರಿ.

ಅವರೊಬ್ಬರು ಹಿಂದುತ್ವವಾದದ ಪ್ರತಿಪಾದಕರು ಇರಬಹುದು, ಹಾಗಂತ ಭಾರತದ ಪ್ರಜಾಪ್ರಭುತ್ವವನ್ನು ಗೌರವಿಸುವ ಹೊಣೆಗಾರಿಕೆ ಅವರ ಮೇಲಿದೆ. ಯಾಕೆಂದರೆ ಅವರು ಭಾರತೀಯ ಗಣತಂತ್ರವನ್ನು ಗೌರವಿಸುವ ಮತದಾರರಿಂದ ಆಯ್ಕೆಯಾದ ವ್ಯಕ್ತಿ.

ಆದರೆ ಅನಂತ ಕುಮಾರ್ ಹೆಗಡೆ, ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುವ ಭರದಲ್ಲಿ ಅವರ ಪತ್ನಿಯನ್ನು ಎಳೆ ತಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಹೆಗಡೆ ಮಾಡಿಕೊಂಡ ಎಡವಟ್ಟಿಗೆ ದಿನೇಶ್ ಗುಂಡೂರಾವ್ ಪತ್ನಿ ಮುಟ್ಟಿನೋಡಿಕೊಳ್ಳುವಂತ ಪ್ರತಿಕ್ರಿಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಕೊಟ್ಟಿದ್ದಾರೆ.

ದಿನೇಶ್ ಗುಂಡೂರಾವ್ ಅನಂತ್ ಕುಮಾರ್ ಸಾಧನೆ ಕುರಿತಂತೆ ಪ್ರಶ್ನೆ ಮಾಡಿದ್ದರು, ಈ ವೇಳೆ ತಮ್ಮ ಸಾಧನೆ ಹೇಳಿಕೊಳ್ಳಬೇಕಾಗಿದ್ದ ಸಚಿವರು ಎಡವಟ್ಟು ಎಡಬಿಡಂಗಿ ತರ ಆಡಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಮುಸ್ಲಿಂ ಹೆಂಗಸಿನ ಹಿಂದೆ ಓಡಿ ಹೋದವನು ಎಂದೆಲ್ಲಾ ಹೀಯಾಳಿಸಿದ್ದರು.

ಇದಕ್ಕೆ ದಿನೇಶ್ ಪತ್ನಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ನನ್ನ ಪತಿಯನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ಕೆಲ ಬಿಜೆಪಿ ನಾಯಕರು ನನ್ನ ಗುರಿಯಾಗಿಸಿದ್ದಾರೆ.

ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಬಳಿಕ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಸರದಿ ಬಂದಂತೆ ಇದೆ.

ನಾನು ರಾಜಕಾರಿಣಿಯಲ್ಲ, ನಾನು ಖಾಸಗಿ ವ್ಯಕ್ತಿ. ಮೇಲಾಗಿ ಎರಡು ಮಕ್ಕಳ ತಾಯಿ ಹಾಗೂ ಗೃಹಿಣಿ. ನಾನು ಯಾವುದೇ ಪಕ್ಷ ಅಥವಾ ಸಾರ್ವಜನಿಕ ಸ್ಥಾನವನ್ನು ಹೊಂದಿಲ್ಲ ಎಂದು ಹೆಗಡೆಯವರಿಗೆ ಖಾರ ಉತ್ತರ ನೀಡಿದ್ದಾರೆ.

ಜೊತೆಗೆ ಹೌದು ನಾನು ಜನ್ಮತ ಮುಸ್ಲಿಂ, ಆದರೆ ನಾವೆಲ್ಲರೂ ಭಾರತೀಯರಲ್ವ ಎಂದು ಪ್ರಶ್ನಿಸಿದ್ದಾರೆ.

ನಾನು ಬಿಜೆಪಿ ನಾಯಕರ ವಿರುದ್ಧ ವೈಯುಕ್ತಿಕ ಟೀಕೆ ಮಾಡಿಲ್ಲ. ಕೀಳು ಮಟ್ಟದ ರಾಜಕೀಯ ದಾಳವಾಗಿ ನನ್ನ ಬಳಸುತ್ತಿರುವ ಬಗ್ಗೆ ನನಗೆ ಅಸಮಾಧಾನವಿದೆ. ಅವರಿಗೆ ಧೈರ್ಯವಿದ್ದರೆ ನನ್ನ ಪತಿಯನ್ನು ರಾಜಕೀಯವಾಗಿ ಎದುರಿಸಲಿ. ಹೆಂಡತಿಯ ಸೆರಗಿನಲ್ಲಿ ಬಚ್ಚಿಟ್ಟು ಕಲ್ಲು ಹೊಡೆಯಬಾರದು. ಕೇಂದ್ರ ಸಚಿವರಿಗೆ ಇಂಥಹ ಹೇಳಿಕೆ ಭೂಷಣವಲ್ಲ ಎಂದು ತಮ್ಮ ಪ್ರತಿಕೆಯಲ್ಲಿ ಚುಚ್ಚಿದ್ದಾರೆ.

ನಾನು ಟ್ವೀಟ್ ಮೂಲಕ ಹೆಗಡೆ ಅವರಿಗೆ ಪ್ರತಿಕ್ರಿಯಲು ಯತ್ನಿಸಿದೆ. ಅವರು ನನ್ನ ಬ್ಲಾಕ್ ಮಾಡಿದ್ದಾರೆ. ಮಹಿಳೆಯರ ಘನತೆಗೆ ಧಕ್ಕೆ ತರುವ ಅವಹೇಳನಕಾರಿ ಹೇಳಿಕೆಗಳನ್ನು ಮತ್ತು ಕಟುವಾದ ಟೀಕೆಗಳನ್ನು ಮಾಡುವ ಮೂಲಕ ರಾಜ್ಯದ ಖ್ಯಾತಿಗೆ ಅಪಖ್ಯಾತಿ ತರಬೇಡಿ ಎಂದು ನಾನು ಹೆಗಡೆ ಮತ್ತು ಅವರ ಸಹೋದ್ಯೋಗಿಗಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ಇದೇ ಪೋಸ್ಟ್ ನಲ್ಲಿ ತಬು ರಾವ್ ಮನವಿ ಮಾಡಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: