Advertisements

ಗೆದ್ದ ಹಣ ಮಾತ್ರವಲ್ಲ ಮಹಾಮನೆಯಲ್ಲಿ ದುಡಿದ ಹಣವೂ ರೈತರಿಗೆ ಸಂದಾಯ

ಭಾನುವಾರ ರಾತ್ರಿ ಕಿಚ್ಚ ಸುದೀಪ್ ಮಂಗಳ ಹಾಡಿದ ಬಿಗ್ ಬಾಸ್ ಸೀಸನ್ 6ರಲ್ಲಿ ಮಾಡರ್ನ್ ರೈತ ಶಶಿಕುಮಾರ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ.

ಈ ಮೂಲಕ ಬಿಗ್ ಬಾಸ್ ಕಾರ್ಯಕ್ರಮ ಕನ್ನಡಿಗರಲ್ಲಿ ಒಂದಿಷ್ಟು ಭರವಸೆ ಮೂಡಿಸಿದೆ. ಜನ ಸಾಮಾನ್ಯ ಕೂಡಾ ಗೆಲ್ಲಬಹುದು ಅನ್ನುವ ನಿರೀಕ್ಷೆ ಹುಟ್ಟು ಹಾಕಿದೆ.

ಶಶಿಕುಮಾರ್ ರೈತರಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ ಬಳಿಕ ಕೇಳಿ ಬಂದ ಟೀಕೆಗಳು ಒಂದೆರೆಡಲ್ಲ. ಅವರೊಬ್ಬ ಕಾರ್ಪೋರೇಟ್ ರೈತ ಅನ್ನುವ ಮಾತನ್ನು ಅಕ್ಷತಾ ಪಾಂಡವಪುರ ಹೇಳಿದ್ದರು.

ಅದಕ್ಕೆ ಉತ್ತರ ಅನ್ನುವಂತೆ ಶಶಿಕುಮಾರ್ ದೊಡ್ಡ ಭರವಸೆಗಳನ್ನು ಕೊಟ್ಟಿದ್ದಾರೆ.

ನಾನೊಬ್ಬ ಮಧ್ಯಮ ವರ್ಗದಿಂದ ಬಂದವನು, ಆದರೂ ಗೆದ್ದ 50 ಲಕ್ಷ ಮತ್ತು 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಸಿಗುವ ಸಂಭಾವನೆಯನ್ನು ರೈತರ ಏಳಿಗೆಗೆ ತೊಡಕಿಸುವುದಾಗಿ ಹೇಳಿದ್ದಾರೆ.

‘‘ನಾನು ಕಾಮನ್​ ಮ್ಯಾನ್ ಆಗಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟೆ. ಆದ್ರೆ ಮನೆಯಲ್ಲಿ ಯಾವತ್ತೂ ಆ ಪದವನ್ನು ಬಳಸಲಿಲ್ಲ ಅಂತಾ ಅಂದ್ಕೊಂಡಿದ್ದೇನೆ. ನಾನೊಬ್ಬ ಯಂಗ್ ಫಾರ್ಮರ್ ಆಗಿ ಇಲ್ಲಿಗೆ ಬಂದೆ. ಬಿಗ್​ಬಾಸ್​ನಲ್ಲಿ ಗೆದ್ದಿರುವ ₹50 ಲಕ್ಷದ ಜೊತೆಯಲ್ಲಿ, ಈ ಸೀಸನ್​ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಸಿಗುವ ಹಣವನ್ನು ಸೇರಿಸಿ, ಇಷ್ಟೊಂದು ಹಣವನ್ನು ನಾನು ಯಾವತ್ತೂ ನೋಡಿಲ್ಲ. ಹಾಗೆ, ಈಗ ಬಂದಿರೋ ದುಡ್ಡನ್ನು ಸಂಪೂರ್ಣವಾಗಿ ಬೇರೆಯವರಿಗೆ ಕೊಡ್ತೀನಿ ಅಂತಾ ಹೇಳುವುದಿಲ್ಲ. ನನ್ನದು ಮಧ್ಯಮ ವರ್ಗದ ಕುಟುಂಬ. ನಾನೇನು ಸೂಪರ್ ರಿಚ್ ಪರ್ಸನ್ ಅಲ್ಲ. ನನಗೆ 50 ಲಕ್ಷ ರೂಪಾಯಿ ಎಷ್ಟು ದೊಡ್ಡದು ಅನ್ನೋದು ಗೊತ್ತಿದೆ. ಯಾಕೆಂದರೆ ನಾನೇನೂ ಇಲ್ಲದೇ ಈ ಹಂತಕ್ಕೆ ಬಂದಿದ್ದೇನೆ. ಅಲ್ಲದೇ, ಯಾರಿಗಾದರೂ ಒಂದು ಸಾರಿ ಹಣ ಕೊಟ್ರೆ ಒಮ್ಮೆ ಮಾತ್ರ ಉಪಯೋಗ ಆಗುತ್ತೆ. ಹಾಗಾಗಿ ನಾನು ಇರುವ ಹಣದಲ್ಲಿ ನನಗೆ ಗೊತ್ತಿರುವ ಹೊಸ ತಂತ್ರಜ್ಞಾನವನ್ನ ಯುವಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ. ನನ್ನ ಅಧ್ಯಯನದ ಪ್ರಕಾರ ರೈತರಿಗೆ ಹೊಸ ಟೆಕ್ನಾಲಿಜಿಯ ಅಗತ್ಯವಿದೆ. ತಂತ್ರಗಾರಿಕೆಗಳು ತಿಳಿಯದೇ ಕೆಲವಡೆ ಅನ್ನದಾತರು ಎಡವುತ್ತಿದ್ದಾರೆ. ಹಾಗಾಗಿ ಆಕ್ಷೇತ್ರದ ಯುವಕರಿಗೆ ಅಗ್ರಿಕಲ್ಚರ್ ಮತ್ತು ಫಾರ್ಮಿಂಗ್ ಬಗ್ಗೆ ತಿಳಿಸಲು ಹಣವನ್ನು ಉಪಯೋಗಿಸುತ್ತೇನೆ’’

ಅವರು ಭರವಸೆ ನೀಡಿದ್ದಾರೆ ಎಂದು ಕನ್ನಡಿಗರು ಸುಮ್ಮನೆ ಕೂರುವುದಿಲ್ಲ. ಆ ಹಣ ಹೇಗೆ ಬಳಕೆಯಾಗುತ್ತದೆ ಅನ್ನುವುದನ್ನು ನಾವು ಕೂಡಾ ನೋಡುತ್ತೇವೆ.

ಅನ್ನದಾತನ ಮುಖದಲ್ಲಿ ಮಂದಹಾಸ ಮೂಡಿಸಲು ಆ ಹಣ ಬಳಕೆಯಾದರೆ ಇನ್ನೇನು ಬೇಕು.

Advertisements

2 Comments on “ಗೆದ್ದ ಹಣ ಮಾತ್ರವಲ್ಲ ಮಹಾಮನೆಯಲ್ಲಿ ದುಡಿದ ಹಣವೂ ರೈತರಿಗೆ ಸಂದಾಯ

  1. Pingback: ಸೀತಾ ವಲ್ಲಭನಿಗೆ ಕೂಡಿ ಬಂದ ಕಂಕಣ ಬಲ – ರಕ್ಷಿತಾ ಜೊತೆ ಸಪ್ತಪದಿ ತುಳಿಯಲು ಮುಂದಾದ ಜಗನ್ – torrentspree

  2. Pingback: ರಶ್ಮಿTIPS :ಬಿಗ್ ಬಾಸ್ ಗೆಲ್ಲಲು ಮಾಡಬೇಕಾಗಿರುವುದೇನು..? – torrentspree

Leave a Reply

%d bloggers like this: